Headlines

Union Budget 2026 : ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ: ಮಹತ್ವದ ಘೋಷಣೆ

Union Budget 2026 : ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ: ಮಹತ್ವದ ಘೋಷಣೆ


ವಿತ್ತ ಸಚಿವರಿಂದ ಮಹತ್ವದ ಘೋಷಣೆಚಿತ್ರದ ಕ್ರೆಡಿಟ್ ಮೂಲ: ಗೂಗಲ್

ನವದೆಹಲಿ, ಫೆ. 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ದಾಖಲೆಯ 9ನೇ ಬಜೆಟ್ ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಏಪ್ರಿಲ್ 1 ರಿಂದ ನೂತನ ಐಟಿ ಕಾಯ್ದೆಯ ಬಗ್ಗೆ ಸಚಿವರು ಮಾಹಿತಿ ನೀಡಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ರವರೆಗೂ ಅವಕಾಶ ನೀಡಿರೋದಾಗಿ. ಆದಾಯ ತೆರಿಗೆಯಲ್ಲಿ ಅಪರಾಧ ಮಾಡಿದ್ರೆ ಶಿಕ್ಷೆ ಬಗ್ಗೆ ಕೋರ್ಟ್ ನಲ್ಲಿ ತೀರ್ಮಾನ ಆಗಲಿದೆ. ಸಣ್ಣಗಳಿಗೆ ಕೇವಲ ದಂಡ ಮಾತ್ರ ಎಂದು ಅಪರಾಧ ತೆರಿಗೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿಯೂ ಶೇ.2ರಷ್ಟು TCS ಕಡಿತ ಮಾಡಿದ್ದರೆ, ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇರಲ್ಲ. ವಿದೇಶಿ ಪ್ರವಾಸ ಕೈಗೊಳ್ಳುವವರಿಗೂ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪ್ರಯಾಣದ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ವಿದೇಶಿ ಪ್ರಯಾಣಕ್ಕಾಗಿ ಟಿಸಿಎಸ್ ದರವನ್ನು ಶೇರ್ ಮಾಡಿ. 5ಕ್ಕೆ ಇಳಿಸಲಾಗಿದೆ. ಜುಲೈ 31ರವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಈ ಕಾನೂನು ಅಘೋಷಿತ ಆದಾಯವನ್ನು ಒಂದು ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಸಹ ಪ್ರಸ್ತಾಪಿಸಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2026-27, ಪಿಡಿಎಫ್ ಪ್ರತಿ ಡೌನ್‌ಲೋಡ್ ಮಾಡಿ

ಐಟಿ ಸೇವೆಗಳಿಗಾಗಿ ಸೇಫ್ ಹಾರ್ಬರ್ ಮಿತಿಯನ್ನು 300 ಕೋಟಿಯಿಂದ 2,000 ಕೋಟಿಗಳಷ್ಟು ಹೆಚ್ಚಿಸಲಾಗಿದೆ. ಜಾಗತಿಕ ಗ್ರಾಹಕರ ಕ್ಲೌಡ್ ಸೇವೆ ನೀಡುವ ಕಂಪನಿಗಳಿಗೆ 2047 ರವರೆಗಿನ ತೆರಿಗೆ ರಜೆ, ಭಾರತದ ಮುನ್ಸಿಪಲ್ ಬ್ಯಾಂಡ್‌ಗಳ ವಿತರಣೆಗಾಗಿ 100 ಕೋಟಿ ಪ್ರೋತ್ಸಾಹಧನವನ್ನು ಘೋಷಿಸಲಾಗಿದೆ. ಫ್ಯೂಸ್ ಮೇಲಿನ STT ಅನ್ನು 0.02% ರಿಂದ 0.05%ಕ್ಕೆ ಹೆಚ್ಚಿಸಲಾಗಿದೆ. ಮೀನುಗಾರಿಕಾ ಹಡಗುಗಳು ಎಕ್ಸ್‌ಕ್ಲೂಸಿವ್ ಏಕನಾಮಿಕ್ ಝೋನ್‌ನಲ್ಲಿ ಹಿಡಿಯುವ ಮೀನಿನ ಮೇಲೆ ಸುಂಕ ವಿನಾಯಿತಿಯನ್ನು ಕೇಂದ್ರ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *