Headlines

ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್!

ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್!


ನವದೆಹಲಿ, ಫೆಬ್ರವರಿ 5: ಸೋಷಿಯಲ್ ಮೀಡಿಯಾದಲ್ಲಿ ದಿನವೂ ಅನೇಕ ವಿಡಿಯೋಗಳು, ರೀಲ್ಸ್ ವೈರಲ್ (ವೈರಲ್ ವಿಡಿಯೋ) ಆಗುತ್ತಲೇ ಇರುತ್ತವೆ. ಭಾರತದ ಕೆಲವು ಕಡೆ ಬೀದಿ ನಾಯಿಗಳ ಕಾಟ ಎಷ್ಟರ ಮಟ್ಟಿಗೆ ಇದೆ ಎಂದು ಹೊಸತಾಗಿ ಏನೂ ಹೇಳಬೇಕಾಗಿಲ್ಲ. ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿತ್ತು. ಹೀಗಾಗಿ, ಆ ನಾಯಿಯಿಂದ ತನ್ನನ್ನು ಕಾಪಾಡಿಕೊಳ್ಳಲು ಬೇರೆ ದಾರಿ ಕಾಣದೆ ಆತ ಪಕ್ಕದಲ್ಲೇ ಇದ್ದ ಮನೆಯೊಂದರ ಗೇಟ್ ಹಾರಿ ಒಳಗೆ ಹೋಗಿದ್ದ. ಆದರೆ, ಆತನ ಅದೃಷ್ಟ ಕೆಟ್ಟಿತ್ತು. ಆ ಮನೆಯಲ್ಲಿ ದೈತ್ಯಾಕಾರದ ಮೂರು ನಾಯಿಗಳು ಕಾವಲು ಕಾಯುತ್ತಿದ್ದವು. ಆ ನಾಯಿಗಳು ಗೇಟ್ ಹಾರಿ ಬಂದವನ ಮೇಲೆ ದಾಳಿ ಮಾಡಲು ಬಂದವು. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *