ಬೊಲಿವಿಯಾ, ಫೆ. 28: ಹೊಸ ಕರೆನ್ಸಿ ನೋಟುಗಳನ್ನು ಸಾಗುತ್ತಿದ್ದ ಬೊಲಿವಿಯನ್ ವಾಯುಪಡೆಗೆ ಸೇರಿದ ಸೇನಾ ಸರಕು ವಿಮಾನವೊಂದು (Cargo Plane) ಪತನಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ವರದಿಆಗಿದೆ. ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ನೇರವಾಗಿ ರಸ್ತೆಯ ಮೇಲೆ ಅಪ್ಪಳಿಸಿದೆ. ಕ್ಷಣಾರ್ಧದಲ್ಲಿ ರಸ್ತೆಯಲ್ಲಿದ್ದ ನೂರಾರು ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಜ್ಜುಗುಜ್ಜಾಗಿದೆ. ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಅವರ ಪ್ರಕಾರ, ಈ ಭೀಕರ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ವಿಮಾನ ಬೊಲಿವಿಯನ್ ವಾಯುಪಡೆಯ ಹಾರ್ಕ್ಯುಲಸ್ ವಿಮಾನವಾಗಿದ್ದು, ಅದು ಕೇಂದ್ರ ಬ್ಯಾಂಕಿನಿಂದ ಇತರ ನಗರಗಳಿಗೆ ಹೊಸ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ನೋಟು ಹೊತ್ತೊಯ್ಯುತ್ತಿದ್ದ ಈ ವಿಮಾನವು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ನೋಟುಗಳ ಕಂತೆಗಳು ಗಾಳಿಯಲ್ಲಿ ಹಾರಿ, ರಸ್ತೆಯಾದ್ಯಂತ ಹರಡಿಕೊಂಡಿದೆ.
🚨 ಬ್ರೇಕಿಂಗ್ ನ್ಯೂಸ್
ಎ #ಬೊಲಿವಿಯನ್ ಹೊಸದಾಗಿ ಮುದ್ರಿತ ನೋಟುಗಳನ್ನು ಸಾಗಿಸುತ್ತಿದ್ದ ಏರ್ ಫೋರ್ಸ್ C-130 ಹರ್ಕ್ಯುಲಸ್ ಕಾರ್ಗೋ ವಿಮಾನವು ಲಾ ಪಾಜ್ಗೆ ಸಮೀಪವಿರುವ ಎಲ್ ಆಲ್ಟೋ ಬಳಿ ಪತನಗೊಂಡಿದೆ.
ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ.#ಎಸ್ಎಸ್ಟಿವಿ #ವಿಲಿಯಂ ಎಸ್ಟ್ #AVFC pic.twitter.com/QS0gogxmYG
— ಐಸ್ ಆನ್ ದಿ ಗ್ಲೋಬ್ (@eyes_globe) ಫೆಬ್ರವರಿ 28, 2026
ಮತ್ತಷ್ಟು ಓದಿ: ‘ಸ್ಟಾಂಡ್ ಆಪ್’ ಕಾಮಿಡಿ; ಟ್ರಂಪ್ ಮುಂದೆ ಶಾಲಾ ಬಾಲಕನಾದ ಪಾಕಿಸ್ತಾನದ ಪ್ರಧಾನಿ
ಒಂದು ಕಡೆ ಸಾವು-ನೋವಿನ ಆರ್ಕ್ರಂದನ ಕೇಳಿಬರುತ್ತಿದೆ, ಮತ್ತೊಂದು ಕಡೆ ರಸ್ತೆಯಲ್ಲಿ ಹಣವನ್ನು ಆರಿಸಲು ಜನರು ಮುಗಿಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಭೀಕರ ದುರಂತದಲ್ಲಿ ಅಪಘಾತದ ನಂತರ, ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:52 am, ಶನಿ, 28 ಫೆಬ್ರವರಿ 26