ಸೌದಿ ಅರೇಬಿಯಾದ ಮದುವೆಯೊಂದರಲ್ಲಿ ಅತಿಥಿಗಳಿಗೆ ವಧುವಿನ ಸಹೋದರ ಚಿನ್ನದ ಬಿಸ್ಕಟ್‌ಗಳನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 100 ಗ್ರಾಂ ತೂಕದ ಈ ಚಿನ್ನದ ಉಡುಗೊರೆಯನ್ನು ನೀಡಲಾಗಿದೆ.

ಮದುವೆಗೆ ಆಗಮಿಸಿದ ಅತಿಥಿಗಳಿಗೆ ವಧುವಿನ ಸೋದರ ಚಿನ್ನದ ಬಿಸ್ಕಟ್ ವಿತರಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಮುಂಚೆ ಈ ವಿಷಯ ಗೊತ್ತಿದ್ರೆ ನಾವು ಸಹ ಮದುವೆಗೆ ಹೋಗಬಹುದಿತ್ತು ಅಲ್ಲವಾ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇಂದು 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿದ್ದು, ಹಳದಿ ಸುಂದರಿ ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಜೀವನದ ಉಳಿತಾಯವನ್ನೆಲ್ಲಾ ಒಟ್ಟುಗೂಡಿಸಿ ಚಿನ್ನ ತೆಗೆಯುವ ಸಂದರ್ಭವಾಗಿದೆ. ಈ ತಿಂಗಳ ಆರಂಭದಲ್ಲಿ ಕೊಂಚ ಕುಸಿತ ಕಂಡಿದ್ದ ಚಿನ್ನ ಮತ್ತೆ ಏರಿಕೆಯಾಗುತ್ತಿದೆ.

ಇದೀಗ ಸೌದಿ ಅರೇಬಿಯಾದ ಮದುವೆಯ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹಲ್-ಚಲ್ ಸೃಷ್ಟಿಸಿದೆ. ಸುಮಾರು 100 ಗ್ರಾಂ ತೂಕವಿರುವಷ್ಟು ಶುದ್ಧ ಚಿನ್ನದ ಬಿಸ್ಕಟ್‌ಗಳನ್ನು ಅತಿಥಿಗಳಿಗೆ ಉಡುಗೊರೆ ರೂಪದಲ್ಲಿ ನೀಡಲಾಗಿದೆ. ವಧುವಿನ ಸೋದರ ಈ ಗಿಫ್ಟ್ ವಿತರಿಸಿದ್ದಾನೆ. ವಿಡಿಯೋದಲ್ಲಿ ಚಿನ್ನದ ಬಿಸ್ಕಟ್ ತೆಗೆದುಕೊಳ್ಳಲು ನಿರಾಕರಿಸಿರೋದನ್ನು ಸಹ ಗಮನಿಸಬಹುದು.

@FrontalForce ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈವರೆಗೆ 74 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಸೌದಿಯ ಶ್ರೀಮಂತದ ಕುಟುಂಬದ ಮದುವೆಯಲ್ಲಿ ಚಿನ್ನವನ್ನು ಕಾಣಿಕೆಯಾಗಿ ನೀಡಲಾಗಿದೆ ಎಂದು @grok ಸಹ ಖಚಿತಪಡಿಸಿದೆ.

ಇದನ್ನೂ ಓದಿ: ನಾನು ಠಾಕೂರ್ ನನಗೆ ಆ ಬಗ್ಗೆ ಗರ್ವ ಇದೆ: ವಿವಾದದ ಬಳಿಕ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ HDFC ಉದ್ಯೋಗಿ

ಈ ಮದುವೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ನನಗೂ ಇಂತಹ ಮದುವೆಗೆ ಯಾರಾದ್ರು ಆಹ್ವಾನಿಸಿದ್ರೆ ನಾನು ಖಂಡಿತವಾಗಿಯೂ ಸ್ವಇಚ್ಛೆಯಿಂದ ಹಾಜರಾಗುವೆ. ಇಂತಹ ಮದುವೆಗಳ ಮಾಹಿತಿಯಿದ್ರೆ ಮುಂಚಿತವಾಗಿಯೇ ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಪೊಲೀಸ್ ಆಗುವ ಕನಸು ಕಂಡವನಿಗೆ ತಾಳಿ ಭಾಗ್ಯ: ಯುವಕನ ಅಪಹರಿಸಿ ಮದುವೆ ಮಾಡಿದ ಹುಡುಗಿ ಕಡೆಯವರು

Source link
ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಹಂಚಿದ ವಧುವಿನ ಸೋದರ; ವಿಡಿಯೋ ನೋಡಿ ನೆಟ್ಟಿಗರಿಂದ ಮನವಿ