Headlines

ಪುಡಿ ಮಾಡಿದ ಮೊಟ್ಟೆಯ ಸಿಪ್ಪೆಯನ್ನ ಗಿಡಗಳಿಗೆ ಹಾಕಿದ್ರೆ ಯಾವ ರೋಗನೂ ಬರಲ್ಲ, ವೇಗವಾಗಿ ಬೆಳೆಯುತ್ತೆ

ಪುಡಿ ಮಾಡಿದ ಮೊಟ್ಟೆಯ ಸಿಪ್ಪೆಯನ್ನ ಗಿಡಗಳಿಗೆ ಹಾಕಿದ್ರೆ ಯಾವ ರೋಗನೂ ಬರಲ್ಲ, ವೇಗವಾಗಿ ಬೆಳೆಯುತ್ತೆ

ಪುಡಿ ಮಾಡಿದ ಮೊಟ್ಟೆಯ ಸಿಪ್ಪೆಯನ್ನ ಗಿಡಗಳಿಗೆ ಹಾಕಿದ್ರೆ ಯಾವ ರೋಗನೂ ಬರಲ್ಲ, ವೇಗವಾಗಿ ಬೆಳೆಯುತ್ತೆ

Eggshells for garden Kannada: ನಾವು ಕಸ ಎಂದು ನಿರ್ಲಕ್ಷಿಸುವ ಈ ಮೊಟ್ಟೆ ಸಿಪ್ಪೆ ನಮ್ಮ ಗಿಡಗಳಿಗೆ ಅದ್ಭುತವಾದ ಪೋಷಕಾಂಶಗಳನ್ನು ಒದಗಿಸಬಲ್ಲವು. ಮಣ್ಣಿನ ಸಾರವನ್ನು ಹೆಚ್ಚಿಸುವುದರಿಂದ ಹಿಡಿದು ಕೀಟಗಳನ್ನು ಓಡಿಸುವವರೆಗೆ ಹೇಗೆ ಸ್ಮಾರ್ಟ್ ಆಗಿ ಬಳಸಬಹುದು ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.

ಮೊಟ್ಟೆ ಸಿಪ್ಪೆಯನ್ನ ಕಸದ ಬುಟ್ಟಿಗೆ ಎಸೆಯುವ ಮುನ್ನ ಈ ಲೇಖನ ಓದಿ. ಏಕೆಂದರೆ ಸಿಪ್ಪೆಗಳು ನಿಮ್ಮ ಗಿಡಗಳಿಗೆ ಅಮೂಲ್ಯವಾದ ಪೋಷಕಾಂಶಗಳನ್ನು ನೀಡಬಲ್ಲವು. ಹೇಗಿದ್ದರೂ ಮೊಟ್ಟೆಯ ಬೆಲೆ ಹೆಚ್ಚಿರುವುದರಿಂದ ಅದರ ಪ್ರತಿಯೊಂದು ಭಾಗವನ್ನೂ ಸದುಪಯೋಗಪಡಿಸಿಕೊಳ್ಳುವುದು ಜಾಣತನ. ಇನ್ನು ಮೊಟ್ಟೆಯ ಸಿಪ್ಪೆಗಳಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಇದು ಮಣ್ಣಿನ ಸಾರವನ್ನು ಹೆಚ್ಚಿಸುವುದಲ್ಲದೆ, ವಿನ್ಯಾಸವನ್ನು ಸುಧಾರಿಸುತ್ತದೆ.

ಗಿಡದ ಜೀವಕೋಶಗಳ ಗೋಡೆ ಬಲವಾಗುತ್ತೆಮೊಟ್ಟೆಯ ಸಿಪ್ಪೆ ಬಹುತೇಕ ಕ್ಯಾಲ್ಸಿಯಂ ಕಾರ್ಬೋನೇಟ್‌ನಿಂದ ಮಾಡಲ್ಪಟ್ಟಿದೆ. ಇದನ್ನು ಗಿಡದ ಮಣ್ಣಿಗೆ ಸೇರಿಸುವುದರಿಂದ ಜೀವಕೋಶಗಳ ಗೋಡೆ ಬಲಪಡಿಸಲು ಅಗತ್ಯವಾದ ಕ್ಯಾಲ್ಸಿಯಂ ದೊರೆಯುತ್ತದೆ.

ಮಣ್ಣಿನ ವಿನ್ಯಾಸ ಸುಧಾರಣೆಪುಡಿ ಮಾಡಿದ ಮೊಟ್ಟೆ ಸಿಪ್ಪೆ ಮಣ್ಣಿಗೆ ಗಾಳಿಯಾಡುವಂತೆ (Aeration) ಮಾಡುತ್ತೆ ಮತ್ತು ಮಣ್ಣಿನ ವಿನ್ಯಾಸವನ್ನು ಹಗುರಗೊಳಿಸುತ್ತವೆ. ಇದು ಕಾಂಪೋಸ್ಟ್ ಗೊಬ್ಬರಕ್ಕೆ ಉತ್ತಮ ‘ಒರಟುತನ’ ನೀಡುತ್ತದೆ.

ಕೀಟಗಳ ನಿಯಂತ್ರಣನುಣ್ಣಗೆ ಪುಡಿ ಮಾಡದ, ಸ್ವಲ್ಪ ಒರಟಾದ ಮೊಟ್ಟೆ ಪುಡಿಯನ್ನ ಗಿಡದ ಸುತ್ತ ಹರಡುವುದರಿಂದ ಬಸವನ ಹುಳುಗಳಂತಹ (Slugs and Snails) ಮೃದುದೇಹಿ ಕೀಟಗಳು ಗಿಡದ ಹತ್ತಿರ ಬರದಂತೆ ತಡೆಯಬಹುದು.

ಮಣ್ಣಿನ ಆಮ್ಲೀಯತೆ ಕಡಿಮೆ ಮಾಡುತ್ತೆನಿಮ್ಮ ತೋಟದ ಮಣ್ಣು ಅತಿಯಾದ ಆಮ್ಲೀಯತೆಯಿಂದ ಕೂಡಿದ್ದರೆ, ಮೊಟ್ಟೆಯ ಸಿಪ್ಪೆ ಅದನ್ನು ಸಮತೋಲನಗೊಳಿಸಿ ತಟಸ್ಥ (Neutral pH) ಮಟ್ಟಕ್ಕೆ ತರಲು ಸಹಾಯ ಮಾಡುತ್ತವೆ.

ಟೊಮೆಟೊ, ಆಲೂಗಡ್ಡೆ, ಬಟಾಣಿ, ಕೋಸುಗಡ್ಡೆ , ಸ್ಟ್ರಾಬೆರಿ, ತುಳಸಿ (Basil), ಗುಲಾಬಿ, ಹೈಡ್ರೇಂಜ ಮತ್ತು ಜೀಬ್ರಾದಂತಹ ಅಲಂಕಾರಿಕ ಗಿಡಗಳಿಗೆ ಇದು ಹೆಚ್ಚು ಉಪಯುಕ್ತ.

ಸಸಿಗಳನ್ನು ಬೆಳೆಸಲು ಬಳಕೆಫೋಟೋದಲ್ಲಿ ತೋರಿಸಿರುವಂತೆ ಪ್ಲಾಸ್ಟಿಕ್ ಪಾಟ್‌ಗಳ ಬದಲಿಗೆ, ತೊಳೆದ ಮೊಟ್ಟೆ ಸಿಪ್ಪೆಯ ಅರ್ಧಭಾಗ ಬಳಸಿ ಸಸಿಗಳನ್ನು ಬೆಳೆಸಬಹುದು. ಸಸಿ ಸ್ವಲ್ಪ ದೊಡ್ಡದಾದ ನಂತರ, ಸಿಪ್ಪೆಯ ಸಮೇತ ಮಣ್ಣಿನಲ್ಲಿ ನೆಡಬಹುದು.

ಕಾಂಪೋಸ್ಟ್ ಗೊಬ್ಬರಕ್ಕೆ ಸೇರಿಸಿಮೊಟ್ಟೆ ಸಿಪ್ಪೆ ಚೆನ್ನಾಗಿ ತೊಳೆದು, ಒಣಗಿಸಿ, ಪುಡಿ ಮಾಡಿ ಕಾಂಪೋಸ್ಟ್ ಗೆ ಸೇರಿಸುವುದರಿಂದ ಗೊಬ್ಬರದ ಸಾರ ಹೆಚ್ಚುತ್ತದೆ.

ಮಣ್ಣಿನ ಪೂರಕವಾಗಿ ಬಳಸಿನಿಮ್ಮ ಬಳಿ ಕಾಂಪೋಸ್ಟ್ ಇಲ್ಲದಿದ್ದರೆ, ನೇರವಾಗಿ ಮೊಟ್ಟೆ ಸಿಪ್ಪೆ ಪುಡಿ ಮಾಡಿ ಮಣ್ಣಿನೊಂದಿಗೆ ಮಿಶ್ರಣ ಮಾಡಬಹುದು.

ಕಳೆ ನಿಯಂತ್ರಣಇದನ್ನು ಮಣ್ಣಿನ ಮೇಲೆ ಹೊದಿಕೆಯಂತೆ (Mulch) ಬಳಸುವುದರಿಂದ ಅನಗತ್ಯ ಕಳೆ ಗಿಡಗಳು ಬೆಳೆಯುವುದನ್ನು ತಡೆಯಬಹುದು.

ಸೊಳ್ಳೆಗಳ ಬಗ್ಗೆ ಎಚ್ಚರ: ಸಿಪ್ಪೆಯನ್ನು ಪುಡಿ ಮಾಡದೆ ಹಾಗೆಯೇ ಹಾಕಬೇಡಿ. ಕಪ್ ಆಕಾರದ ಸಿಪ್ಪೆಗಳಲ್ಲಿ ನೀರು ನಿಂತರೆ ಅದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಯಾವಾಗಲೂ ಪುಡಿ ಮಾಡಿಯೇ ಬಳಸಿ.ಮಣ್ಣಿನ ಪರೀಕ್ಷೆ ಮಾಡಿ: ಮಣ್ಣಿನಲ್ಲಿ ಈಗಾಗಲೇ ಕ್ಯಾಲ್ಸಿಯಂ ಅಧಿಕವಾಗಿದ್ದರೆ ಸಿಪ್ಪೆ ಸೇರಿಸುವ ಅಗತ್ಯವಿರುವುದಿಲ್ಲ. ಆದ್ದರಿಂದ ಮೊದಲು ಮಣ್ಣಿನ ಪರೀಕ್ಷೆ ಮಾಡುವುದು ಉತ್ತಮ.ನುಣ್ಣಗೆ ಪುಡಿ ಮಾಡಿ: ಮೊಟ್ಟೆಯ ಸಿಪ್ಪೆ ಮಣ್ಣಿನಲ್ಲಿ ಕರಗಲು ದೀರ್ಘಕಾಲ ತೆಗೆದುಕೊಳ್ಳುತ್ತವೆ. ಆದ್ದರಿಂದ ಇವುಗಳನ್ನು ಸಾಧ್ಯವಾದಷ್ಟು ನುಣ್ಣಗೆ ಪುಡಿ ಮಾಡಿದರೆ ಗಿಡಗಳಿಗೆ ಬೇಗನೆ ಪೋಷಕಾಂಶಗಳು ದೊರೆಯುತ್ತವೆ.

Source link

Leave a Reply

Your email address will not be published. Required fields are marked *