Brahmagantu: ಫಸ್ಟ್​ ನೈಟ್​ ಕಣಯ್ಯಾ, ಇದೇನ್​ ಮಾಡ್ತಿದ್ಯಾ? ನೀನೂ ಒಬ್ಬ ಗಂಡಸಾ? ಚಿರುಗೆ ನೆಟ್ಟಿಗರ ಕ್ಲಾಸ್​

Brahmagantu: ಫಸ್ಟ್​ ನೈಟ್​ ಕಣಯ್ಯಾ, ಇದೇನ್​ ಮಾಡ್ತಿದ್ಯಾ? ನೀನೂ ಒಬ್ಬ ಗಂಡಸಾ? ಚಿರುಗೆ ನೆಟ್ಟಿಗರ ಕ್ಲಾಸ್​

Brahmagantu: ಫಸ್ಟ್​ ನೈಟ್​ ಕಣಯ್ಯಾ, ಇದೇನ್​ ಮಾಡ್ತಿದ್ಯಾ? ನೀನೂ ಒಬ್ಬ ಗಂಡಸಾ? ಚಿರುಗೆ ನೆಟ್ಟಿಗರ ಕ್ಲಾಸ್​
ಬ್ರಹ್ಮಗಂಟು ಧಾರಾವಾಹಿಯಲ್ಲಿ ಮದುವೆಯಾಗಿ ಒಂದು ವರ್ಷದ ಬಳಿಕ ದೀಪಾ ಮತ್ತು ಚಿರು ಮೊದಲ ರಾತ್ರಿಗೆ ಸಿದ್ಧರಾಗಿದ್ದಾರೆ. ಚಿರು ಪ್ರೀತಿಯಿಂದ ಗೊಂಬೆ ಉಡುಗೊರೆ ನೀಡಿದ್ದು, ಇಬ್ಬರೂ ಪ್ರೀತಿಯ ಮಾತುಗಳನ್ನಾಡಿದ್ದಾರೆ. ಆದರೆ, ಇವರಿಬ್ಬರ ಮಿಲನಕ್ಕೆ ಸೌಂದರ್ಯ ಅಡ್ಡಿಪಡಿಸುವಳೇ ಎಂಬ ಕುತೂಹಲ ಮೂಡಿದೆ.
ಬ್ರಹ್ಮಗಂಟು ಸೀರಿಯಲ್​ (Brahmagantu Serial)ನಲ್ಲಿ ಕೊನೆಗೂ ದೀಪಾ ಮತ್ತು ಚಿರು ಒಂದಾಗುವ ಕಾಲ ಬಂದಾಗಿದೆ. ಸೌಂದರ್ಯ ಎಷ್ಟೇ ದೂರ ಮಾಡಲು ನೋಡಿದರೂ ಇದೀಗ ಮೊದಲ ರಾತ್ರಿಯ ಸಂಭ್ರಮದವರೆಗೆ ಸೀರಿಯಲ್​ ಬಂದು ನಿಂತಿದೆ.

ಅಷ್ಟಕ್ಕೂ ಬಹುತೇಕ ಸೀರಿಯಲ್​ಗಳಂತೆ ಇಲ್ಲಿ ಕೂಡ ಮದುವೆಯಾಗಿ ಒಂದು ವರ್ಷವಾದರೂ ಇಷ್ಟವಿಲ್ಲದ ಈ ಮದುವೆಯಿಂದ ಇಬ್ಬರೂ ಇನ್ನೂ ಮೊದಲ ರಾತ್ರಿ ಆಚರಿಸಿಕೊಂಡಿಲ್ಲ, ಒಂದಾಗಲಿಲ್ಲ. ಆದರೆ ಇದೀಗ ಆ ಘಳಿಗೆ ಬಂದಿದೆ.

ಹಾಲು ತೆಗೆದುಕೊಂಡು ದೀಪಾ ಬಂದಿದ್ದಾಳೆ. ದೀಪಾಳಿಗಾಗಿ ಗೊಂಬೆಯನ್ನು ತಂದು ಕೊಟ್ಟಿದ್ದಾನೆ ಚಿರು. ಇಬ್ಬರೂ ಪ್ರೀತಿಯ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ.

ನಾನೆಷ್ಟು ನಿಮಗ ಮೋಸ ಮಾಡಿಬಿಟ್ಟೆ, ಆದರೂ ನೀವು ಅದೆಷ್ಟು ಪ್ರೀತಿ ತೋರಿಸುತ್ತಿದ್ದೀರಿ ಎಂದು ಚಿರು ದೀಪಾಗೆ ಹೇಳಿದರೆ, ತಾಳಿ ಕಟ್ಟಿದ ಮೇಲೆ ಗಂಡ ಹೇಗೇ ಇದ್ದರೂ ಅವನ ಜೊತೆ ಬದುಕಿಕೊಂಡು ಹೋಗಿ ಪ್ರೀತಿ ತೋರುವುದು ಹೆಂಡತಿ ಕರ್ತವ್ಯ. ನಾನು ನಿಮ್ಮನ್ನು ಯಾವಾಗ್ಲೂ ಪ್ರೀತಿಸುತ್ತಿದ್ದೆ ಎಂದಿದ್ದಾಳೆ ಚಿರು.

ಹೇಳಿ ಕೇಳಿಮೊದಲ ರಾತ್ರಿ. ಎಲ್ಲಾ ಡೆಕೋರೇಷನ್​ ಕೂಡ ಆಗಿದೆ. ಇದಾದ್ರೂ ಚಿರು ಮಾತ್ರ ಹೆಂಡತಿಯ ಮುಖ ನೋಡ್ತಾ ನಿಂತುಕೊಂಡಿದ್ದಾನೆಯೇ ವಿನಾ ಮುಂದೇನು ಮಾಡ್ತಿಲ್ವಲ್ಲಾ ಎಂದು ನೆಟ್ಟಿಗರಿಗೆ ಸಂಕಟ ಶುರುವಾಗಿದೆ.

ಏನಪ್ಪಾ ಚಿರು, ಇದು ನಿನ್ನ ಮೊದಲ ರಾತ್ರಿ, ನೀನೊಬ್ಬ ಗಂಡಸಾ ಹಾಗೇ ನಿಂತುಕೊಂಡಿದ್ಯಲ್ಲಾ, ಪಾಪ ದೀಪಾ ಆದ್ರೂ ಏನು ಮಾಡ್ತಾಳೆ ಮುಂದುವರಿಯಪ್ಪಾ ಎಂದು ನಟನ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಇವರ ಮೊದಲ ರಾತ್ರಿ ನಡೆಯುತ್ತಾ ಅಥ್ವಾ ಸೌಂದರ್ಯ ಅಡ್ಡಗಾಲು ಹಾಕ್ತಾಳಾ ನೋಡಬೇಕಿದೆ.

Source link

Leave a Reply

Your email address will not be published. Required fields are marked *