Headlines

ಗಂಡನನ್ನ ತೊರೆದು ಬಂದ ಪ್ರೇಯಿಸಿಗೆ ಚಾಕುವಿನಿಂದ ಇರಿದ ಪ್ರಿಯಕರ: ಮಕ್ಕಳು ಅನಾಥ

ಗಂಡನನ್ನ ತೊರೆದು ಬಂದ ಪ್ರೇಯಿಸಿಗೆ ಚಾಕುವಿನಿಂದ ಇರಿದ ಪ್ರಿಯಕರ: ಮಕ್ಕಳು ಅನಾಥ


ಚಿಕ್ಕಬಳ್ಳಾಪುರ, (ಫೆಬ್ರವರಿ 27): ಮಹಿಳೆಯೋರ್ವಳು (ಮಹಿಳೆ) ಗಂಡನನ್ನು ತೊರೆದು ಪ್ರಿಯಕರನ (ಪ್ರೇಮಿ) ಜೊತೆ ನೆಲೆಸಿದ್ದ ಮಹಿಳೆ ಹತ್ಯೆಯಾಗಿದ್ದಾಳೆ. ಹೌದು…ಪತಿಯನ್ನ ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಚಾಕುವಿನಿಂದ ಇದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ತೇಜಸ್ವಿನಿ(32) ಕೊಲೆಯಾದ ಮಹಿಳೆ.ತೇಜಸ್ವಿನಿ ಗಂಡನಿಂದ ದೂರವಾಗಿ ತನ್ನ ಎರಡು ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಆದರೆ, ಒಂದು ತಿಂಗಳ ಹಿಂದಷ್ಟೇ ಪ್ರಿಯಕರ ಸಂದೀಪ್ ಜೊತೆ ನೆಲೆಸಿದ್ದಳು. ಆದರೆ, ಇಬ್ಬರ ನಡುವೆ ಅದೇನಾಯ್ತೋ ಏನೋ ಸಂದೀಪ್, 3 ದಿನದ ಹಿಂದೆ ತೇಜಸ್ವಿನಿಗೆ ಚಾಕುವಿನಿಂದ ಇದ್ದಿದ್ದಾನೆ. ಇದರಿಂದ ಯಶಸ್ವಿಯಾಗಿದ್ದ ಇಂದು (ಫೆಬ್ರವರಿ 27) ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ತೇಜಸ್ವಿನಿ ಗಂಡನನ್ನ ಬಿಟ್ಟು ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಸವಾಗಿದ್ದು, ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆದರೆ, ಒಂದು ತಿಂಗಳ ಹಿಂದೆ ಅಷ್ಟೇ ತೇಜಸ್ವಿನಿ, ಸಂದೀಪ್ ಎಂಬುವವನ ಜೊತೆ ಹೋಗಿದ್ದು, ಅವನೊಂದಿಗೆ ವಾಸವಿದ್ದಳು. ಆದರೆ, ಇಬ್ಬರ ನಡುವೆ ಏನಾಯ್ತೋ ಏನೋ ಕಳೆದ ಮೂರು ದಿನಗಳ ಹಿಂದೆ ಸುದೀಪ್, ಚಾಕುವಿನಿಂದ ತೇಜಸ್ವಿನಿ ಹೊಟ್ಟೆಗೆ ಇದ್ದಿದ್ದಾನೆ. ಇದರಿಂದ ತೀವ್ರ ತೊಂದರೆಯಾಗಿದ್ದ ತೇಜಸ್ವಿನಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ: 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ

ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತೇಜಸ್ವಿನಿ ಇಂದು (ಫೆಬ್ರವರಿ 27) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಹೀಗಾಗಿ ಅತ್ತ ತಂದೆ-ಈಗ ತಾಯಿಯನ್ನು ಕಳೆದುಕೊಂಡ ಎರಡು ಮಕ್ಕಳು ಅನಾಥರಾಗಿದ್ದಾರೆ

ಇನ್ನು ಈ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು, ಪ್ರಿಯಕರ ಸಂದೀಪ್ ಹಾಗೂ ತೇಜಸ್ವಿನಿ ಅರುಣಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಪ್ರಿಯಕರ ಸಂದೀಪ್ ಏಕೆ ಚಾಕುವಿನಿಂದ ಇರಿದಿದ್ದಾರೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *