Brahmagantu Serial: ಮರಳಿ ಬಂದಳು ದಿಶಾ- ಮಕ್ಕಳಾಗದಂತೆ ಅವಳಿಗೆ ಏನ್​ ಮಾಡ್ತಾಳೆ ಸೌಂದರ್ಯ?

Brahmagantu Serial: ಮರಳಿ ಬಂದಳು ದಿಶಾ- ಮಕ್ಕಳಾಗದಂತೆ ಅವಳಿಗೆ ಏನ್​ ಮಾಡ್ತಾಳೆ ಸೌಂದರ್ಯ?

Brahmagantu Serial: ಮರಳಿ ಬಂದಳು ದಿಶಾ- ಮಕ್ಕಳಾಗದಂತೆ ಅವಳಿಗೆ ಏನ್​ ಮಾಡ್ತಾಳೆ ಸೌಂದರ್ಯ?

ಬ್ರಹ್ಮಗಂಟು ಸೀರಿಯಲ್​ನಲ್ಲಿ ಸೌಂದರ್ಯಳ ಕುತಂತ್ರದಿಂದ ದೀಪಾ ಮತ್ತು ಚಿರು ದೂರವಾಗಿದ್ದಾರೆ. ಸೌಂದರ್ಯಳಿಗೆ ಬುದ್ಧಿ ಕಲಿಸಲು ದೀಪಾ ಈಗ ದಿಶಾಳಾಗಿ ಮರಳಿದ್ದು, ದಿಶಾ ಜೊತೆ ಚಿರು ಮದುವೆ ಮಾಡಿಸಲು ಸೌಂದರ್ಯ ಮುಂದಾಗಿದ್ದಾಳೆ. ಆದರೆ, ದಿಶಾಗೆ ಮಕ್ಕಳಾಗದಂತೆ ತಡೆಯಲು ಯೋಜನೆ ಏನು?

ಬ್ರಹ್ಮಗಂಟು ಸೀರಿಯಲ್​ (Brahmagantu Serial)ನಲ್ಲಿ ದೀಪಾ ಮತ್ತು ಚಿರು ಒಂದಾಗುವ ಹೊತ್ತಿನಲ್ಲಿಯೇ, ಸೌಂದರ್ಯ ಕುತಂತ್ರದಿಂದ ಇಬ್ಬರೂ ಮತ್ತೆ ದೂರ ದೂರ ಆಗಿದ್ದಾರೆ. ಬಹುತೇಕ ಎಲ್ಲಾ ಸೀರಿಯಲ್​ಗಳ ನಾಯಕ ಪೆದ್ದು ಇರುವಂತೆ ಇಲ್ಲಿ ಕೂಡ ನಾಯಕ ಚಿರು, ವಿಲನ್​ ಆಗಿರೋ ಅತ್ತಿಗೆ ಸೌಂದರ್ಯಳನ್ನು ಬಲವಾಗಿ ನಂಬಿದ್ದು, ದೀಪಾಳಿಂದಲೇ ದೂರ ಹೋಗುವ ನಿರ್ಧಾರ ಮಾಡಿದ್ದಾನೆ.

ಅದೇ ಇನ್ನೊಂದೆಡೆ, ಸೌಂದರ್ಯನೇ ಮೇಲು- ಗುಣ ಎನ್ನುವುದು ಏನೂ ಅಲ್ಲ ಎನ್ನುವ ಸೌಂದರ್ಯಳಿಗೆ ಸೌಂದರ್ಯದಿಂದಲೇ ಬುದ್ಧಿ ಕಲಿಸಬೇಕು ಎಂದು ದೀಪಾ ಮತ್ತೆ ದಿಶಾ ಆಗಿ ಬಂದು ಸೌಂದರ್ಯಳ ಎದುರು ನಿಂತಿದ್ದಾಳೆ.

ಎಷ್ಟೋ ದಿವಸ ಕಾಣೆಯಾಗಿದ್ದ ದಿಶಾಳನ್ನು ನೋಡಿ ಸೌಂದರ್ಯಳಿಗೆ ಹೋದ ಜೀವ ಬಂದಂತಾಗುತ್ತದೆ. ದೀಪಾ ಮತ್ತು ಚಿರುಗೆ ಡಿವೋರ್ಸ್ ಕೊಡಿಸಿ ನಿನ್ನ ಜೊತೆ ಮದುವೆ ಮಾಡಿಸುತ್ತೇನೆ ಎಂದು ದಿಶಾಗೆ ವಾಗ್ದಾನ ಮಾಡಿದ್ದಾಳೆ ಸೌಂದರ್ಯ.

ಇದಕ್ಕೆ ಚಿರು ಒಪ್ಪಲ್ಲ ಎನ್ನುವುದು ಸತ್ಯವಾದರೂ, ಅತ್ತಿಗೆ ಹೇಳಿದ್ದನ್ನು ಕಣ್ಮುಚ್ಚಿಕೊಂಡು ಕೇಳುವ ಚಿರು, ಅತ್ತಿಗೆಯ ಎಮೋಷನಲ್​ ಬ್ಲ್ಯಾಕ್​ಮೇಲ್​ಗೆ ಬಗ್ಗಿದರೂ ಅಚ್ಚರಿ ಏನಿಲ್ಲ.

ಆದರೆ ಇದರ ನಡುವೆಯೇ ವೀಕ್ಷಕರಿಗೆ ಇನ್ನೊಂದು ಪ್ರಶ್ನೆ ಕಾಡಿದೆ. ಅದೇನೆಂದರೆ, ಚಿರುಗೆ ಯಾವುದೇ ಕಾರಣಕ್ಕೂ ಮಕ್ಕಳಾಗಬಾರದು ಎಂದು ದೀಪಾಳ ಅಕ್ಕ ರೂಪಾಗೆ ಮಕ್ಕಳಾಗಲ್ಲ ಎನ್ನುವ ಕಾರಣಕ್ಕೆ ಮದುವೆಗೆ ಮುಂದಾದವಳು ಸೌಂದರ್ಯ. ಈಗ ಅದಕ್ಕಾಗಿಯೇ ಚಿರು ಮತ್ತು ದೀಪಾ ಕೂಡಬಾರದು ಎಂದು ಸರ್ಕಸ್​ ಮಾಡುತ್ತಿದ್ದಾಳೆ.

ಹಾಗಾದರೆ ದಿಶಾ ಜೊತೆ ಚಿರುನ ಮದುವೆ ಮಾಡಿಸಹೊರಟಿದ್ದಾಳೆ ಸೌಂದರ್ಯ. ಹೀಗೊಂದು ವೇಳೆ ಮದುವೆ ಮಾಡಿಸಿದ್ರೆ ದಿಶಾಗೆ ಮಕ್ಕಳಾಗದಂತೆ ಏನು ಮಾಡುತ್ತಾಳೆ ಎನ್ನುವ ದೊಡ್ಡ ಪ್ರಶ್ನೆ ನೆಟ್ಟಿಗರನ್ನು ಕಾಡ್ತಿದೆ. ಇದಕ್ಕೆ ನಿರ್ದೇಶಕರೇ ಉತ್ತರ ಹೇಳಿ ಎನ್ನುತ್ತಿದ್ದಾರೆ!

Source link

Leave a Reply

Your email address will not be published. Required fields are marked *