![]()
2000ರ ದಶಕದ ಆರಂಭದಲ್ಲಿ ನಡೆದ ಅಧ್ಯಯನವೊಂದರಲ್ಲಿ, ಡೈರಿ ಉತ್ಪನ್ನಗಳು ಇನ್ಸುಲಿನ್ ಪ್ರತಿರೋಧ(Insulin Resistance)ದ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ತಿಳಿದುಬಂದಿತ್ತು. ಆದರೆ ಅದರಲ್ಲಿದ್ದ ಒಂದು ವಿಶೇಷ ಅಂಶವೆಂದರೆ, ಹಾಲಿಗಿಂತಲೂ ಹೆಚ್ಚಾಗಿ ‘ಡೈರಿ ಆಧಾರಿತ ಸಿಹಿ ತಿನಿಸು’ (ಮುಖ್ಯವಾಗಿ ಐಸ್‌ಕ್ರೀಮ್) ಸೇವಿಸುವವರಲ್ಲಿ ಈ ಅಪಾಯ 2.5 ಪಟ್ಟು ಕಡಿಮೆಯಿತ್ತು.
ಇದೇ ರೀತಿಯ ಫಲಿತಾಂಶ 2005ರ ಮತ್ತೊಂದು ಬೃಹತ್ ಸಂಶೋಧನೆಯಲ್ಲಿಯೂ ಕಂಡುಬಂದಿದೆ. ವಾರಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಐಸ್‌ಕ್ರೀಮ್ ತಿನ್ನುವ ಪುರುಷರಲ್ಲಿ ಮಧುಮೇಹದ ಅಪಾಯ ಗಣನೀಯವಾಗಿ ಕಡಿಮೆ ಇರುವುದು ದಾಖಲಾಗಿದೆ.