
ಜನವರಿ, ಮಾರ್ಚ್ 17: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಎಲ್ಪಿಜಿ ಸರಬರಾಜು (LPG) ಕ್ಷೀಣಿಸಿದೆ. ಬಹಳ ಜನರು ಎಲ್ಪಿಜಿ ಸಿಲಿಂಡರ್ ಬುಕ್ ಮಾಡಲು ಆಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಸಿಲಿಂಡರ್ ದರವೂ ಹೆಚ್ಚಿದೆ. ಬುಕಿಂಗ್ ಆದರೂ ಡೆಲಿವರಿ ವಿಳಂಬವಾಗಿ ಆಗುತ್ತಿದೆ. ಇದರಿಂದ ಜನರು ಭವಿಷ್ಯದಲ್ಲಿ ಎಲ್ಪಿಜಿಗೆ ಮತ್ತಷ್ಟು ತತ್ವಾರ ಬರುವ ನಿರೀಕ್ಷೆಯಲ್ಲಿ ಅನಗತ್ಯವಾಗಿದ್ದರೂ ಎಲ್ಪಿಜಿ ಬುಕಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ. ಇದೆ ವೇಳೆ ಇಂಡಿಯನ್ ಐಲ್ ಸಂಸ್ಥೆ ಅಡ್ವೈಸರಿ ಹೊರಡಿಸಿದೆ, ಜನರು ಅಗತ್ಯ ಇಲ್ಲದಿದ್ದರೂ ಎಲ್ ಪಿಜಿ ಬುಕಿಂಗ್ ಮಾಡದಿರಲು ವಿನಂತಿಸಲಾಗಿದೆ.
‘ದೇಶಾದ್ಯಂತ ಮನೆಗಳಿಗೆ ಎಲ್ಪಿಜಿ ಲಭ್ಯತೆ ಸ್ಥಿರವಾಗಿ ಇದೆ ಎಂದು ಇಂಡಿಯನ್ ಆಯಿಲ್ ಖಚಿತಪಡಿಸುತ್ತಿದೆ. ಕೆಲ ಗ್ರಾಹಕರು ಮಾಮೂಲಿಗಿಂತ ಬೇಗನೇ ರೀಫಿಲ್ಸ್ ಬುಕಿಂಗ್ ಮಾಡುತ್ತಿದ್ದಾರೆ. ಈ ರೀತಿ ಮುಂಗಡವಾಗಿ ಸಿಲಿಂಡರ್ ಬುಕಿಂಗ್ ಮಾಡುವುದರಿಂದ ಎಲ್ಪಿಜಿ ಬೇಡಿಕೆ ತಾತ್ಕಾಲಿಕವಾಗಿ ಹೆಚ್ಚುತ್ತಿದೆ. ಪರಿಣಾಮವಾಗಿ ಡೆಲಿವರಿ ವಿಳಂಬವೂ ಹೆಚ್ಚಾಗುತ್ತದೆ’ ಎಂದು ಇಂಡಿಯನ್ ಆಯಿಲ್ ತನ್ನ ಅಡ್ವೈಸರಿಯಲ್ಲಿದೆ.
ಇದನ್ನೂ ಓದಿ: ಎಲ್ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರನ್ನು ಮಾತ್ರ ಅನ್ವಯಿಸಿ, ಗಮನಿಸಿ
ಭಾರತದಲ್ಲಿ ಕಳೆದ ಒಂದು ವರ್ಷದ ಗೃಹಬಳಕೆಯ ಅಡುಗೆ ಅನಿಲದಲ್ಲಿ ಮೊದಲ ಬಾರಿಗೆ ದರ ಪರಿಷ್ಕರಣೆಯಾಗಿದೆ. ಇತ್ತೀಚೆಗೆ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 60 ರೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ 915.50 ರೂ ಆಗಿದೆ.
ಭಾರತಕ್ಕೆ ಹೆಚ್ಚಿನ ಎಲ್ಪಿಜಿ ಸಿಲಿಂಡರ್ಗಳು ಹಾರ್ಮುಜ್ ಜಲಸಂಧಿ ಮೂಲಕವೇ ಬರಬೇಕು. ಹೀಗಾಗಿ, ಎಲ್ಪಿಜಿ ಲಭ್ಯತೆ ವಿಚಾರದಲ್ಲಿ ಭಾರತ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಆದರೂ ಕೂಡ ಜಲಸಂಧಿ ಮೂಲಕ ಒಂದೊಂದೇ ಎಲ್ಪಿಜಿ ಟ್ಯಾಂಕರ್ಗಳನ್ನು ಭಾರತ ತರಿಸಿಕೊಳ್ಳಲು ಯಶಸ್ವಿಯಾಗಿದೆ. ಮೂರು ಎಲ್ಪಿಜಿ ಟ್ಯಾಂಕರ್ಗಳು ಭಾರತಕ್ಕೆ ಬಂದಿವೆ. ಇನ್ನೊಂದು ಟ್ಯಾಂಕರ್ ನಾಳೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪಿಎನ್ಜಿ ಗ್ಯಾಸ್ಗೂ ಎಲ್ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್ ಜಿ ಕನೆಕ್ಷನ್ ಪಡೆಯುವುದು ಹೇಗೆ?
ಗಲ್ಫ್ ರಾಷ್ಟ್ರಗಳಿಂದ ಪೂರೈಕೆಯಾಗುವ ಎಲ್ ಪಿಜಿಯನ್ನು ಹೊತ್ತ ಹಲವು ಭಾರತೀಯ ನೌಕೆಗಳು ಕೂಡ ಹಾರ್ಮುಜ್ ಜಲಸಂಧಿಯಲ್ಲಿ ನಿಂತಿವೆ. ಇರಾನ್ ಜೊತೆ ಭಾರತ ಮಾತುಕತೆ ನಡೆಸುತ್ತಿದೆ, ಒಂದೊಂದೇ ನೌಕೆಯನ್ನು ತರಿಸಿಕೊಳ್ಳಲು ಯತ್ನಿಸುತ್ತಿದೆ. ಭಾರತದ ಯುದ್ಧ ನೌಕೆಗಳಿರುವ ಎರಡು ಕಾರ್ಯಪಡೆಗಳನ್ನು ಪರ್ಷಿಯನ್ ಕೊಲ್ಲಿಯಲ್ಲಿ ನಡೆಸಲಾಗುತ್ತಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ