ಕೊಪ್ಪಳ, ಡಿಸೆಂಬರ್ 01: ಟೀಚರ್ಸ್‌ಗೆ ಜ್ಞಾನ ಇರಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ವಿವಾದಾತ್ಮಕ ಹೇಳಿಕೆ. ನಿನ್ನೆಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಅಭಿನಂದನಾ ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗೆ ಉತ್ತರಿಸುವ ವೇಳೆ ಷಡಕ್ಷರಿ ಅವರು ಆಡಿರುವ ಮಾತುಗಳೀಗ ಭಾರಿ ಚರ್ಚೆಗೆ ಗ್ರಾಸವಾಯಿತು. ಶಿಕ್ಷಕ ಬಾಳಪ್ಪ ಕಾಳೆ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಶಿಕ್ಷಕರಿಗೆ ನಾಲೆಡ್ಜ್ ಇರಲ್ಲ ಎಂದು ಷಡಕ್ಷರಿ ಅವರು ಹೇಳಿದರು, ಇದಕ್ಕೆ ಬಾಳಪ್ಪ ಕಾಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಾನು ಹೇಳೋದು ಕೇಳಿಸಿಕೊಳ್ಳಿ. ಅಕಾಡೆಮಿಕ್ ನಾಲೆಡ್ಜ್ ಬೇರೆ, ಅಡ್ಮಿನಿಸ್ಟೇಷನ್ ನಾಲೆಡ್ಜ್ ಬೇರೆ. ನಾನು ಅಡ್ನಿಸ್ಟ್ರೇಶನ್ ಬಗ್ಗೆ ಮಾತನಾಡುತ್ತಿದ್ದೆ, ಕೆಲವರಿಗೆ ಕಂಪ್ಯೂಟರ್ ನಾಲೆಡ್ಜ್ ಇರಲ್ಲ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.