ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು

ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು


ಮಂಗಳೂರು/ಬೆಂಗಳೂರು, ಫೆಬ್ರವರಿ 20: ಬಿಎಸ್ಎನ್ಎಲ್ ಕಚೇರಿಯಲ್ಲಿ ಅಧಿಕಾರಿಗಳು 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ, BSNL ಸಹಾಯಕ ಅಧಿಕಾರಿ ಸೂಪರಿಂಟೆಂಡೆಂಟ್ ತನ್ವೀರ್ ಪಾಷಾ(50), ಟೆಲಿಕಾಂ ಟೆಕ್ನಿಷಿಯನ್ ಕೆ.ಕೆ.ಚಾಮಿ(59) ಹಾಗೂ L&T ಕಂಪನಿ ಕೇಬಲ್ ಜೈಂಟರ್ ಡಿ.ಮಂಜುನಾಥ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಮತ್ತು 10 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಉಂಡ ಮನೆಗೆ ಕನ್ನ ಹಾಕಿದವರೀಗ ಕಂಬಿ ಹಿಂದೆ ಸೇರಿದ್ದಾರೆ.

ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ಆರೋಪ

ಎಜುಕೇಷನ್ ಟ್ರಸ್ಟ್‌ಗೆ ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಎಸ್ಆರ್ ಫಂಡ್ನಲ್ಲಿ ಬರೋಬ್ಬರಿ 100 ಕೋಟಿ ನೀಡುವುದಾಗಿ ಬೆಂಗಳೂರಿನ ಹೆಣ್ಣೂರಿನಲ್ಲಿರುವ ಖಾಸಗಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಯೋರ್ವರಿಗೆ ನಂಬಿಸಲಾದ ಆರೋಪಿಗಳು, ಹಣ ರಿಲೀಸ್ ಮಾಡುವ ನೆಪದಲ್ಲಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಪಡೆದು ವಂಚಿಸಿರೋದಾಗಿ ದೂರುದಾರ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಮೋಹನ್ ದಾಸ್ ಪೈ ಕೆಂಡಾಮಂಡಲ

ಟ್ರಸ್ಟ್ ಅಭಿವೃದ್ಧಿ ಮಾಡುವ ಉದ್ದೇಶದ ಹಿನ್ನೆಲೆ ಅಮರಪಲ್ಲಿ ಸುರೇಶ್ ಎಂಬುವವರನ್ನು ದೂರುದಾರರನ್ನು ಭೇಟಿಯಾಗಿದ್ದರು. ಸುರೇಶ್ ದೂರುದಾರರ ಸ್ವಂತ ತೀರ್ಥಹಳ್ಳಿಯವರೇ ಆಗಿರುವ ವಿಚಾರ ತಿಳಿದು ವೈಯಕ್ತಿಕ ಸಮಸ್ಯೆ ಕೂಡ ಹೇಳಿಕೊಂಡಿದ್ದಾರೆ. ಇನ್ನು ನೂರು ಕೋಟಿ ಹಣ ಕೊಡಿಸುವುದಾಗಿ ನಂಬಿಸಿರುವ ಸುರೇಶ್ , ನಂತರ ಸಹಾಯದ ನೆಪದಲ್ಲಿ ವೆಂಕಟರಾಮ ಭಟ್ , ಹೈದರಾಬಾದ್ ನಲ್ಲಿ ಅತುಲ್ ಕುಮಾರ್ ಎಂಬುವವರ ಪರಿಚಯ ಮಾಡಿಕೊಂಡಿದ್ದರು. ಈ ವೇಳೆ 100 ಕೋಟಿ ಹಣ ಟ್ರಸ್ಟ್‌ಗೆ ನೀಡುವ ಸಂಬಂಧ ದಾಖಲೆಗಳ ಪರಿಶೀಲನೆ ಮಾಡಬೇಕು ಎಂದು ಅತುಲ್ ಹೇಳಿದ್ದಾರೆ. ವೆಂಕಟರಾಮ ಭಟ್ ಕೂಡ ದೂರುದಾರರಿಗೆ ಕರೆ ಮಾಡಿ ಕೆಲ ದಾಖಲೆ ಮಿಸ್ ಆಗಿದ್ದರು ಎಂದಿದ್ದರು. ಜೊತೆಗೆ ಅತುಲ್ ಬೆಂಗಳೂರಿಗೆ ಬರೋದಾಗಿ ತಿಳಿಸಿದ್ದ ಕಾರಣ ವಿಮಾನ ಟಿಕೆಟ್, ಉಳಿದುಕೊಳ್ಳುವ ಹೋಟೆಲ್ ಖರ್ಚುವೆಚ್ಚವನ್ನು ದೂರುದಾರರೇ ಭರಿಸಿದ್ದರು. ಆದರೆ ಹಣ ರಿಲೀಸ್ ನಲ್ಲಿ ಲಕ್ಷಾಂತರ ರೂಪಾಯಿ ಪಡೆದಿರುವ ಆರೋಪಿಗಳು, ಬಳಿಕ ದೂರುದಾರರ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಪ್ಲ್ಯಾನ್ ವಂಚಿಸಿರೋದಾಗಿ ಆರೋಪಿಸಿ ಖಾಸಗಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:59 am, ಶುಕ್ರ, 20 ಫೆಬ್ರವರಿ 26



Source link

Leave a Reply

Your email address will not be published. Required fields are marked *