ಆರ್ಥಿಕತೆಗೆ ಪುಷ್ಟಿ ಕೊಡಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ: ತಜ್ಞರ ಸಲಹೆ

ಆರ್ಥಿಕತೆಗೆ ಪುಷ್ಟಿ ಕೊಡಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ: ತಜ್ಞರ ಸಲಹೆ


ಜನವರಿ 31: ಫೆಬ್ರುವರಿ 1 ರಂದು ನಿರ್ಮಲಾ ಸೀತಾರಾಮನ್ ಬಜೆಟ್ (ಯೂನಿಯನ್ ಬಜೆಟ್) ಮಂಡಿಸುತ್ತಿರುವ ಉದ್ಯಮ ವಲಯದಲ್ಲಿ ಅಪಾರ ನಿರೀಕ್ಷೆಗಳಿವೆ. ಜಾಗತಿಕ ಸಂಕಷ್ಟಗಳ ನಡುವೆ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಸಂಕಲ್ಪ ತೊಟ್ಟಿದೆ. ಕಳೆದ ವರ್ಷದ ಬಜೆಟ್‌ನಲ್ಲಿ (2025) ಹಲವಾರು ಸೆಕ್ಟರ್‌ಗಳ ಮೂಲಸೌಕರ್ಯಕ್ಕಾಗಿ ಸರ್ಕಾರವು ಬಹಳಷ್ಟು ಹಣವನ್ನು ವ್ಯಯಿಸಿತ್ತು. ಈ ಬಾರಿಯ ಬಜೆಟ್ ನಲ್ಲೂ ಇದೇ ನಿಲುವು ಮುಂದುವರಿಯಬಹುದು ಎಂದು ಉದ್ಯಮ ವಲಯ ನಿರೀಕ್ಷಿಸುತ್ತಿದೆ.

ಇನ್ ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್‌ಗಳಿಗೆ 3 ಲಕ್ಷ ಕೋಟಿ ರೂ ಬರಲಿ

ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಬೇಕಾದರೆ ಈ ಬಜೆಟ್‌ನಲ್ಲಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಲಾಜಿಸ್ಟಿಕ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಹೇಳಲಾಗಿದೆ. ಹೆದ್ದಾರಿ, ನಗರ ಸಾರಿಗೆ, ಸ್ಮಾರ್ಟ್ ಸಿಟಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗಿದೆ, ಹಾಗೂ ರಾಜ್ಯಗಳಿಗೆ ಬಡ್ಡಿರಹಿತ ಸಾಲ ಕೊಡಲು ಕಳೆದ ವರ್ಷದ ಬಜೆಟ್‌ನಲ್ಲಿ 1.5 ಲಕ್ಷ ಕೋಟಿ ರೂ. ಈ ಬಾರಿಯ ಬಜೆಟ್‌ನಲ್ಲಿ ಅದು 3 ಲಕ್ಷ ಕೋಟಿ ರೂಗೆ ಏರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

‘ಉತ್ಪನ್ನತೆಗೆ ಪುಷ್ಟಿ ಕೊಡಲು, ಲಾಜಿಸ್ಟಿಕ್ಸ್ನ ಕ್ಷಮತೆ ಸುಧಾರಿಸಲು, ನಮ್ಮ ಜನಸಂಖ್ಯಾ ಬಲವನ್ನು ಆರ್ಥಿಕವಾಗಿ ಪ್ರಗತಿಗೆ ಅನುಕೂಲಕರವಾಗಿ ಮಾಡಿಕೊಳ್ಳಲು ಇನ್ಫ್ರಾಸ್ಟ್ರಕ್ಚರ್ ಸಾಕಷ್ಟು ಉಪಯುಕ್ತವಾಗಿದೆ. ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಮಾಡುವ ವೆಚ್ಚವು ವರ್ಷಕ್ಕೆ ಸೀಮಿತವಾಗದೆ ಹಲವು ವರ್ಷಗಳು ನಿರಂತರವಾಗಿ ಹೂಡಿಕೆ ಆಗಬೇಕು’ ಎಂದು ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿಯ ಜಂಟಿ ಎಂಡಿಯಾದ ಶಶಾಂಕ್ ಅಗರ್ವಾಲ್ ಹೇಳುತ್ತಾರೆ.

ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್ ನಲ್ಲಿ ಟೆಕ್ ಸೆಕ್ಟರ್ ಗೆ ಏನು ಸಿಗುತ್ತೆ?

ಸಾಂಪ್ರದಾಯಿಕ ಮೂಲಸೌಕರ್ಯಗಳ ಜೊತೆಗೆ ಎಐ ಶಕ್ತ ಡಾಟಾ ಸೆಂಟರ್, ರೋಬೋಟಿಕ್ಸ್, ಎಡ್ಜ್ ಇಂಟೆಲಿಜೆನ್ಸ್, ಎಐ ಅಳವಡಿಕೆ ಇತ್ಯಾದಿ ಈ ಫ್ರಾಸ್ಟ್ರಕ್ಚರ್‌ಗೆ ಪುಷ್ಟಿ ನೀಡುವ ನೀತಿ ಬರಬೇಕು. ಆಗ ದೇಶದ ಉತ್ಪನ್ನ, ಆರ್ಥಿಕ ಕ್ಷಮತೆ, ಜಾಗತಕ ಸ್ಪರ್ಧಾತ್ಮಕವಾಗಿ ಗಣನೀಯವಾಗಿ ಹೆಚ್ಚುತ್ತಿರುವ ಸಹಕಾರಿ ಎಂದು ಗ್ಲೋಬಲ್ ಲಾಜಿಕ್ನ ಪಿಯೂಶ್ ಝಾಶೀಲ್.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *