Headlines

ನಟ ಎಂದುಕೊಂಡು ಇನ್ಯಾರನ್ನೋ ಕಿಡ್ನ್ಯಾಪ್​​: ಹಲ್ಲೆ ಮಾಡಿ ಬೆದರಿಕೆ ಹಾಕಿ ಬಿಟ್ಟುಕಳಿಸಿದ ಖದೀಮರು

ನಟ ಎಂದುಕೊಂಡು ಇನ್ಯಾರನ್ನೋ ಕಿಡ್ನ್ಯಾಪ್​​: ಹಲ್ಲೆ ಮಾಡಿ ಬೆದರಿಕೆ ಹಾಕಿ ಬಿಟ್ಟುಕಳಿಸಿದ ಖದೀಮರು


ನಟ ಎಂದುಕೊಂಡು ಇನ್ಯಾರನ್ನೋ ಕಿಡ್ನ್ಯಾಪ್ : ಹಲ್ಲೆ ಮಾಡಿ ಬೆದರಿಕೆ ಹಾಕಿ ಬಿಟ್ಟುಕಳಿಸಿದ ಖದೀಮರು

ಬೆಂಗಳೂರು, ಮಾರ್ಚ್ 28: ವ್ಯಕ್ತಿ ತನ್ನ ಪಾಡಿಗೆ ತಾನು ಚಹಾ ಕುಡಿಯುತ್ತಾ ಅಂಗಡಿಯೊಂದರ ಬಳಿ ನಿಂತಿದ್ದ. ಇದೇ ವೇಳೆ ಆಗಮಿಸಿದ ಮೂವರು ಕಿಡಿಗೇಡಿಗಳು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ನೋಡ ನೋಡುತ್ತಿದ್ದಂತೆ ವ್ಯಕ್ತಿಯನ್ನ ಆಟೋದಲ್ಲಿ ಹತ್ತಿಸಿದ್ದಾರೆ (ಅಪಹರಣ). ಸ್ವಲ್ಪ ಹೊತ್ತಲ್ಲೇ ಆಟೋದಿಂದ ಇಳಿಸಿ ಬೆದರಿಕೆ ಹಾಕಿ ಬಿಟ್ಟುಕಳುಹಿಸಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಘಟನೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ ನಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ಶರತ್ ಕಿಡ್ನ್ಯಾಪ್ ಆಗಿದ್ದ ವ್ಯಕ್ತಿ. ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ. ಮೂರು ದಿನದ ಹಿಂದೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ ಬಳಿ ತನ್ನ ಸ್ನೇಹಿತನ ಜೊತೆಗೆ ಚಹಾ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಆಟೋದಲ್ಲಿ ಬಂದ ಮೂವರ ಗ್ಯಾಂಗ್ ನೀನು ಹೀರೋನಾ ಎಂದು ವಿಚಾರಿಸಿದ್ದಾರೆ. ನಾನು ಅವನಲ್ಲ ಅಂತ ಶರತ್ ಹೇಳಿದ್ದರು, ಸುಳ್ಳು ಹೇಳುತ್ತೀಯಾ ಎಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ.

ನಟನಲ್ಲ ಎಂದಾಗ ಬಿಟ್ಟುಕಳುಹಿಸಿದ ಖದೀಮರು

ಒಬ್ಬಾತ ತನ್ನ ಕೈಯಲ್ಲಿದ್ದ ಡ್ಯಾಗರ್ ನಿಂದ ಶರತ್ ಮುಖಕ್ಕೆ ಹೊಡೆದಿದ್ದಾನೆ. ನೋಡನೋಡುತ್ತಿದ್ದಂತೆ ಶರತ್ ನನ್ನ ಆಟೋದಲ್ಲಿ ನೂಕಿ ಸ್ವಲ್ಪ ದೂರ ಕರ್ಕೊಂಡು ಹೋಗಿದ್ದರು. ದಾರಿಯಲ್ಲಿ ಶರತ್ ಅಕ್ಕನಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಶರತ್ ಫೋನ್ ಪರಿಶೀಲಿಸಿ ಇವನು ನಟ ಅಲ್ಲ ಅಂತ ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿದ ಪತ್ನಿ!

ಯಾರು, ಯಾಕೆ, ಏನಾಗುತ್ತಿದೆ ಅಂತ ಗೊತ್ತಾಗದೇ ಶರತ್ ದಿಗ್ಬಾಂತ ಇದ್ದಾರೆ. ಕೆಲ ಹೊತ್ತು ಸುಧಾರಿಸಿಕೊಂಡು ಬ್ಯಾಡರಹಳ್ಳಿ ಠಾಣೆಗೆ ಬಂದು ದೂರು. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಪುಂಡರ್ ಗ್ಯಾಂಗ್ ಪತ್ತೆಗೆ ಬಲೆಬೀಸಿದ್ದಾರೆ.

ಪ್ರೀತಿಸಿದವಳನ್ನ ಕಿಡ್ನ್ಯಾಪ್ ಮಾಡಿ ಅತ್ತೆಗೆ ಚಾಕು ಹಾಕಿದ್ದ ವ್ಯಕ್ತಿ ಸೇರಿ ನಾಲ್ವರ ಬಂಧನ

ಕೌಟುಂಬಿಕ ವಿಚಾರಕ್ಕೆ ಅತ್ತೆಗೆ ಚಾಕು ಹಾಕಿದ್ಧ ವ್ಯಕ್ತಿ ಸೇರಿದಂತೆ ನಾಲ್ವರನ್ನು ಆಡುಗೋಡಿ ಬಂಧಿಸಿದ್ದಾರೆ. ಮಣಿಕಿರಣ್, ಅಭಿಷೇಕ್, ಮನಿರಾಜ್ ಮತ್ತು ಮನಿವಣ್ಣನ್ ಬಂಧಿತರು. ಮಾ.25ರಂದು ಮಾಗೇಶ್ವರಿ ಎಂಬುವರ ಮನೆಯಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ: ಸಕಲೇಶಪುರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಕಿರಣ್‌ಗೆ ಮದುವೆಯಾಗಿದ್ದರೂ ಮಗೇಶ್ವರಿ ಮೊಮ್ಮಗಳಾದ ಚಾರುಲತಾಳನ್ನ ಕರೆದುಕೊಂಡು ಹೋಗಿದ್ದ. ಕೆಲವು ದಿನಗಳ ಹಿಂದೆ ಕಿರಣ್ ಬಿಟ್ಟು ಬಂದಿದ್ದ ಚಾರುಲತಾ ಅಜ್ಜಿ ಜೊತೆ ಇದ್ದಳು. ಮಾ.25ರಂದು ಚಾರುಲತಾ ಅವರನ್ನು ಹುಡುಕಿ ಬಂದಿದ್ದ ಕಿರಣ್ ಮತ್ತು ಕುಟುಂಬ ಬಲವಂತವಾಗಿ ಆಕೆಯನ್ನು ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗಿದ್ದರು. ತಡೆಯಲು ಬಂದ ವೃದ್ಧೆ ಮಾಗೇಶ್ವರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು. ಸದ್ಯ ನಾಲ್ವರನ್ನು ಬಂಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *