Headlines

ಮೈಸೂರಿನಲ್ಲೊಂದು ಘೋರ ದುರಂತ: ಬಾಲಕನ ಜೀವ ಕಾಪಾಡಿ ಪ್ರಾಣ ತೆತ್ತ ಸಹೋದರರು

ಮೈಸೂರಿನಲ್ಲೊಂದು ಘೋರ ದುರಂತ:  ಬಾಲಕನ ಜೀವ ಕಾಪಾಡಿ ಪ್ರಾಣ ತೆತ್ತ ಸಹೋದರರು


ಮೈಸೂರು, (ಅಕ್ಟೋಬರ್ 26): ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಕಾಪಾಡಲು ಹೋಗಿ ಇಬ್ಬರು ಸಹೋದರರು (ಸಹೋದರರು) ನೀರು ಪಾಲಾದ ಮೈಸೂರಿನ ಘಟನೆ (ಮೈಸೂರು) ಬಡಗಲಹುಂಡಿಯ ಉಪನಾಲೆಯಲ್ಲಿ ನಡೆದಿದೆ. ಬಡಗಲಹುಂಡಿ ಗ್ರಾಮದ ರಮೇಶ್ ಮಗನಾದ ನವವಿವಾಹಿತ ನಂದನ್ (25), ರಮೇಶ್ ಸಹೋದರನ ಪುತ್ರ ರಾಕೇಶ್ (20) ಜೀವ ಕಳೆದುಕೊಂಡವರು. ಈ ಇಬ್ಬರು ಸಹೋದರರ ಮಕ್ಕಳು ಆಗಿದ್ದಾರೆ. ಮಂಜು ಎಂಬ ಬಾಲಕ ವರಣ ನಾಲೆಯಲ್ಲಿ ಈಜಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಮಂಜು ಮುಳುಗುತ್ತಿರುವುದನ್ನು ಸಹೋದರರಿಬ್ಬರು ನೋಡಿ ಕೂಡಲೇ ನಾಲೆಗೆ ಹಾರಿ ಕಾಪಾಡಿದ್ದಾರೆ. ಆದರೆ, ಆದರೆ ದುರದೃಷ್ಟವಶಾತ್ ನಂದನ್ ಹಾಗೂ ರಾಕೇಶ್ ನೀರು ಪಾಲಾಗಿದ್ದಾರೆ.

ಮಂಜು ಎಂಬ ಬಾಲಕ ವರಣ ನಾಲೆಯಲ್ಲಿ ಈಜಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಮಂಜು ಮುಳುಗಿದ್ದಾನೆ. ಇನ್ನೊಂದೆಡೆ ಗೊಬ್ಬರ ತೆಗೆದುಕೊಂಡ ನಾಲೆಯ ಶಸ್ತ್ರಚಿಕಿತ್ಸೆಯಲ್ಲಿ ಹೋಗುತ್ತಿದ್ದ ಸಹೋದರರು ತಕ್ಷಣ ನೀರಿಗೆ ಹಾರಿ ಮುಳುಗುತ್ತಿದ್ದವನನ್ನ ರಕ್ಷಣೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ನಂದನ್ ಹಾಗೂ ರಾಕೇಶ್ ನೀರು ಪಾಲಾಗಿದ್ದಾರೆ. ಮೃತ ನಂದನ್, ರಾಕೇಶ್ ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದರೆ ಸಹೋದರ. ಇದೀಗ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿ ದುರಂತ ಅಂತ್ಯಕಂಡ ಸಹೋದರರು

ಆಗಿದ್ದೇನು?

8ನೇ ತರಗತಿ ಓದುತ್ತಿರುವ ಮಂಜಿನ ನಾಲೆಯಲ್ಲಿ ಈಜು ಹೊಡೆಯುತ್ತಿದ್ದ. ಈತನ ಜೊತೆ ಇನ್ನು ಮೂವರು ಬಾಲಕರಿದ್ದರು. ಈ ವೇಳೆ ಮಂಜ ಸುಸ್ತಾಗಿ ನಾಲೆಯ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ನಾಲೆಯ ರಸ್ತೆಯಲ್ಲಿ ಜಮೀನಿಗೆ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದ ನಂದನ್ ಹಾಗೂ ರಾಕೇಶ್ ಬಾಲಕ ಮಂಜನ ರಕ್ಷಣೆಗೆ ಮುಂದಾಗಿದ್ದಾರೆ. ಹಿಂದೆ ಮುಂದೆ ನೋಡದೆ ನಾಲೆಗೆ ಹಾರಿದ್ದಾರೆ.

ನಾಲೆಗೆ ಹಾರಿದ ನಂದನ್‌ಗೆ ಈಜು ಬರುತಿತ್ತು ಆದರೆ ರಾಕೇಶ್‌ಗೆ ಈಜು ಬರುತ್ತಿತ್ತು. ಇದರಿಂದ ಬಾಲಕನ ರಕ್ಷಣೆ ಮಾಡಿ ಇಬ್ಬರು ನಾಲೆಯಲ್ಲಿ ಕೊಚ್ಚಿ ಹೋಗಿದ್ದು, ಮೃತದೇಹ ಅಲ್ಲಿಂದ 500 ಮೀಟರ್ ದೂರದಲ್ಲಿದೆ.

11 ದಿನದ ಹಿಂದಷ್ಟೇ ಮದ್ವೆಯಾಗಿದ್ದ ನಂದನ್

ದುರಂತ ಅಂದ್ರೆ ನಂದನ್ 11 ದಿನದ ಹಿಂದಷ್ಟೇ ಚನ್ನಪಟ್ಟಣ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇನ್ನು ಅರಿಶಿನದ ಮೈ ಒಣಗಿದ ನಂದನ್ ಶವವಾಗಿದ್ದಾನೆ. ಇನ್ನು ಚಿಕ್ಕಪ್ಪನ ಮಗ ರಾಕೇಶ್ ಸದಾ ನಂದನ್ ಜೊತೆ ಇರುತ್ತಿದ್ದ. ಇದೀಗ ಸಾವಿನಲ್ಲೂ ಇವರು ಒಂದಾಗಿದ್ದರೆ ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.

ಬದುಕಿಬಂದ ಘಟನೆ ವಿವರಿಸಿದ ಮಂಜು

ಇನ್ನು ಬಾಲಕ’ ಮಂಜು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾನೆ. ಆತ ಇನ್ನು ಶಾಕ್ ನಲ್ಲಿದ್ದು ಘಟನೆಯನ್ನು ಟಿವಿ9 ಬಳಿ ವಿವರಿಸಿದ್ದಾನೆ. ವರುಣ ಉಪನಾಲೆಗೆ ಈಜಲು ಹೋಗಿದ್ದೆ. ನನ್ನ ಜೊತೆ ಯಾರಿಲ್ಲ ಅಲ್ಲಿ ಮೂರು ನಾಲ್ಕು ಜನರ ಇಬ್ಬರು. ಈಜುತ್ತಾ ನನಗೆ ಸುಸ್ತಾಯಿತು ನೀರಿನಲ್ಲಿ ಕಾಲು ಬಿಟ್ಟು ಬಿಟ್ಟೆ. ಆಗ ಮುಳುಗುತ್ತಿತ್ತು. ಅದಾದ ಮೇಲೆ ಏನಾಯ್ತು ಗೊತ್ತಾಗಲಿಲ್ಲ.ಕಣ್ಣು ಬಿಟ್ಟಾಗ ಮನೆಯಲ್ಲಿದ್ದ ಘಟನೆಯನ್ನು ವಿವರಿಸಿದ್ದಾನೆ.

ಬದುಕುಳಿದ ಮಗ ಬಗ್ಗೆ ತಂದೆ ಹೇಳಿದ್ದೇನು?

ಮಗ ಬದುಕುಳಿದ ಟಿವಿ9ಗೆ ಮಂಜು ತಂದೆ ರವಿ ಪ್ರತಿಕ್ರಿಯಿಸಿದ್ದು, ಮೊದಲು ನನ್ನ ಮಗ ಸತ್ತು ಹೋಗಿದ್ದಾನೆ ಎಂದು ಹೇಳಿದರು. ನನಗೆ ಆತಂಕ ಗಾಬರಿಯಾಗಿತ್ತು. ಸ್ವಲ್ಪ ಸಮಯದ ನಂತರ ನನ್ನ ಮಗ ಬದುಕಿದ್ದಾನೆ ಅಂದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯ್ತು. ಮಂಜು ಘಟನೆಯಲ್ಲಿ ಸಾಕಷ್ಟು ನೀರು ಕುಡಿದಿದೆ. ಎಲ್ಲವನ್ನೂ ಹೊರಗೆ ತೆಗೆದರು ನಂತರ ಬದುಕುಳಿದ. ನನ್ನ ಕೈ ನೋವು ಎನ್ನುತ್ತಿದ್ದಾನೆ. ಈತ ಈಜಲು ಹೋಗುತ್ತಾನೆ ಎಂದು ನನಗೆ ಗೊತ್ತಿರಲಿಲ್ಲ. ಈ ರೀತಿ ಆದಾಗಲೇ ಈ ಬಗ್ಗೆ ನನಗೆ ಗೊತ್ತಾಗಿದ್ದು. ಆದರೆ, ಯುವಕರ ಸಾವು ತುಂಬಾ ನೋವಾಗಿದೆ ಎಂದು ಕಣ್ಣೀರಿಟ್ಟರು.



Source link

Leave a Reply

Your email address will not be published. Required fields are marked *