ಅಣ್ಣನೇ ತನ್ನ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ನಡೆದ ಗಲಾಟೆಯಲ್ಲಿ ಈ ಕೃತ್ಯ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಅಣ್ಣ ಮತ್ತು ತಂದೆಯನ್ನು ಬಂಧಿಸಿದ್ದಾರೆ.

ಒಡಹಹುಟ್ಟಿದ ತಮ್ಮನಿಗೆ ಅಣ್ಣನೇ ಚಾಕು ಇರಿದು ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ. ಮಾರ್ಚ 22ರಂದು ಸೋದರರ ನಡುವೆ ಗಲಾಟೆ ನಡೆದಿದೆ. ಈ ವೇಳೆ ತಮ್ಮನಿಗೆ ಅಣ್ಣ ಚಾಕುವಿನಿಂದ ಇರಿದಿದ್ದನು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಸಾವನ್ನಪ್ಪಿದ್ದಾನೆ.

29 ವರ್ಷದ ಸ್ಟಾಲಿನ್ ಮೃತ ವ್ಯಕ್ತಿ. ಈ ಸಂಬಂಧ ಸ್ಟಾಲಿನ್ ಹಿರಿಯ ಸೋದರ ನವೀನ್ ಮತ್ತು ತಂದೆ ಜಾನ್ ಪಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣನಿಂದ ಚಾಕು ಇರಿತಕ್ಕೊಳಗಾಗಿದ್ದ ಸ್ಟಾಲಿನ್ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಸ್ಟಾಲಿನ್ ಮಾರ್ಚ್ 28ರಂದು ಮೃತಪಟ್ಟಿದ್ದಾನೆ.

ಇತ್ತೀಚೆಗಷ್ಟೇ ಸ್ಟಾಲಿನ್‌ಗೆ ಮದುವೆ ಫಿಕ್ಸ್ ಆಗಿತ್ತು. ಆದ್ರೆ ಸ್ಟಾಲಿನ್ ತನ್ನ ಹಿರಿಯ ಸೋದರ ನವೀನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮದುವೆಯಾಗ್ತಿರೋ ಯುವತಿ ಗಂಭೀರ ಆರೋಪ ಮಾಡಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕಾಗಿ ಮಾರ್ಚ್ 22ರಂದು ನವೀನ್ ಮತ್ತು ಸ್ಟಾಲಿನ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಸ್ಟಾಲಿನ್ ಹೊಟ್ಟೆಗೆ ನವೀನ್ ಚಾಕುನಿಂದ ಚುಚ್ಚಿದ್ದಾನೆ.

ಚಾಕು ಇರಿತಕ್ಕೊಳಗಾಗಿದ್ದ ಸ್ಟಾಲಿನ್‌ನನ್ನು ತಂದೆ ಜಾನ್ ಸಹಾಯದೊಂದಿಗೆ ತುಮಕೂರಿನ ಖಾಸಗಿ ಅಸ್ಪತ್ರೆಗೆ ನವೀನ್ ದಾಖಲಿಸಿದ್ದನು. ಈ ವೇಳೆ ವೈದ್ಯರ ಬಳಿ ಮನೆಯಲ್ಲಿ ಕುಸಿದುಬಿದ್ದು ಹೊಟ್ಟೆಗೆ ಗಾಯವಾಗಿದೆ ಎಂದು ಜಾನ್‌ಪಾಲ್ ಹೇಳಿ ಪ್ರಕರಣ ಮುಚ್ಚಿ ಹಾಕಲು ಇಬ್ಬರು ಮುಂದಾಗಿದ್ದರು.

ಇದನ್ನೂ ಓದಿ: ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಳು, ಬೀಗ ಹಾಕಿ 10 ವರ್ಷ ಚಿಕ್ಕವನೊಂದಿಗೆ ಐನಾತಿ ಆಂಟಿ ಜೂಟ್!

ಹೊಟ್ಟೆಗೆ ಬಲವಾಗಿ ಇರಿದಿರೋದರಿಂದ ಆಗಿರುವ ಗಾಯ ಎಂದು ಚಿಕಿತ್ಸೆ ನೀಡಿದ್ದ ವೈದ್ಯರು ದೃಢಪಡಿಸಿದ್ದರು. ವಿಷಯ ತಿಳಿದು ಪೊಲೀಸರು ಜಾನ್ ಪಾಲ್ ಮತ್ತು ನವೀನ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇಬ್ಬರು ನಡೆದ ಘಟನೆಯನ್ನು ವಿವರಿಸಿದ್ದಾರೆ. ಇಬ್ಬರನ್ನು ಬಂಧಿಸಿರುವ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಸುರಿದು ಹೊಲದಲ್ಲಿದ್ದ 37 ಕ್ವಿಂಟಲ್ ಮೆಣಸಿನಕಾಯಿ ರಾಶಿಗೆ ಕಿಡಿಗೇಡಿಗಳಿಂದ ಬೆಂಕಿ

Source link
Tumakuru: ಹೆಂಡ್ತಿಯೊಂದಿಗೆ ಅಕ್ರಮ ಸಂಬಂಧ ಶಂಕೆ: ತಮ್ಮನ ಹೊಟ್ಟೆಗೆ ಚಾಕು ಚುಚ್ಚಿದ ಅಣ್ಣ