Budhaditya Yoga: ಮಕರದಲ್ಲಿ ಬುಧಾದಿತ್ಯಯೋಗ; ಈ 5 ರಾಶಿಯವರು ಮುಟ್ಟಿದೆಲ್ಲ ಚಿನ್ನ!

Budhaditya Yoga: ಮಕರದಲ್ಲಿ ಬುಧಾದಿತ್ಯಯೋಗ; ಈ 5 ರಾಶಿಯವರು ಮುಟ್ಟಿದೆಲ್ಲ ಚಿನ್ನ!


Budhaditya Yoga: ಮಕರದಲ್ಲಿ ಬುಧಾದಿತ್ಯಯೋಗ; ಈ 5 ರಾಶಿಯವರು ಮುಟ್ಟಿದೆಲ್ಲ ಚಿನ್ನ!

ಬುಧ ಮತ್ತು ಆದಿತ್ಯರು ಖಗೋಳದಲ್ಲಿ ಆಗಾಗ ಸಂಧಿಸುತ್ತಿರುತ್ತಾರೆ. ಇವರ ಸಂಯೋಗದಿಂದ ಬೌದ್ಧಿಕ, ಮಾನಸಿಕ ಹಾಗೂ ಕೌಶಲಗಳ ಆಧಿಕ್ಯವಿರಲಿದೆ. ಆದರೆ ಅವುಗಳ ಸ್ಥಿತಿಯ ಮೇಲೆ ಪರಿಣಾಮದ ವ್ಯತ್ಯಾಸವಾಗುತ್ತದೆ. ಬುಧಾದಿತ್ಯಯೋಗವು ಜನವರಿ ಹದಿನೇಳರಿಂದ ಫೆಬ್ರವರಿ ನಾಲ್ಕರ ವರೆಗೆ ಮಕದಲ್ಲಿ ಇರಲಿದೆ ಬುದ್ಧಿ, ವಾಕ್, ಆಡಳಿತ ಸಾಮರ್ಥ್ಯ, ಲೆಕ್ಕಾಚಾರ ಮತ್ತು ನಿರ್ಣಯ ಶಕ್ತಿಗೆ ಕಾರಣವಾಗುತ್ತದೆ. ಯೋಗ ಮಕರ ರಾಶಿಯಲ್ಲಿ ನಿರ್ಮಾಣವಾಗುವುದು, ಶನಿ ಅಧಿಪತಿಯ ಕಾರಣ ಫಲಗಳು ತಕ್ಷಣವೇ ಈ ಕಾಲಾನಂತರದಲ್ಲಿ ಶ್ರಮ, ಶಿಸ್ತು ಮತ್ತು ಸಹನೆಯ ಫಲ ನೀಡುತ್ತವೆ.

ಶುಭ ಫಲರಾಶಿಗಳು:

  • ಮೀನ: ಧೈರ್ಯ, ಪ್ರಯತ್ನ, ಸಂವಹನ ಕ್ಷೇತ್ರದಲ್ಲಿ ಪ್ರಗತಿ. ಬರವಣಿಗೆ, ಮಾಧ್ಯಮ, ವ್ಯವಹಾರಗಳಲ್ಲಿ ಲಾಭ. ಸಹೋದರರಿಂದ ಸಹಕಾರ ದೊರೆಯುತ್ತದೆ.
  • ವೃಷಭ: ಬುದ್ಧಿವಂತಿಕೆ, ವಿದ್ಯಾಭ್ಯಾಸ, ಮಕ್ಕಳ ವಿಷಯದಲ್ಲಿ ಶುಭ. ಹೂಡಿಕೆ, ಹೂಡಿಕೆ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು.
  • ಕನ್ಯಾ: ಭಾಗ್ಯೋದಯ, ಧರ್ಮ–ವಿದ್ಯೆ, ಗುರುಕೃಪೆ. ದೂರ ಪ್ರಯಾಣ ಲಾಭಕರ. ಜೀವನದ ದಿಕ್ಕು ಸ್ಪಷ್ಟವಾಗಿ ರೂಪುಗೊಳ್ಳುತ್ತದೆ.
  • ತುಲಾ: ಉದ್ಯೋಗ, ಅಧಿಕಾರ, ಆಡಳಿತ ಕ್ಷೇತ್ರದಲ್ಲಿ ಉನ್ನತಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಹೆಸರು–ಪ್ರತಿಷ್ಠೆ.
  • ವೃಶ್ಚಿಕ: ಆದಾಯ ವೃದ್ಧಿ, ಆಶಾಪೂರ್ತಿ. ಸ್ನೇಹ ವಲಯ ವಿಸ್ತರಣೆ. ಹಿರಿಯರ ಸಹಕಾರದಿಂದ ಲಾಭಕರ ಯೋಜನೆಗಳು.

ಅಶುಭ ಫಲರಾಶಿಗಳು:

  • ಮಿಥುನ: ಷಷ್ಠದಲ್ಲಿ ಶತ್ರುಕಾಟ, ಸಾಲ, ಆರೋಗ್ಯ ಸಮಸ್ಯೆ. ಉದ್ಯೋಗ ಒತ್ತಡ. ಕಾನೂನು ವಿಷಯಗಳಲ್ಲಿ ಎಚ್ಚರ ಅಗತ್ಯ.
  • ಕರ್ಕಾಟಕ: ಸಪ್ತಮದಲ್ಲಿ ದಾಂಪತ್ಯ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ. ಅಹಂಕಾರ, ಮಾತಿನ ಗೊಂದಲದಿಂದ ದೂರ ಸಂಭವ.
  • ಸಿಂಹ : ರವಿಯ ರಾಶಿಯಾಗಿದ್ದರೂ ಅಷ್ಟಮಸ್ಥಾನದಲ್ಲಿ ಅನಿರೀಕ್ಷಿತ ವಿಘ್ನ, ಭಯ, ಮಾನಸಿಕ ಒತ್ತಡ. ಆರೋಗ್ಯ ಕಡೆ ಹೆಚ್ಚು ಜಾಗ್ರತೆ ಅಗತ್ಯ.
  • ಧನು: ದ್ವಾದಶದ ಈ ರಾಶಿಯವರಿಗೆ ಆರ್ಥಿಕ ಹೆಚ್ಚಳ, ನಿದ್ರಾಭಂಗ, ಏಕಾಂತ ಭಾವನೆ. ವಿದೇಶ ಸಂಬಂಧಿತ ಚಿಂತನೆ. ಫಲ ವಿಳಂಬ.

ಮಿಶ್ರ ಫಲ ರಾಶಿಗಳು:

  • ಮಕರ: ಈ ರಾಶಿಯಲ್ಲಿಯೇ ಇರುವ ಬುಧಾದಿತ್ಯರಿಂದ ಆತ್ಮವಿಶ್ವಾಸ, ವ್ಯಕ್ತಿತ್ವ ಬಲ. ಆದರೆ ಅಹಂಕಾರ, ಆರೋಗ್ಯದ ನಿರ್ಲಕ್ಷ್ಯ ಸಾಧ್ಯ. ಶ್ರಮದ ನಂತರ ಫಲ.
  • ಕುಂಭ: ಹಣ ಮತ್ತು ವಾಕ್ ಶಕ್ತಿಯ ವೃದ್ಧಿ. ಆದಾಯ ಇದ್ದರೂ ಕುಟುಂಬ ಕಲಹ ಸಾಧ್ಯ. ಮಾತಿನಲ್ಲಿ ಸಂಯಮ ಅಗತ್ಯ.
  • ಮೇಷ: ಈ ರಾಶಿಯವರಿಗೆ ಮನೆ, ಆಸ್ತಿ ಲಾಭ. ಒಳಮನಸ್ಸಿನ ಅಶಾಂತಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ.

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *