ಭಾರತೀಯ ಚಿತ್ರರಂಗದಲ್ಲಿ (ಭಾರತೀಯ ಸಿನಿಮಾ) ನಟಿಸಿದ ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ ಭಾರತದ ನಟರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ತುಸು ಅಪರೂಪ. ಇರ್ಫಾನ್ ಖಾನ್ ಕೆಲವಾರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೊರತಾಗಿ ಅನಿಲ್ ಕಪೂರ್, ನಾಸಿರುದ್ಧೀನ್ ಶಾ, ಅಲಿ ಜಫರ್, ಅನಿಲ್ ಕಪೂರ್ ಅವರು ಒಂದೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ನಟ ಹಾಲಿವುಡ್ನ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ವಿದ್ಯುತ್ ಜಮ್ವಾಲ್ ಕೆಲವು ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅತ್ಯುತ್ತಮ ಅಂಗ ಸೌಷ್ಠವ ಹೊಂದಿರುವ ವಿದ್ಯುತ್ ಜಮ್ವಾಲ್ ಅವರು ಒಳ್ಳೆಯ ನಟನಾಗಿರುವ ಜೊತೆಗೆ ಅತ್ಯುತ್ತಮ ಆಕ್ಷನ್ ನಟರೂ ಸಹ. ಕೆಲವಾರು ಸಮರ ಕಲೆಗಳನ್ನು ಕಲಿತಿರುವ ವಿದ್ಯುತ್ ಜಮ್ವಾಲ್ ಅವರು ತಮ್ಮ ಸ್ಟಂಟ್‌ಗಳನ್ನು ತಾವೇ ಮಾಡುತ್ತಾರೆ. ತಮ್ಮ ಈ ಕಲೆಯಿಂದಾಗಿ ಇದೀಗ ಇವರು ಹಾಲಿವುಡ್ ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ.
ವುಡ್‌ನಲ್ಲಿ ‘ಸ್ಟ್ರೀಟ್‌ಟರ್’ ಹೆಸರಿನ ಸಿನಿಮಾ ನಿರ್ಮಾಣ ಆಗುತ್ತಿದೆ, ಹಾಲಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿದ್ಯುತ್ ಜಮ್ವಾಲ್ ನಟಿಸಲಿದ್ದಾರೆ. ‘ಸ್ಟ್ರೀಟ್ ಫೈಟರ್’ ಸಿನಿಮಾ ಅದೇ ಹೆಸರಿನ ಗೇಮ್ ಒಂದರ ಮೇಲೆ ಆಧಾರವಾಗಿದೆ. ಇದೊಂದು ಲೈವ್ ಆಕ್ಷನ್ ಸಿನಿಮಾ ಆಗಿರಲಿದೆ, ಸಿನಿಮಾದಲ್ಲಿ ವಿದ್ಯುತ್ ಅವರ ಗೇಮಿನ ಜನಪ್ರಿಯ ಕ್ಯಾರೆಕ್ಟರ್ ಆದ ‘ಡಾಲ್ಸಿಮ್’ ಪಾತ್ರದಲ್ಲಿ ನಟಿಸಲಿದ್ದಾರೆ. ಆಟದಲ್ಲಿ ದಾಲ್ಸಿಮ್ ಒಳ್ಳೆಯ ಫೈಟರ್ ಆತನನ್ನು ಲಾಂಗ್ ಆರ್ಮ್ ಎಂದೂ ಕರೆಯಲಾಗುತ್ತದೆ. ತಮ್ಮ ಕೈ ಮತ್ತು ಕಾಲುಗಳನ್ನು ಉದ್ದಕ್ಕೆ ಚಾಚಿ ಫೈಟ್ ಮಾಡುವ ಶಕ್ತಿ ದಾಲ್ಸಿಮ್ಗೆ ಇದೆ. ಈ ಪಾತ್ರವನ್ನು ವಿದ್ಯುತ್ ಈಗ ನಿಭಾಯಿಸಲಿದ್ದಾರೆ.
ಇದನ್ನೂ ಓದಿ:’ಪುಷ್ಪ’ ನಿರ್ದೇಶಕನ ಕೊಂಡಾಡಿದ ಬಾಲಿವುಡ್ ಬೆಡಗಿ ಕೃತಿ ಸನೋನ್
ದಾಲ್ಸಿಮ್ ಪಾತ್ರವು ಯೋಗಿ ಸಹ ಆಗಿದ್ದು, ಡಾಲ್ಸಿಮ್ ಅನ್ನು ಗ್ರೇಟ್ ಟೈಗರ್ ಎಂದೂ ಕರೆಯಲಾಗುತ್ತದೆ. ದಾಲ್ಸಿಮ್‌ಗೆ ‘ಸ್ಟ್ರೀಟ್ ಫೈಟರ್’ ಗೇಮಿನಲ್ಲಿ ಹಲವು ಶಕ್ತಿಗಳಿದ್ದವು. ದಾಲ್ಸಿಮ್, ಬೆಂಕಿಯನ್ನು ಉಗುಳುತ್ತಿದ್ದ. ಆದರೆ ಸಿನಿಮಾವನ್ನು ಗೇಮಿನಂತೆಯೇ ಮಾಡುತ್ತಿಲ್ಲ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. ವಿದ್ಯುತ್ ಅವರ ಪಾತ್ರ, ಆಟದ ದಾಲ್ಸಿಮ್ ಪಾತ್ರವನ್ನೇ ಹೋಲುತ್ತಿದೆ.
‘ಸ್ಟ್ರೀಟ್ ಫೈಟರ್’ ಸಿನಿಮಾ ಬಹುತಾರಾಗಣದ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಹಾಲಿವುಡ್ನ ಹಲವು ಜನಪ್ರಿಯ ನಟ, ನಟಿಯರು ನಟಿಸುತ್ತಿದ್ದಾರೆ. ಡಬ್ಲುಡಬ್ಲುವಿನ ಹಲವು ಪ್ರಮುಖ ರೆಸ್ಲರ್‌ಗಳು ಸಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಕಿಟಾವ್ ಸಕುರಾಯ್ ಅವರು ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ