ಬ್ರಹ್ಮಗಂಟು ಸೀರಿಯಲ್ನಲ್ಲಿ ದೀಪಾ ಈಗ ದಿಶಾ ಆಗಿ ಬಂದಿದ್ದು, ಈ ಸತ್ಯ ತಿಳಿಯದ ಚಿರು ಆಕೆಯನ್ನು ದ್ವೇಷಿಸುತ್ತಿದ್ದಾನೆ. ತನ್ನ ಗಂಡನ ದ್ವೇಷದ ನಡುವೆಯೂ ದಿಶಾ ಮನೆಯವರಿಗೆ ಬುದ್ಧಿ ಕಲಿಸುತ್ತಿದ್ದು, ಇವರಿಬ್ಬರ ಪಾತ್ರಧಾರಿಗಳು ಮಾಡಿಸಿರುವ ಕ್ಯೂಟ್ ಫೋಟೋಶೂಟ್ ವೈರಲ್ ಆಗಿದೆ.
ಬ್ರಹ್ಮಗಂಟು ಸೀರಿಯಲ್ (Brahmagantu Serial) ನಲ್ಲಿ ಸದ್ಯ ದೀಪಾ ಸತ್ತಂತೆ ಮಾಡಿದ್ದು, ದಿಶಾ ಆಗಿ ಬಂದಿದ್ದಾಳೆ. ಆದರೆ ಯಾರಿಗೂ ಈ ಸತ್ಯ ಗೊತ್ತಿಲ್ಲ. ಅಪ್ಪ-ಅಮ್ಮ, ಅರ್ಚನಾ, ಕೆಲಸದ ಜಾಜಿ, ಮಾವ ಬಿಟ್ಟರೆ ಬೇರೆಯವರಿಗೆ ಈ ವಿಷ್ಯ ಗೊತ್ತಿಲ್ಲ.

ಸದ್ಯ ಚಿರು ದಿಶಾನ್ನ ಕಂಡರೆ ಕಿಡಿಕಾರುತ್ತಿದ್ದಾನೆ. ಆಕೆ ದೀಪಾಳ ಸ್ಥಾನವನ್ನು ತುಂಬಲು ಬಂದಿರುವುದಾಗಿ ತಿಳಿದು ಅದನ್ನು ಅವನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ.

ದೀಪಾಳಿಗೂ ಇದು ಸಂಕಟ ತಂದಿದೆ. ತನ್ನ ಗಂಡ ದೀಪಾಳನ್ನು ಅಷ್ಟೆಲ್ಲಾ ಪ್ರೀತಿಮಾಡುವ ಖುಷಿ ಒಂದೆಡೆಯಾದರೆ, ದಿಶಾಳ ಮೇಲೆ ಕೋಪ ಮಾಡಿಕೊಳ್ಳುವ ನೋವು ಇನ್ನೊಂದೆಡೆ,

ದಿಶಾ ಆಗಿ ದೀಪಾ, ಇದಾಗಲೇ ಸೌಂದರ್ಯ ಸೇರಿದಂತೆ ಎಲ್ಲರಿಗೂ ಬುದ್ಧಿ ಕಲಿಸುತ್ತಿದ್ದಾರೆ. ಸೌಂದರ್ಯ ದಿಶಾ ಮತ್ತು ಚಿರುವನ್ನು ಒಂದು ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾಳೆ.

ಆದರೆ ಅವರಿಬ್ಬರೂ ಸದ್ಯ ಸೀರಿಯಲ್ನಲ್ಲಿ ಒಂದಾಗಲ್ಲ. ಆದರೆ ಸೀರಿಯಲ್ ಮಧ್ಯೆ ಟೈಮ್ ಇದ್ದಾಗ, ಈ ಜೋಡಿ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದೆ. ಅದನ್ನು ದಿಶಾ ಪಾತ್ರಧಾರಿ ದಿಯಾ ಪಾಲಕ್ಕಲ್ ಅವರು ಶೇರ್ ಮಾಡಿಕೊಂಡಿದ್ದಾರೆ.

ದಿಶಾ ಮತ್ತು ಚಿರು ಸೀರಿಯಲ್ನಲ್ಲಿಯೂ ಒಂದಾಗಬೇಕು, ಆದಷ್ಟು ಬೇಗ ಚಿರುಗೆ ಅತ್ತಿಗೆಯ ಅಸಲಿ ಮುಖ ಗೊತ್ತಾಗಬೇಕು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Source link
Brahmagantu ಸೀರಿಯಲ್ನಲ್ಲಿ ದಿಶಾ ಕಂಡ್ರೆ ಕಿಡಿಕಾರೋ ಚಿರು, ರಿಯಲ್ ಲವ್ವಿಡವ್ವಿ ವೈರಲ್ ಆಗೋಯ್ತು