Headlines

ಪತ್ನಿ ಜೊತೆ ಸಹೋದರನ ಚಕ್ಕಂದ: ತೋಟಕ್ಕೆ ಕರೆದೊಯ್ದು ತಮ್ಮನನ್ನು ಅಣ್ಣನೇ ಕೊಂದ!

ಪತ್ನಿ ಜೊತೆ ಸಹೋದರನ ಚಕ್ಕಂದ: ತೋಟಕ್ಕೆ ಕರೆದೊಯ್ದು ತಮ್ಮನನ್ನು ಅಣ್ಣನೇ ಕೊಂದ!


ಶಿವಮೊಗ್ಗ, ಡಿಸೆಂಬರ್ 17: ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧಕ್ಕೆ ವ್ಯಕ್ತಿಯೋರ್ವ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಜೇಡಿಗೆರೆ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ (28) ಕೊಲೆಯಾದ ವ್ಯಕ್ತಿ, ಆತನ ಮಾಲತೇಶನೇ ಆರೋಪಿಯಾಗಿದ್ದಾನೆ. ಮಿಸ್ಸಿಂಗ್ ಕೇಸ್ ಬೆನ್ನತ್ತಿ ತನಿಖೆ ನಡೆಸಿದ ಪೊಲೀಸರು ತಮ್ಮನನ್ನು ಕೊಂದು ಅಮಾಯಕನಂತೆ ನಟಿಸುತ್ತಿದ್ದ ಕಳ್ಳತನವನ್ನು ಕುಟುಂಬದ ಅಣ್ಣನ ಎದುರು ಬಹಿರಂಗಪಡಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ರಾಮಚಂದ್ರ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆಗೆ ಮುಂದಾದಾಗ ಕೇಸ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಜೊತೆಗಿನ ಅನೈತಿಕ ಸಂಬಂಧದ ಕಾರಣ ರಾಮಚಂದ್ರನನ್ನು ಕೊಂದ ಮಾಲತೇಶ್, ಆತನನ್ನು ತೋಟದಲ್ಲಿ ಹೂತು ಹಾಕಿರೋದು ಗೊತ್ತಾಗಿದೆ. ಮಾಹಿತಿ ಆಧಾರದಲ್ಲಿ ತೋಟದಲ್ಲಿ ಗುಂಡಿ ತೆಗೆದು ಪರಿಶೀಲನೆ ನಡೆಸಿದಾಗ ರಾಮಚಂದ್ರನ ಶವ ಇದೆ.

ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರ ಲವ್ ಕಾಟಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಬೇಸ್ತು!

ಪಕ್ಕಾ ಪ್ಲ್ಯಾನ್ ಮಾಡಿ ಮರ್ಡರ್

ಹೆಂಡತಿ ಜೊತೆಗೆ ತಮ್ಮ ರಾಮಚಂದ್ರನ ಅಕ್ರಮ ಸಂಬಂಧದ ವಿಷಯಕ್ಕೆ ಅಣ್ಣ ಮಾಲತೇಶ್ ಸಿಟ್ಟಾಗಿದ್ದ. ಹೀಗಾಗಿ ಆತನ ಕೊಲೆಗೆ ಪ್ಲ್ಯಾನ್ ಮಾಡಿದ್ದ ಈತ, ಬೇಗ ಮದುವೆಯಾಗಲೆಂದು ಪೂಜೆ ನೆಪದಲ್ಲಿ ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ರಾಮಚಂದ್ರನನ್ನು ಕೆರೆದುಕೊಂಡು ಹೋಗಿದ್ದ. ಪೂಜೆ ನೆಪದಲ್ಲಿ ತಮ್ಮನಿಗೆ ಸರಿಯಾಗಿ ಮದ್ಯ ಕುಡಿಸಿ, ನಂತರ ಕಂಬಕ್ಕೆ ಕಟ್ಟಿ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆಗೂ ಮೊದಲೇ ಶವ ಹೂತು ಹಾಕಲು ಗುಂಡಿ ತೋಡಿ ಇಟ್ಟಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಶವವನ್ನು ಗುಂಡಿಯಲ್ಲಿ ಹೂತು ಹಾಕಿದ್ದ. ರಾಮಚಂದ್ರ ನಾಪತ್ತೆಯ ಬಗ್ಗೆ ಕುಟುಂಬದಲ್ಲಿ ಆತಂಕದಲ್ಲಿದ್ದರೂ ತಾನು ಅಮಾಯಕ ಎಂಬ ರೀತಿ ಪತ್ತೆಯಾಗಿದೆ. ಆದರೆ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಚಾರ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *