IPL 2026: ಐಪಿಎಲ್​ಗೆ ‘ಯುಪಿ ವಾರಿಯರ್ಸ್’ ತಂಡ ಎಂಟ್ರಿ?

IPL 2026: ಇಂಡಿಯನ್ ಪ್ರೀಮಿಯರ್ ಸೀಸನ್-19 ಆರಂಭಕ್ಕೂ ಮುನ್ನ ಎರಡು ಫ್ರಾಂಚೈಸಿಗಳು ಬದಲಾಗುವುದು ಖಚಿತವಾಗಿದೆ. ಡಿಯಾಜಿಯೋ ಕಂಪನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾರಾಟಕ್ಕೆ ಬಿಡ್ಡಿಂಗ್ ಆಹ್ವಾನಿಸಿದೆ.

ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯನ್ನು ಸಹ ಮಾರಾಟ ಮಾಡಲು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಮುಂದಾಗಿದೆ. ಅದರಂತೆ ಇದೀಗ ಆರ್ ಆರ್ ತಂಡದ ಖರೀದಿಗೂ ಬಿಡ್ಡಿಂಗ್‌ಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಮತ್ತು ಆರ್ ಆರ್ ತಂಡಗಳು ಬದಲಾಗುವ ಸಾಧ್ಯತೆ ಹೆಚ್ಚಿದೆ.

ಇಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಖರೀದಿಗೆ ಆಸಕ್ತಿಯ ಕ್ಯಾಪ್ರಿ ಗ್ಲೋಬಲ್ ತೋರಿರುವುದು ವಿಶೇಷ. ಐಪಿಎಲ್‌ನಲ್ಲಿ 18 ವರ್ಷಗಳನ್ನು ಪೂರೈಸಿರುವ ಹಳೆಯ ಫ್ರಾಂಚೈಸಿಯನ್ನು ಬಹುಪಾಲನ್ನು ಖರೀದಿಸಲು ಕ್ಯಾಪ್ರಿ ಗ್ಲೋಬಲ್ ಮಾತುಕತೆ ನಡೆಸಿದೆ. ಹೀಗಾಗಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಕ್ಯಾಪ್ರಿ ಗ್ಲೋಬಲ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

ಕುತೂಹಲಕಾರಿ ವಿಷಯವೆಂದರೆ, ಕ್ಯಾಪ್ರಿ ಗ್ಲೋಬಲ್ ಕಂಪನಿಯು ಪ್ರಿಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ಹೆಸರಿನ ತಂಡವನ್ನು ಕಣಕ್ಕಿಳಿಸುತ್ತಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಕ್ಯಾಪ್ರಿ ಗ್ಲೋಬಲ್ ಖರೀದಿಸಿದರೆ ಆರ್ ಆರ್ ತಂಡದ ಹೆಸರು ಬದಲಾಗುವುದು ಖಚಿತ. ಅದರಂತೆ ರಾಜಸ್ಥಾನ ರಾಯಲ್ಸ್ ಬದಲಿಗೆ ಐಪಿಎಲ್ ನಲ್ಲಿ ಯುಪಿ ವಾರಿಯರ್ಸ್ ಹೆಸರಿನ ತಂಡ ಕಣಕ್ಕಿಳಿಯಲಿದೆ.

ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಚೆಸ್ಟರ್ಸ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ ಮ್ಯಾಚ್ಯಾಡ್ ಅವ್ರಾಮ್ ಗ್ಲೇಜರ್ ಬಿಡ್ ಸಲ್ಲಿಸಿದ್ದಾರೆ. ಇವರೊಂದಿಗೆ ಅದಾನಿ ಗ್ರೂಪ್, ಆಧಾರ್ ಪೂನಾವಾಲ ಸೇರಿದಂತೆ ಕೆಲ ಉದ್ಯಮಿಗಳು ಆರ್ಸಿಬಿ ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಕೂಡ ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕಿದೆ.

ರಂದು ಪ್ರಕಟಿಸಲಾಗಿದೆ – 3:09 pm, ಮಂಗಳವಾರ, 10 ಫೆಬ್ರವರಿ 26

Source link

Leave a Reply

Your email address will not be published. Required fields are marked *