Headlines

ಸೋಡಾಬುಡ್ಡಿ ದೀಪಾ, ದಿಶಾ ಆಗಿ ಬದಲಾಗಿದ್ದು ನೋಡಿ ಚಿರು ಶಾಕ್; ಸೌಂದರ್ಯಾಳ ಅಂದಕ್ಕೆ ಸವಾಲೆಸೆದ ದಿಶಾ!

ಸೋಡಾಬುಡ್ಡಿ ದೀಪಾ, ದಿಶಾ ಆಗಿ ಬದಲಾಗಿದ್ದು ನೋಡಿ ಚಿರು ಶಾಕ್; ಸೌಂದರ್ಯಾಳ ಅಂದಕ್ಕೆ ಸವಾಲೆಸೆದ ದಿಶಾ!

ಸೋಡಾಬುಡ್ಡಿ ದೀಪಾ, ದಿಶಾ ಆಗಿ ಬದಲಾಗಿದ್ದು ನೋಡಿ ಚಿರು ಶಾಕ್; ಸೌಂದರ್ಯಾಳ ಅಂದಕ್ಕೆ ಸವಾಲೆಸೆದ ದಿಶಾ!

’ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಪ್ರೇಕ್ಷಕರು ಕಾಯುತ್ತಿದ್ದ ರೋಚಕ ತಿರುವು ಬಂದಿದೆ. ನಾಯಕಿ ದೀಪಾ ತನ್ನ ದಪ್ಪ, ಕಪ್ಪು ವೇಷವನ್ನು ಕಳಚಿ, ‘ದಿಶಾ’ ಎಂಬ ಮಾಡೆಲ್ ಆಗಿ ಸುಂದರ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ.

ಹಲವು ದಿನಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಈಗ ದೊಡ್ಡ ರೋಚಕ ತಿರುವು ಬಂದಿದೆ. ಇಷ್ಟು ದಿನ ವೀಕ್ಷಕರ ತಾಳ್ಮೆ ಪರೀಕ್ಷಿಸಿದ್ದ ದೀಪಾಳ ಅಸಲಿ ಸೌಂದರ್ಯ ಈಗ ತೆರೆಗೆ ಬಂದಿದೆ.

ನಾಯಕಿಯಾಗಿ ಬಣ್ಣ ಕಪ್ಪಾಗಿಸಿ, ದಪ್ಪ ಕನ್ನಡಕ ಧರಿಸಿ, ಎರಡು ಜಡೆ ಹಾಕಿ ಎಲ್ಲರ ಗಮನ ಸೆಳೆದಿದ್ದ ‘ದೀಪಾ’ ಈಗ ಮಾಡೆಲ್‌ ‘ದಿಶಾ’ ಆಗಿ ಪರಿವರ್ತನೆಗೊಂಡಿದ್ದಾರೆ.

ಇದೀಗ ದಿಶಾ ಆಗಿ ಬದಲಾಗಿರುವ ದೀಪಾ ಚಿರು ಅತ್ತಿಗೆ ಸೌಂದರ್ಯಾಗಿಂತಲೂ ಸೂಪರ್ ಆಗಿ ಕಾಣಿಸುತ್ತಿದ್ದಾಳೆ. ಈ ಮೂಲಕ ದೀಪಾಳ ಅಸಲಿ ಮುಖವನ್ನು ಅಭಿಮಾನಿಗಳು ನೋಡುವ ಕಾತರಕ್ಕೆ ನಿರ್ದೇಶಕರು ತೆರೆ ಎಳೆದಿದ್ದಾರೆ.

’ಬ್ರಹ್ಮಗಂಟು’ ಧಾರಾವಾಹಿ ಪ್ರೇಕ್ಷಕರು ನಾಯಕಿ ದೀಪಾಳ ನಿಜವಾದ ರೂಪವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ‘ದಯವಿಟ್ಟು ದೀಪಾಳ ನಿಜವಾದ ಮುಖ ತೋರಿಸಿ’, ‘ಈ ವೇಷ ಯಾವಾಗ ಬದಲಾಗುತ್ತದೆ?’ ಎಂಬಂತಹ ಅನೇಕ ಕಮೆಂಟ್‌ಗಳು ಹರಿದಾಡುತ್ತಿದ್ದವು.

ದೀಪಾಳ ಪಾತ್ರ ನಿರ್ವಹಿಸುತ್ತಿರುವ ನಟಿ ದಿಯಾ ಪಾಲಕ್ಕಲ್ ಅವರ ನಿಜವಾದ ರೂಪ ತುಂಬಾ ಸುಂದರವಾಗಿದ್ದು, ಈಗ ಅದೇ ರೂಪದಲ್ಲಿ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಭಾರಿ ಖುಷಿ ತಂದಿದೆ.

ಧಾರಾವಾಹಿಯ ಕಥಾವಸ್ತುವಿನ ಪ್ರಕಾರ, ಚಿರಾಗ್‌ಗೆ ತನ್ನ ಉಡುಪುಗಳ ಬ್ರ್ಯಾಂಡ್‌ಗೆ ಒಬ್ಬ ಹೊಸ ಮಾಡೆಲ್ ಬೇಕಾಗಿತ್ತು. ಆತ ಆ ಮಾಡೆಲ್‌ ಅನ್ನು ತುಂಬಾ ಹೊಗಳುತ್ತಿದ್ದನು.

ದೀಪಾಳ ಪಾತ್ರ ಈ ಮಾಡೆಲ್‌ನ ಮೇಲೆ ಕೋಪಗೊಂಡಿದ್ದಳು, ಆದರೆ ಆಕೆಯ ಮುಖವನ್ನು ನೋಡಿರಲಿಲ್ಲ. ಅಚ್ಚರಿಯೆಂದರೆ, ಆ ಮಾಡೆಲ್ ಬೇರೆ ಯಾರೂ ಅಲ್ಲ, ಬದಲಾದ ರೂಪದ ದೀಪಾ ಅಂದರೆ ದಿಶಾ.

ಮಾಡೆಲ್‌ನ ಫೋಟೋ ನೋಡಿದಾಗ, ಅದು ತನ್ನದೇ ಫೋಟೋ ಎಂದು ದೀಪಾಗೆ ತಿಳಿಯಲೇ ಇಲ್ಲ. ಈ ಸತ್ಯವನ್ನು ಅರ್ಚನಾ ಹೇಳಿದಾಗ ದೀಪಾಗೆ ಶಾಕ್ ಆಗುತ್ತದೆ. ಅಲ್ಲಿಗೆ ದಿಶಾ ಆಗಿ ಕಾಣಿಸಿಕೊಳ್ಳುವ ದೀಪಾ, ಚಿರು ಅತ್ತಿಗೆ ಸೌಂದರ್ಯಗಿಂತಲೂ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ.

’ಬ್ರಹ್ಮಗಂಟು’ ಕೇವಲ ಮನರಂಜನೆ ನೀಡುವುದಲ್ಲದೆ, ಒಂದು ಪ್ರಮುಖ ಸಂದೇಶವನ್ನು ಸಾರುತ್ತಿದೆ. ಬಾಹ್ಯ ಸೌಂದರ್ಯಕ್ಕೆ ಅತಿಯಾದ ಮಹತ್ವ ಕೊಡುವ ಈ ಸಮಾಜದಲ್ಲಿ, ಆಂತರಿಕ ಸೌಂದರ್ಯವೇ ಮೇಲು ಎಂಬುದನ್ನು ದೀಪಾಳ ಪಾತ್ರ ತೋರಿಸಿಕೊಟ್ಟಿದೆ.

ದೀಪಾ ಕಪ್ಪು ವೇಷದಲ್ಲಿದ್ದರೂ, ತನ್ನ ಒಳ್ಳೆಯತನ, ಸರಳತೆ ಮತ್ತು ಪ್ರಾಮಾಣಿಕತೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಳು. ಈ ವೇಷ ಬದಲಾವಣೆಯೊಂದಿಗೆ, ಆಕೆಯ ಆಂತರಿಕ ಮತ್ತು ಬಾಹ್ಯ ಸೌಂದರ್ಯಗಳು ಒಂದೇ ಆಗಿದ್ದು, ಈ ಸತ್ಯವು ಕಥೆಗೆ ಹೊಸ ಆಯಾಮವನ್ನು ನೀಡಿದೆ.

ದೀಪಾಳ ಮಾಡೆಲ್‌ ರೂಪದಲ್ಲಿ ಕಾಣಿಸಿಕೊಂಡಿರುವ ಪ್ರೊಮೋ ಹೊರಬಿದ್ದ ಕೂಡಲೇ ಅಭಿಮಾನಿಗಳು ಉತ್ಸಾಹದಿಂದ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
View this post on Instagram
A post shared by Zee Kannada (@zeekannada)

’ದೀಪಾಳ ಅಸಲಿ ಮುಖವೇ ಸುಂದರ’, ‘ಇವಳು ನಿಜವಾಗಿಯೂ ಹೀರೋಯಿನ್ ಮಟೇರಿಯಲ್’ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ದೀಪಾಳ ಸೌಂದರ್ಯ ಅಡಗಿಸಿಟ್ಟಿದ್ದಕ್ಕೆ ಅಭಿಮಾನಿಗಳಲ್ಲಿ ಕೋಪವೂ ಇದೆ.

ವೀಕ್ಷಕರು ಪ್ರೋಮೋ ನೋಡಿ ಸಂತಸಗೊಂಡಿದ್ದಾರೆ ಮತ್ತು ಮುಂಬರುವ ಕಂತುಗಳಲ್ಲಿ ದೀಪಾಳ ಹೊಸ ರೂಪ ಹಾಗೂ ಕಥೆಯು ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.

Source link

Leave a Reply

Your email address will not be published. Required fields are marked *