Headlines

ಬಜೆಟ್​​ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​ಗಳ ಹವಾ

ಬಜೆಟ್​​ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​ಗಳ ಹವಾ


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದರು, ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ (ಮೀಮ್ಸ್) ಮಹಾಪೂರವೇ ಹರಿದುಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನೆಟ್ಟಿಗರು ಹಾಸ್ಯ ಪುಸ್ತಕವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. “ಹೊಸ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಸಿಗುತ್ತೆ ಅಂತಿರೋ ಮಧ್ಯಮ ವರ್ಗದ ಜನ” ಎಂಬ ಶೀರ್ಷಿಕೆಯಡಿ, ಹಳೆಯ ಸಿನಿಮಾದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ . ಸರ್ಕಾರ ನಮಗೆ ಏನು ಕೊಡುತ್ತೆ ಅನ್ನೋದಕ್ಕಿಂತ, ನಮ್ಮಿಂದ ಏನು ತಗೋಲ್ಲ ಅನ್ನೋದೇ ದೊಡ್ಡ ಬಜೆಟ್” ಎಂಬ ಸಾಲುಗಳು ಸಿಕ್ಕಾಪಟ್ಟೆ ಶೇರ್ ಆಗುತ್ತಿವೆ.

ಬಜೆಟ್ ಭಾಷಣದ ವೇಳೆ ಸಚಿವರು ಬಳಸುವ ‘ಫಿಸ್ಕಲ್ ಡಿಫಿಸಿಟ್’, ‘ಕ್ಯಾಪೆಕ್ಸ್’, ‘ಜಿಡಿಪಿ ಗ್ರೋತ್’ ಅಂತಹ ಪದಗಳನ್ನು ಕೇಳಿ ಸಾಮಾನ್ಯ ಜನರು ಗಾಬರಿಯಿಂದ ನೋಡುತ್ತಿರುವ ‘ರಿಯಾಕ್ಷನ್ ವಿಡಿಯೋ’ಗಳು ನಗು ತರಿಸುತ್ತಿದೆ. “ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ” ಅನ್ನೋ ರೀತಿಯ ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಕಾಮಿಡಿ ದೃಶ್ಯಗಳನ್ನು ಜನ ಬಳಸುತ್ತಿದ್ದಾರೆ. ಇದರೊಂದಿಗೆ ಕಳೆದ ಬಜೆಟ್‌ಗಳಲ್ಲಿ ಮೈತ್ರಿ ಪಕ್ಷಗಳ ರಾಜ್ಯಗಳಿಗೆ ಸಿಕ್ಕ ಪ್ರಾಮುಖ್ಯತೆಯನ್ನು ನೆನಪಿಸಿಕೊಂಡು, ಈ ಬಾರಿಯೂ “ನಮಗೆ ಏನು ಸಿಗುತ್ತೆ?” ಅಂತ ಕಾಯುತ್ತಿರುವ ಪ್ರಾದೇಶಿಕ ನಾಯಕರ ಮೀಮ್‌ಗಳು ಸದ್ದು ಮಾಡುತ್ತಿವೆ.

ಜೆಟ್‌ಗೆ ಮುನ್ನ ನಡೆದ ಹಲ್ವಾ ಸೆರೆಮನಿ ಇಟ್ಟುಕೊಂಡು, “ಹಲ್ವಾ ತಿನ್ನೋರು ಅವರು, ನಮಗೆ ಹಲ್ವಾ ಕೊಡೋರು” (ನಮಗೆ ಮೋಸ ಮಾಡ್ತಾರೆ ಅನ್ನೋ ಅರ್ಥದಲ್ಲಿ) ಎಂಬ ಕಾಲೆಳೆಯುವ ಪೋಸ್ಟ್‌ಗಳು ಹರಿದಾಡುತ್ತಿವೆ. (ಏನು ಅಗ್ಗವಾಗಿದೆ?) ಅಂತ ಹುಡುಕುವ ವಿಡಿಯೋಗಳು ಮತ್ತು “ಸಿಗರೇಟ್ ಬೆಲೆ ಏರಿಕೆ” ಬಗ್ಗೆ ಬರುವ ತಮಾಷೆಯ ಪೋಸ್ಟ್‌ಗಳು ಟ್ರೆಂಡ್ ಆಗುತ್ತಿವೆ. ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಭಾರಿ ವಿನಾಯಿತಿ ಸಿಗುತ್ತೆ ಎಂದು ಕಾದು ಕುಳಿತವರಿಗೆ ‘ಏನೂ ಸಿಗಲಿಲ್ಲ’ ಎಂಬ ಅರ್ಥದಲ್ಲಿ ಈ ಹಳೆಯ ಚಿತ್ರದ ದೃಶ್ಯವನ್ನು ಬಳಸಲಾಗುತ್ತಿದೆ.” ನನ್ನ ಅಕೌಂಟ್‌ನಲ್ಲಿ 470 ರೂ. ಇದೆ, ಆದ್ರೂ ನಾನು ಬಜೆಟ್ ನೋಡುತ್ತೇನೆ” ಎಂಬ ಮಾಧ್ಯಮ ವರ್ಗದವರ ಪರಿಸ್ಥಿತಿಯನ್ನು ಹಾಸ್ಯಮಯವಾಗಿ ಬಿಂಬಿಸುತ್ತದೆ.

ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಸರ್ಕಾರವು ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ಮೇಲಿನ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಅನ್ನು ಹೆಚ್ಚಿಸಿದೆ, ಟ್ರೇಡರ್‌ಗಳು ಎಂಬ ಲಗಾನ್ ಸಿನಿಮಾ ಶೈಲಿಯ ಮೀಮ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ರ್ಷಪೂರ್ತಿ ಹಣಕಾಸಿನ ಬಗ್ಗೆ ಅರಿವಿಲ್ಲದವರು ಬಜೆಟ್ ದಿನ ಮಾತ್ರ “ದೇಶದ ಜಿಡಿಪಿ ಹಾಗಿದೆ, ಫಿಸ್ಕಲ್ ಡೆಫಿಸಿಟ್ ಹೀಗಿದೆ” ಎಂದು ವಿಶ್ಲೇಷಣೆ ಮಾಡುವುದನ್ನು ಲೇವಡಿ ಮಾಡುವ ಮೀಮ್‌ಗಳು ವೈರಲ್ ಆಗಿವೆ. “ಬಜೆಟ್ ದಿನದಂದು ಅರ್ಥ ಪಟ್ಟಿಯ ಸಂಖ್ಯೆಯ ಏರಿಕೆ” ಎಂಬ ಶೀರ್ಷಿಕೆಯಡಿ ಗಣಿತದ ಗ್ರಾಫ್ಗಳನ್ನು ಬಳಸಲಾಗುತ್ತಿದೆ.

ಬಜೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *