ಬಾಲಿವುಡ್ ಸ್ಟಾರ್ ನಟಿ, ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಕೈಫ್ ಅವರು ತಮ್ಮ ಮಗ ವಿಹಾನ್ ಕೌಶಲ್‌ನ ಮುಂಗೈಯನ್ನು ಜಗತ್ತಿಗೆ ಪ್ರದರ್ಶನ ಮಾಡಿದ್ದಾರೆ. ಮಗನ ಹೆಸರು ವಿಹಾನ್ ಕೌಶಲ್ ಎಂದು ಈ ಮೂಲಕ ಹೊರಜಗತ್ತಿಗೆ ತಿಳಿಸಿದ್ದಾರೆ ನಟಿ.. ಈ ಸ್ಟೋರಿ ನೋಡಿ..!

ಬಾಲಿವುಡ್ ಸ್ಟಾರ್ ನಟಿ, ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಕೈಫ್ ಅವರು ತಮ್ಮ ಮಗನ ಹೆಸರನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

ವಿಹಾನ್ ಕೌಶಲ್ ತಮ್ಮ ಮಗನ ಹೆಸರು ಅಂತ ಹೇಳಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ ಕತ್ರಿನಾ ಕೈಫ್.

ಆ ಪೋಸ್ಟ್ ಮೂಲಕ ತಮ್ಮ ಮುದ್ದಾದ ಮಗ ವಿಹಾನ್ ಮುಂಗೈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಕತ್ರಿನಾ.

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿಗೆ 07 ನವೆಂಬರ್ 2025ರಂದು ಗಂಡುಮಗು ಜನಿಸಿದೆ. ಅದಕ್ಕೀಗ ವಿಹಾನ್ ಎಂದು ಹೆಸರಿಟ್ಟಿದ್ದಾರೆ.

ಕಳೆದ ವರ್ಷ 2025ರಲ್ಲಿ ನಟ ವಿಕ್ಕಿ ಕೌಶಲ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಚಿತ್ರವು ಸೂಪರ್ ಹಿಟ್ ಆಗಿದೆ.

ನಟ ವಿಕ್ಕಿ ಕೌಶಲ್ ಅವರು ಛಾವಾ ಚಿತ್ರದ ಬಳಿಕ ಬಾಲಿವುಡ್‌ನ ಸೂಪರ್ ಸ್ಟಾರ್ ನಟರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆ.

ನಟಿ ಕತ್ರಿನಾ ಕೈಫ್ ಅವರು ಸದ್ಯ ಸಿನಿಮಾರಂಗದಿಂದ ದೂರವಿದ್ದಾರೆ. ಅವರೀಗ ಗಂಡ, ಮಗು ಹಾಗೂ ಮನೆಯ ಜವಾಬ್ದಾರಿ ಹೊತ್ತು ಗೃಹಿಣಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎನ್ನಬಹುದು.

ಒಟ್ಟಿನಲ್ಲಿ ತಮ್ಮ ಎರಡು ತಿಂಗಳು ಮಗುವಿನ ಕೈ ಫೋಟೋವನ್ನು ನಟಿ ಕತ್ರಿನಾ ಕೈಫ್ ಅವರು ರಿವೀಲ್ ಮಾಡಿದ್ದಾರೆ. ಆದರೆ, ಮುಖವನ್ನು ಇನ್ನೂ ರಿವೀಲ್ ಮಾಡಿಲ್ಲ. ಮಗನ ಮುಖವನ್ನು ಯಾವತ್ತು ಪ್ರದರ್ಶಿಸುತ್ತಾರೆ, ಯಾವಾಗ ನೋಡತ್ತೇವೆಯೋ ಎಂದು ಅವರ ಫ್ಯಾನ್ಸ್ ಸರ್ಕಲ್ ಕಾಯುತ್ತಿದೆ.

Source link
ಮಗನ ಹೆಸರು ಹೇಳಿ ಮುದ್ದಾದ ಕೈ ಜಗತ್ತಿಗೆ ತೋರಿಸಿದ ಕತ್ರಿನಾ ಕೈಫ್; ನೆಟ್ಟಿಗರ ರಿಯಾಕ್ಷನ್ಸ್ ಏನು?