ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್

ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್


ಬೆಂಗಳೂರು, ಫೆಬ್ರವರಿ 11: ಶಕ್ತಿ ಯೋಜನೆ (ಶಕ್ತಿ ಯೋಜನೆ) ಆರಂಭವಾದ ಮೇಲೆ ಬಿಎಂಟಿಸಿ ಬಸ್ (ಬಿಎಂಟಿಸಿ ಬಸ್) ಗಳಲ್ಲಿ ಪುರುಷರಿಗೆ, ಶಾಲಾ ಕಾಲೇಜಿಗೆ ಹೋಗುವ ಸೀಟ್ ಸಿಗುತ್ತಿಲ್ಲ ಎಂಬ ಅಸಮಾಧಾನವಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಹೊಸ ಬಸ್‌ಗಳು ಬರುತ್ತಿವೆ, ಇದಕ್ಕೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

ಶಕ್ತಿ ಯೋಜನೆ ಪ್ರಾರಂಭವಾದ ಮೇಲೆ ಬಿಎಂಟಿಸಿ ಬಸ್ಸುಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ. ಸದ್ಯ ಬಿಎಂಟಿಸಿಯಲ್ಲಿ 6800ಕ್ಕೂ ಹೆಚ್ಚು ಬಸ್‌ಗಳು ಸಾಲುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ PM-EDRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಇಸಿ ಮತ್ತು ನಾನ್ ಎಸಿ ಇಟಿಕ್ಲಿಕ್ ಬಸ್‌ಗಳು ಬರಲಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆಕ್ಸಿಡೆಂಟ್!

ಮೊದಲ ಹಂತದಲ್ಲಿ SIISL ಸಂಸ್ಥೆ ಟೆಂಡರ್ ಪ್ರಕ್ರಿಯೆಯ ಮೂಲಕ, ಏಕಾ ಮೊಬಿಲಿಟಿ ಗೆ 1750 ಬಸ್‌ಗಳನ್ನು ಹಂಚಿಕೆ ಮಾಡಲು ಮುಂದಾಗಿದೆ. ಏಕಾ ಮೊಬಿಲಿಟಿಗೆ ಸಿಐಎಸ್ಎಲ್ ಕಂಪನಿ ಲೆಟರ್ ಆಫ್ ಇನ್ಫರ್ಮೇಷನ್ ಆಫ್ ಕ್ವಾಂಟಿಟಿ ಕೂಡ ನೀಡಿದೆ.

ಇನ್ನು 1750 ಹೊಸ ಬಸ್ಸುಗಳಿಂದ ಬಿಎಂಟಿಸಿಯ ಹಳೆಯ ಬಸ್ಸುಗಳಿಗೆ ಮುಕ್ತಿ ಸಿಗಲಿದೆ. ಸಾಮಾನ್ಯವಾಗಿ ಈ ಬಸ್‌ಗಳಲ್ಲಿ ಡ್ರೈವರ್ ಕಂಪನಿ ಕಡೆಯಿಂದ, ಕಂಡಕ್ಟರ್ ಬಿಎಂಟಿಸಿ ಕಡೆಯಿಂದ ಬರುತ್ತಾರೆ. ಒಂದು ಕಿಮೀ 45 ರಿಂದ 50 ರೂ ವೆಚ್ಚದಲ್ಲಿ ಬಿಎಂಟಿಸಿ ಗುತ್ತಿಗೆದಾರ ಕಂಪನಿಗೆ ಹಣ ನೀಡಲಾಗಿದೆ. ಈ ಎಲೆಟಿಕ್ ಬಸ್‌ಗಳು 12 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಯಲ್ಲಿ ಸಂಚಾರ ಮಾಡಲಿವೆ.

ಪಿಎಂ-ಈ-ಡ್ರೈವ್ ಯೋಜನೆ ಅಡಿಯಲ್ಲಿ ದೇಶಕ್ಕೆ 14 ಸಾವಿರ ಎಸಿ ಮತ್ತು ನಾನ್ ಎಸಿ ಇಲೆಕ್ಟಿಕ್ ಬಸ್ಸುಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ಬೆಂಗಳೂರಿಗೆ 4500 ಬಸ್ಸುಗಳು (ಎಸಿ ಮತ್ತು ನಾನ್ ಎಸಿಇಟಿಕ್) ಘೋಷಣೆ ಮಾಡಲಾಗಿದೆ.

ಪ್ರಯಾಣಿಕರು ಹೇಳಿದಷ್ಟು

ಇನ್ನು ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಪ್ರಯಾಣಿಕ ವಸಂತ, ಹೊಸ ಬಸ್ಸುಗಳು ಬರುವುದರಿಂದ ತುಂಬಾ ಸಹಾಯವಾಗುತ್ತದೆ. ಅದೇ ರೀತಿಯ ಮಹಿಳಾ ಪ್ರಯಾಣಿಕರಾದ ಸೌಮ್ಯ ಎನ್ನುವವರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು

ಒಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಬರುತ್ತಿರುವ 1750 ಬಸ್ಸುಗಳಿಂದ ಸಿಲಿಕಾನ್ ಸಿಟಿಯ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *