ರಾಯಸೇನ್, ಡಿಸೆಂಬರ್ 02: ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯ ಬರೇಲಿ-ಪಿಪರಿಯಾ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆಯೊಂದು ಸುರಸ್ತಿ ಕಾರ್ಯದ ವೇಳೆ ಕುಸಿದಿದೆ. ಘಟನೆಯಲ್ಲಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಏನಾಗುತ್ತಿದೆ.ನಯಾಗಾಂವ್ ಸೇತುವೆಯ ಬರೇಲಿ ಬದಿಯ ನಿರ್ವಹಣಾ ಕಾರ್ಯದಲ್ಲಿ ಒಂದು ಸ್ಪ್ಯಾನ್ ಕುಸಿದಿದೆ. ಎರಡು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಮಾಜಿ ಸಿಆರ್‌ಪಿಎಫ್ ಜವಾನ ದೇವೇಂದ್ರ ಧಕಾಡ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ