
ಆದ್ರೆ ಇದೀಗ ಬ್ರಹ್ಮಗಂಟು ಸೀರಿಯಲ್ (Brahmagantu Serial) ನೋಡಿ ಹಲವರು ಸಿಕ್ಕಾಪಟ್ಟೆ ನಗುತ್ತಿದ್ದರೆ, ಮತ್ತೆ ಪುರುಷರ ಕೋಪ ಅಂತೂ ನೆತ್ತಿಗೇರಿತ್ತು. ಆದರೆ ಸ್ವಲ್ಪ ಸಮಾಧಾನ ಪಟ್ಟುಕೊಂಡಿದ್ದರು. ಇದಕ್ಕೆ ಕಾರಣ, ದೀಪಾ, ದಿಶಾ ಆಗಿ ಸ್ವಲ್ಪ ಮೇಕಪ್ ಮಾಡಿಕೊಂಡು ಬಂದರೆ ಅವಳು ತನ್ನದೇ ಹೆಂಡತಿ ಎಂದು ಚಿರುಗೂ ಗೊತ್ತಾಗ್ತಿಲ್ಲ, ಬುದ್ಧಿವಂತ ವಿಲನ್ ಸೌಂದರ್ಯ ಸೇರಿ ಸ್ವಂತ ಅಪ್ಪ-ಅಮ್ಮಂಗೇ ತಿಳೀತಿಲ್ಲ. ಈಗ ಅಪ್ಪ-ಅಮ್ಮಂಗೆ ದೀಪಾನೇ ಹೇಳಿದ ಬಳಿಕ ಗೊತ್ತಾಗಿದೆ ಬಿಟ್ರೆ, ದೀಪಾಳ ದನಿ, ಅವಳ ನಡತೆ ಅದೂ ಹೋಗ್ಲಿ ಅವಳ ರೂಪ ನೋಡಿದ್ರೂ ಸ್ವಲ್ಪನೂ ಡೌಟ್ ಬರದೇ ಇರೋದು ಮಾತ್ರ ವಿಚಿತ್ರ ಆದ್ರೂ ಸತ್ಯ ಎಂದುಕೊಂಡೇ ಎಂಜಾಯ್ ಮಾಡ್ತಿದ್ದಾರೆ ವೀಕ್ಷಕರು.