ಇತ್ತೀಚೆಗಿನ ದಿನಗಳಲ್ಲಿ ಒಗಟಿನ ಆಟಗಳು ತುಂಬಾ ಜನಪ್ರಿಯವಾಗಿವೆ. ಈ ಬ್ರೈನ್ ಟೀಸರ್ಗಳು (ಮೆದುಳಿನ ಟೀಸರ್) ಕೇವಲ ಮೆದುಳಿಗೆ ಬುದ್ಧಿವಂತಿಕೆಗೂ ಸವಾಲೆಸೆಯುತ್ತದೆ. ಕೆಲವು ಪ್ರಶ್ನೆಗಳು ಸುಲಭವಾಗಿ ಕಂಡರೂ ಕೂಡ ಉತ್ತರವು ಅಷ್ಟೇ ಕಷ್ಟದಾಯಕವಾಗಿದೆ. ಮೈಂಡ್ ಶಾರ್ಪ್ ಇದ್ದವರು ಮಾತ್ರ ಈ ಒಗಟು ಬಿಡಿಸಲು ಸಾಧ್ಯ. ನಾನು ಬದುಕಿಲ್ಲ, ಆದ್ರೂ ಬೆಳಿತೀನಿ ನಾನು ಯಾರೆಂದು ಹೇಳಬಲ್ಲೆರಾ ಎಂಬ ಒಗಟಿನ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿ.
ಒಗಟಿನ ಪ್ರಶ್ನೆ ಹೀಗಿದೆ
ಲವನ್ ಭಾಸ್ಕರನ್ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ರೈನ್ ಟೀಸರ್ ಒಗಟನ್ನು ಹಂಚಿಕೊಂಡಿದ್ದಾರೆ. ಇಲ್ಲಿ ʼನಾನು ಜೀವಂತವಾಗಿಲ್ಲ, ಆದರೂ ನಾನು ಬೆಳೆಯುತ್ತೇನೆ. ನನಗೆ ಶ್ವಾಸಕೋಶವಿಲ್ಲ ಆದರೂ ನನಗೆ ಗಾಳಿ ಬೇಕು. ನನಗೆ ಬಾಯಿ ಇಲ್ಲ, ಆದರೆ ನೀರು ನನ್ನನ್ನು ಕೊಲ್ಲುತ್ತದೆ, ಹಾಗದ್ರೆ ನಾನ್ಯಾರು? ಎಂಬ ಪ್ರಶ್ನೆಯನ್ನು ನೋಡಬಹುದು.
ಪೋಸ್ಟ್ ವೈರಲ್ ಇಲ್ಲಿದೆ ನೋಡಿ
ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೆ ಸವಾಲು; ಪ್ರತಿ ಸಾಲಿನ ಉತ್ತರ 15 ಬರುವಂತೆ ಈ ಮ್ಯಾಜಿಕ್ ಸ್ಕ್ವೇರ್ ಬಿಡಿಸಿದ್ರೆ ನೀವು ಜಾಣರು ಎಂದರ್ಥ
ಒಗಟು ಬಿಡಿಸಲು ಸಾಧ್ಯವಾಯಿತೇ?
ಎಷ್ಟು ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಸಾಧ್ಯವಾಗುತ್ತಿಲ್ಲ. ಈ ಪೋಸ್ಟ್ ನೋಡಿದ ಬಳಕೆದಾರಿಗೂ ಇದೆ ರೀತಿ ಮೆದುಳಿಗೆ ಹುಳಬಿಟ್ಟಿದೆ. ಈ ಒಗಟಿಗೆ ಬೆಂಕಿ ಎಂದು ಉತ್ತರಿಸಿದ್ದಾರೆ. ನೀವು ಈ ಒಗಟಿನ ಪ್ರಶ್ನೆಯನ್ನು ಓದಿ ಸರಿಯಾದ ಉತ್ತರ ಹೇಳಲು ಪ್ರಯತ್ನಿಸಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ