Headlines

ಕಾನ್ಪುರದಲ್ಲಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್; ಕಿಟಕಿ ಒಡೆದು ಪ್ರಯಾಣಿಕರು ಪಾರು

ಕಾನ್ಪುರದಲ್ಲಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್; ಕಿಟಕಿ ಒಡೆದು ಪ್ರಯಾಣಿಕರು ಪಾರು


ಕಾನ್ಪುರ, ನವೆಂಬರ್ 28: ಇತ್ತೀಚೆಗೆ ಸಾಲು-ಸಾಲಾಗಿ ಬಸ್ ಬೆಂಕಿ ದುರಂತದ ಘಟನೆಗಳು ನಡೆಯುತ್ತಿವೆ. ಇಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ (ಅಗ್ನಿ ಅವಘಡ) ಹೊತ್ತಿಕೊಂಡಿದೆ. ಬಸ್ಸು ವೇಗವಾಗಿ ಹೋಗುತ್ತಿದ್ದುದರಿಂದ ಆ ಬಸ್‌ಗೆ ಹೊತ್ತಿಕೊಂಡ ಬೆಂಕಿ ಇಡೀ ಬಸ್‌ಗೆ ಆವರಿಸಿ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು.

ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಬಸ್ ಇಂದು ಬೆಳಿಗ್ಗೆ 10.30 ರ ಸುಮಾರಿಗೆ ನೌಬಸ್ತಾ-ರಾಮದೇವಿ ರಾಷ್ಟ್ರೀಯ ಹೆದ್ದಾರಿಯ ಬಳಿ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿದರು. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಪ್ರಯಾಣಿಕರು ಕಿಟಕಿ ಗಾಜುಗಳನ್ನು ಮುರಿದು ಅಪಾಯದಿಂದ ಪಾರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *