Headlines

ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ BMTC ಬಸ್! ವಿಡಿಯೋ ನೋಡಿ

ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ BMTC ಬಸ್! ವಿಡಿಯೋ ನೋಡಿ


ಸಂಚಾರ ನಿಯಂತ್ರಕರ ಕೊಠಡಿಗೆ ನುಗ್ಗಿದ ಬಿಎಂಟಿಸಿ ಬಸ್! ವಿಡಿಯೋ ನೋಡಿ

ಬೆಂಗಳೂರು, ಮಾರ್ಚ್ 20: ಚಾಲಕನ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸೊಂದು ಸಂಚಾರ ನಿಯಂತ್ರಕರ ಕೊಠಡಿಗೆ ನುಗ್ಗಿದ ಪೀಣ್ಯ 2ನೇ ಹಂತದಲ್ಲಿ ಬಿಎಂಟಿಸಿ ಡಿಪೋದಲ್ಲಿ ನಡೆದಿದೆ. ಅದೃಷ್ಟವಶಾತ್, ದೊಡ್ಡ ಅವಘಡ ತಪ್ಪಿದೆ. KA 51 AK 4169 ಸಂಖ್ಯೆಯ ಬಿಎಂಟಿಸಿ ಇಲೆಕ್ಟಿಕ್ ಬಸ್ಸು ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ನಿಲ್ಲಿಸಿ ತೆರಳಿದ ಪರಿಣಾಮ, ಬಸ್ ಸ್ವಯಂಚಾಲಿತವಾಗಿ ಮುಂದೆ ಚಲಿಸಿ ಡಿಪೋ ಒಳಗೆ ನುಗ್ಗಿದೆ. ಈ ವೇಳೆ ಡಿಪೋದ ಸಂಚಾರ ನಿಯಂತ್ರಕರ ಕೊಠಡಿಗೆ ಬಸ್ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ ಪರಿಣಾಮ ನಾಲ್ಕು ಬೈಕ್‌ಗಳು ಜಖಂ ಆಗಿವೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ಗುರುತಿಸಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *