ಇಲ್ಲಿಯ ಚಟ್ನಿ ಸವಿಯಲು ಕ್ಯೂ ನಿಲ್ತಾರೆ ಆಹಾರ ಪ್ರಿಯರು; 50 ವರ್ಷ ಹಳೆಯ ಲಿಂಗಯ್ಯ ಟಿಫಿನ್ ಸೆಂಟರ್

ಇಲ್ಲಿಯ ಚಟ್ನಿ ಸವಿಯಲು ಕ್ಯೂ ನಿಲ್ತಾರೆ ಆಹಾರ ಪ್ರಿಯರು; 50 ವರ್ಷ ಹಳೆಯ ಲಿಂಗಯ್ಯ ಟಿಫಿನ್ ಸೆಂಟರ್

ಇಲ್ಲಿಯ ಚಟ್ನಿ ಸವಿಯಲು ಕ್ಯೂ ನಿಲ್ತಾರೆ ಆಹಾರ ಪ್ರಿಯರು; 50 ವರ್ಷ ಹಳೆಯ ಲಿಂಗಯ್ಯ ಟಿಫಿನ್ ಸೆಂಟರ್

ಅಪರೂಪದ, 50 ವರ್ಷದ ಹಳೆಯ ಟಿಫಿನ್ ಸೆಂಟರ್‌ಗಳಲ್ಲಿ ಮಲ್ಲೇಪಲ್ಲಿಯಲ್ಲಿರುವ ‘ಲಿಂಗಯ್ಯ ಟಿಫಿನ್ ಸೆಂಟರ್ ನಲ್ಲಿ  ಇಡ್ಲಿ ಮತ್ತು ವಡೆ ಜೊತೆ ನೀಡಲಾಗುವ ಚಟ್ನಿಗಾಗಿ ಜನರು ಬೆಳಗ್ಗೆಯೇ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ಲಿಂಗಯ್ಯ ಟಿಫಿನ್ ಸೆಂಟರ್ ಕೇವಲ ಒಂದು ಹೋಟೆಲ್ ಅಲ್ಲ, ಅದೊಂದು ಪರಂಪರೆ. ಸುಮಾರು 50 ವರ್ಷಗಳಿಂದ ಯಾವುದೇ ಆಡಂಬರವಿಲ್ಲದೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ತಿಂಡಿ ನೀಡುತ್ತಿದ್ದಾರೆ. ಕಾಲ ಬದಲಾದರೂ ಇಲ್ಲಿನ ರುಚಿ ಮಾತ್ರ ಸ್ವಲ್ಪವೂ ಬದಲಾಗಿಲ್ಲ ಎಂದು ಗ್ರಾಹಕರು ಹೇಳುತ್ತಾರೆ.

ಲಿಂಗಯ್ಯ ಟಿಫಿನ್ ಸೆಂಟರ್‌ನಲ್ಲಿ ಕೇವಲ ಇಡ್ಲಿ ಮತ್ತು ವಡಾ ಮಾತ್ರ ಸಿಗುತ್ತದೆ. ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾದ ಇಡ್ಲಿ, ಹೊರಗೆ ಗರಿಗರಿಯಾಗಿ ಒಳಗೆ ಸಾಫ್ಟ್ ಆಗಿರುವ ವಡಾ ಇಲ್ಲಿನ ವಿಶೇಷ. ಪ್ರತಿದಿನ ತಾಜಾ ಹಿಟ್ಟಿನಿಂದ ಬಿಸಿ ಬಿಸಿಯಾಗಿ ತಿಂಡಿ ತಯಾರಿಸುತ್ತಾರೆ. ಈ ಕಾರಣದಿಂದಲೇ ಹೈದರಾಬಾದ್‌ ನಗರದ ಜನತೆಗೆ ಲಿಂಗಯ್ಯ ಹೋಟೆಲ್ ಅಂದ್ರೆ ಅಚ್ಚುಮೆಚ್ಚು.

ಇಲ್ಲಿನ ತಿಂಡಿಗಳಿಗಿಂತ ಚಟ್ನಿಯೇ ಹೆಚ್ಚು ಫೇಮಸ್. ಅದರಲ್ಲೂ ಶೇಂಗಾ ಚಟ್ನಿ, ಇಡ್ಲಿ-ವಡಾದ ರುಚಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಸಾಂಪ್ರದಾಯಿಕವಾಗಿ ತಯಾರಿಸುವ ಈ ಚಟ್ನಿ ಮನೆಯ ರುಚಿಯನ್ನು ನೆನಪಿಸುತ್ತದೆ. ಈ ಚಟ್ನಿಗಾಗಿಯೇ ಜನ ಇಲ್ಲಿಗೆ ಮುಗಿಬೀಳುತ್ತಾರೆ. ಗ್ರಾಹಕರು ಪದೇ ಪದೇ ಕೇಳಿ ಚಟ್ನಿ ಹಾಕಿಸಿಕೊಂಡು ಸವಿಯುತ್ತಾರೆ.

ನಗರದಲ್ಲಿ ಬೆಲೆಗಳು ಗಗನಕ್ಕೇರುತ್ತಿದ್ದರೂ, ಲಿಂಗಯ್ಯ ಟಿಫಿನ್ ಸೆಂಟರ್‌ನಲ್ಲಿ ದರಗಳು ಸಾಮಾನ್ಯರಿಗೆ ಕೈಗೆಟುಕುವಂತಿವೆ. ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ಗುಣಮಟ್ಟದ ತಿಂಡಿ ಸಿಗುವುದು ಇಲ್ಲಿನ ವಿಶೇಷ. ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಇಲ್ಲಿ ಸಖತ್ ರಶ್ ಇರುತ್ತದೆ.

ಇದನ್ನೂ ಓದಿ: ಬೆಂಗಳೂರು: ಆಹಾರ ಪ್ರಿಯರ ಹಾಟ್‌ಸ್ಪಾಟ್‌ ಈ ಫುಡ್ ಸ್ಟ್ರೀಟ್

ಈ ಪ್ರಸಿದ್ಧ ಟಿಫಿನ್ ಸೆಂಟರ್ ಹೈದರಾಬಾದ್‌ನ ಮಲ್ಲೇಪಲ್ಲಿಯಲ್ಲಿದೆ. ಮಲ್ಲೇಪಲ್ಲಿ ಚೌರಸ್ತಾದಿಂದ ಕಾಮಾಲೆಗೆ ಮದ್ದು ಕೊಡುವ ಆಸ್ಪತ್ರೆ ದಾರಿಯಲ್ಲಿ ಈ ಸೆಂಟರ್ ಸಿಗುತ್ತದೆ. ಗೋಶಾಮಹಲ್ ಮತ್ತು ನಾಂಪಲ್ಲಿಗೆ ಇದು ಹತ್ತಿರದಲ್ಲಿದೆ. ನೀವು ಕೂಡ ಲಿಂಗಯ್ಯ ಟಿಫಿನ್ ಸೆಂಟರ್‌ನ ಚಟ್ನಿ ರುಚಿ ನೋಡಬೇಕೆಂದರೆ ಒಮ್ಮೆ ಮಲ್ಲೇಪಲ್ಲಿಗೆ ಭೇಟಿ ನೀಡಿ. ಹೈದಾರಾಬಾದ್‌ಗೆ ಹೋಗಿದ್ರೆ ಇಲ್ಲಿಗೆ ಭೇಟಿ ನೀಡುವುದನ್ನು ಮರೆಯಬೇಡಿ.

ಇದನ್ನೂ ಓದಿ: ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್

Source link

Leave a Reply

Your email address will not be published. Required fields are marked *