Headlines

ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ

ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ


ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ

ಪೂಜೆ-ಪುನಸ್ಕಾರಗಳನ್ನು ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಪ್ರಶ್ನೆಯ ಬಗ್ಗೆ ‘ಟಿವಿ9’ ಕನ್ನಡ ಡಿಜಿಟಲ್ ‘ನಿತ್ಯ ಭಕ್ತಿ’ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆಯ ಡಾ. ಬಸವರಾಜ ಗುರೂಜಿ ತೋರಿಸಿದ್ದಾರೆ. ಮಾನವರಾಗಿ ಜನಿಸಿದ ಮೇಲೆ ಕಷ್ಟ-ಸುಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಣೆಬರಹ ಅಥವಾ ಕರ್ಮಫಲವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಪೂಜೆ, ಪುನಸ್ಕಾರ, ಹೋಮ, ಹವನ, ಯಜ್ಞ, ಯಾಗಾದಿ ಮತ್ತು ಜಪಗಳು ಕಷ್ಟಗಳನ್ನು ಸಂಪೂರ್ಣವಾಗಿ ನಿವಾರಿಸಿದರೂ, ಅವುಗಳನ್ನು ಎದುರಿಸುವ ವಿಶೇಷ ಶಕ್ತಿಯನ್ನು ನೀಡುತ್ತವೆ. ಪೂಜೆ, ಮಂತ್ರಗಳನ್ನು ಮಾಡುವಾಗ ‘ಮನನಾತ್ ತ್ರಾಯತೇ ಇತಿ ಮಂತ್ರ’ ಎಂಬಂತೆ ನಮ್ಮ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೂಡಿ, ಸಿಗುತ್ತದೆ ಎಂಬ ನಂಬಿಕೆ ಮೂಡುತ್ತದೆ. ಕಷ್ಟ ಬಂದಾಗ ಭಗವಂತನನ್ನು ಕಷ್ಟ ನಿವಾರಣೆ ಮಾಡು ಎಂದು ಕೇಳುವ ಬದಲು, ಕಷ್ಟಗಳನ್ನು ಎದುರಿಸುವ ಶಕ್ತಿ ನೀಡು ಎಂದು ಪ್ರಾರ್ಥಿಸಬೇಕು. ನಿತ್ಯ ಪೂಜೆ, ನಾಮಸ್ಮರಣೆ, ​​ಜಪ, ತಪದಿಂದ ಮಾನಸಿಕ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ‘ಯದ್ಭಾವಂ ತದ್ಭವತಿ’ ಎಂಬಂತೆ ಸರಳ ಮತ್ತು ಶುದ್ಧ ಹೃದಯದ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದು ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *