ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸುಕನ್ಯಾಳ ಸಂಚಿನಿಂದ ದೀಪಾ ಮತ್ತು ಚಿರು ಗ್ಯಾಸ್ ಬ್ಲಾಸ್ಟ್‌ನಲ್ಲಿ ಸಿಲುಕಿದ್ದಾರೆ. ಬೆಂಕಿಯ ನಡುವೆ ದೀಪಾಳ ಮಾಂಗಲ್ಯ ಸರ ಹರಿದುಹೋಗಿದ್ದು, ಚಿರು ಜೀವಕ್ಕೆ ಅಪಾಯವಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಘಟನೆ ಕಥೆಗೆ ಹೊಸ ತಿರುವು ನೀಡಿದೆ.
ಬ್ರಹ್ಮಗಂಟು (Brahmagantu) ಸೀರಿಯಲ್ ಇದೀಗ ಮತ್ತೊಂದು ರೋಚಕ ಟ್ವಿಸ್ಟ್ನೊಂದಿಗೆ ಸಾಗಿದೆ. ಒಂದೆಡೆ ದೀಪಾ ದಿಶಾ ಆಗಿ ಡಬಲ್ ರೋಲ್ನಲ್ಲಿ ಎಲ್ಲರಿಗೂ ಚಮಕ್ ಕೊಡುತ್ತಿದ್ದರೆ, ಇದೀಗ ಬೇರೆಯದ್ದೇ ರೂಪ ಪಡೆದಿದೆ ಸೀರಿಯಲ್.

ದೀಪಾ ಮತ್ತು ಚಿರಾಗ್ ನನ್ನು ದೂರ ಮಾಡುವ ಉದ್ದೇಶದಿಂದ ಸುಕನ್ಯಾ ದೀಪಾ ಹೋಗಬೇಕಿರುವ ಕಟ್ಟಡದ ಗ್ಯಾಸ್ ಲೀಕ್ ಮಾಡಿಸಿದ್ದಾಳೆ. ದೀಪಾಳಿಂದ ದೂರ ಮಾಡಲು ಸಾಯಿಸಲೂ ಹೇಸದ ಬುದ್ಧಿ ಇದು.

ಈ ಬಗ್ಗೆ ಹೆಮ್ಮೆಯಿಂದ ಸೌಂದರ್ಯ ಬಳಿ ಹೇಳಿಕೊಂಡಿದ್ದಾಳೆ ಸುಕನ್ಯಾ. ಆದರೆ ದೀಪಾಳ ಜೊತೆ ಚಿರು ಕೂಡ ಹೋಗಿರುವುದು ಸೌಂದರ್ಯಗೆ ತಿಳಿದ ಕಾರಣದಿಂದ ಸುಕನ್ಯಾ ಮೇಲೆ ಕೋಪಗೊಂಡು ಏನು ಮಾಡುವುದು ಎಂದು ತಿಳಿಯದ ಸ್ಥಿತಿಯಲ್ಲಿದ್ದಾಳೆ.

ಇತ್ತ ದೀಪಾ-ಚಿರಾಗ್ ಕಟ್ಟಡದ ಒಳಗೆ ಹೋಗುತ್ತಿದ್ದಂತೆಯೇ ಗ್ಯಾಸ್ ವಾಸನೆ ಬಂದಿದೆ. ಏನಾಗಿದೆ ಎಂದು ನೋಡುವಷ್ಟರಲ್ಲಿಯೇ ಗ್ಯಾಸ್ ಬ್ಲಾಸ್ ಆಗುತ್ತಿದೆ. ಎಲ್ಲೆಡೆ ಬೆಂಕಿ ಬರುತ್ತಿದೆ.

ದೀಪಾ ಮತ್ತು ಚಿರು ಇಬ್ಬರೂ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ದೀಪಾಳ ಮಾಂಗಲ್ಯ ಅಲ್ಲಿರುವ ಗೂಟಕ್ಕೆ ತಗುಲಿ ಹರಿದು ಹೋಗಿದೆ. ಇದನ್ನು ನೋಡಿ ದೀಪಾ ಶಾಕ್ ಆಗಿದ್ದಾಳೆ.

ಹಾಗಿದ್ದರೆ ಏನಿದರ ಸೂಚನೆ? ಚಿರಾಗ್ ಜೀವಕ್ಕೆ ಅಪಾಯ ಇದ್ಯಾ? ಅವನನ್ನು ಕಾಪಾಡುವವರು ಯಾರು? ಸ್ಟೋರಿ ಮುಂದೇನಾಗುತ್ತದೆ ಎನ್ನುವ ಟ್ವಿಸ್ಟ್ ಸದ್ಯಕ್ಕಿದೆ.

ಇದರ ಪ್ರೊಮೋಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

Source link
Brahmagantu: ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?