Headlines

Brahmagantu Serial ದೀಪಾ ರೋಲ್‌ ಚೇಂಜ್‌ ಆಗೋಯ್ತು! ಬೆಟ್ಟದ ಮೇಲಿನಿಂದ ಬಿದ್ದು ಸತ್ತಿದ್ದು ಅವಳಲ್ಲ, ಇವಳು

Brahmagantu Serial ದೀಪಾ ರೋಲ್‌ ಚೇಂಜ್‌ ಆಗೋಯ್ತು! ಬೆಟ್ಟದ ಮೇಲಿನಿಂದ ಬಿದ್ದು ಸತ್ತಿದ್ದು ಅವಳಲ್ಲ, ಇವಳು

Brahmagantu Serial ದೀಪಾ ರೋಲ್‌ ಚೇಂಜ್‌ ಆಗೋಯ್ತು! ಬೆಟ್ಟದ ಮೇಲಿನಿಂದ ಬಿದ್ದು ಸತ್ತಿದ್ದು ಅವಳಲ್ಲ, ಇವಳು
ಬ್ರಹ್ಮಗಂಟು ಸೀರಿಯಲ್‌ನಲ್ಲಿ ನಾಯಕಿ ದೀಪಾ ಸತ್ತಂತೆ ತೋರಿಸಲಾಗಿದ್ದು, ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದೆ. ಆದರೆ, ಬೆಟ್ಟದಿಂದ ತಳ್ಳುವ ದೃಶ್ಯದಲ್ಲಿ ದೀಪಾಳ ಬದಲು ಆಕೆಯನ್ನೇ ಹೋಲುವ ಗೊಂಬೆಯನ್ನು ಬಳಸಿರುವ ವಿಡಿಯೋ ವೈರಲ್ ಆಗಿದೆ. ಇದು ದೀಪಾಳ ಪಾತ್ರದ ಅಂತ್ಯದ ಬಗ್ಗೆ ಹೊಸ ಕುತೂಹಲವನ್ನು ಸೃಷ್ಟಿಸಿದೆ.
ಬ್ರಹ್ಮಗಂಟು ಸೀರಿಯಲ್‌ (Brahmagantu Serial)ನಲ್ಲಿ ದೀಪಾ ಪಾತ್ರ ಸತ್ತಂತೆ ತೋರಿಸಲಾಗಿದೆ. ಬಣ್ಣ ಮುಖ್ಯನೋ, ಗುಣ ಮುಖ್ಯನೋ ಎಂದು ಪ್ರೂವ್‌ ಆಗುವ ಮೊದಲೇ, ಪೆದ್ದು ಗಂಡನೇ ಮೇಲಾಗಿ ಹೋಗಿದ್ದಾನೆ!

ವಿಲನ್‌ ಅತ್ತಿಗೆಯನ್ನೇ ತಮ್ಮ ಸರ್ವಸ್ವ ಎಂದು ನಂಬುವ, ಬಹುತೇಕ ಎಲ್ಲಾ ಸೀರಿಯಲ್‌ಗಳಂತೆ ಪೆದ್ದು ನಾಯಕ ಚಿರುವಿನಿಂದ ದೀಪಾ ಸಾಯುವ ಹಾಗಾಗಿದೆ. ಈಗಲೂ ಚಿರುಗೆ ತನ್ನ ಅತ್ತಿಗೆ ತಾಯಿ ಸಮಾನವೇ ಆಗಿದ್ದಾಳೆ.

ದೀಪಾ-ದಿಶಾ ಒಬ್ಬಳೇ ಆಗಿದ್ದರೂ ಇದುವರೆಗೂ ಗಂಡ, ಬುದ್ಧಿವಂತೆ ಸೌಂದರ್ಯ ಹೋಗ್ಲಿ ಸ್ವಂತ ಅಪ್ಪ-ಅಮ್ಮನಿಗೇ ತಿಳಿಯಲಿಲ್ಲ ಎನ್ನುವುದು ವಿಚಿತ್ರ ಎನ್ನಿಸಿದರೂ, ಇದು ಸೀರಿಯಲ್‌ ಆಗಿರೋದ್ರಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಆದರೆ ಈಗ ಸೌಂದರ್ಯಾಳಿಂದ ದೀಪಾ ಸತ್ತ ರೀತಿ ತೋರಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ದೀಪಾ ಏನೂ ಸಾಯಲ್ಲ ಬಿಡಿ. ಸೀರಿಯಲ್‌ನಲ್ಲಿ ಇನ್ನೊಂದು ಟ್ವಿಸ್ಟ್‌ ನೀಡಲಾಗುತ್ತದೆ ಎನ್ನೋದು ಬೇರೆ ಮಾತು. ಆದರೆ ಇದರ ನಡುವೆಯೇ ಇದೀಗ ಗಂಡನಿಗಾಗಿ ಬೆಟ್ಟದ ತುದಿಗೆ ಹೋಗಿ ನಿಂತು ಸಾಯಲು ರೆಡಿಯಾಗಿರುವ ದೀಪಾ ರೋಲ್‌ ಚೇಂಜ್‌ ಆಗಿಬಿಟ್ಟಿದೆ.

ಕೆಲವು ಸೀರಿಯಲ್‌ಗಳಲ್ಲಿ ಲೀಡ್‌ ರೋ‌ಲ್‌ ಬದಲಾಗುವುದು ಹೊಸ ವಿಷಯವೇನಲ್ಲ. ಆದರೆ ಇಲ್ಲಿ ಬದಲಾಗಿರೋದು ದೀಪಾ ಪಾತ್ರವಲ್ಲ. ಬದಲಿಗೆ ಸಾಯುವ ದೃಶ್ಯದಲ್ಲಿ ದೀಪಾಳನ್ನು ಬೆಟ್ಟದಿಂದ ನೂಕಲು ಆಗುವುದಿಲ್ಲವಲ್ಲ, ಅದಕ್ಕಾಗಿಯೇ ಅವಳನ್ನೇ ಹೋಲುವ ಗೊಂಬೆ ಮಾಡಿರುವ ದೃಶ್ಯ ಇದೀಗ ವೈರಲ್‌ ಆಗಿದೆ.

shreyash__deep ಎನ್ನುವವರು ಈ ವಿಡಿಯೋ ಅನ್ನು ಶೇರ್‌ ಮಾಡಲಾಗಿದೆ. ದೂರದಿಂದ ಈ ಗೊಂಬೆ ದೀಪಾ ಕಂಡ ಹಾಗೆ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಅದಕ್ಕೂ ನೀಟಾಗಿ ಸೀರೆ ಉಡಿಸುವುದುನ್ನು ಈ ವಿಡಿಯೋದಲ್ಲಿ ನೋಡಬಹುದು. ಒಟ್ಟಿನಲ್ಲಿ ದೀಪಾಳ ರೋಲ್‌ ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ.

Source link

Leave a Reply

Your email address will not be published. Required fields are marked *