
ಬೆಂಗಳೂರು, ಮಾರ್ಚ್ 31: ಮಾರ್ಚ್‌ನಲ್ಲಿ ಬಿಸಿಲಿನ ಬೇಗೆ ಅನುಭವಿಸಿದ ನಿವಾಸಿಗಳಿಗೆ ಭಾನುವಾರ ಸುರಿದ ಸಾಧಾರಣ ಮಳೆ (ಹವಾಮಾನ) ಸ್ವಲ್ಪ ಮಟ್ಟಿನ ತಂಪಿನ ಅನುಭವ ಸಿಕ್ಕಿತು. ಗುಡುಗು ಸಹಿತ ಮಳೆಯು ನಗರವನ್ನು ತಂಪುಗೊಳಿಸಿದರೂ, ವಿದ್ಯುತ್ ವ್ಯತ್ಯಯ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಈ ಬಗ್ಗೆ ತಮ್ಮ ಅಸಮಾಧಾನ ಹಂಚಿಕೊಂಡ ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ, ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲೇನಿದೆ?
ಒಂದು ಗಂಟೆಯ ಮಳೆ ಸುರಿದರೆ 20 ಬಾರಿ ವಿದ್ಯುತ್ ಹೋಗಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿರುವ ದೀಪಕ್, ನಾವು ಕೃತಕ ಬುದ್ಧಿಮತ್ತೆ (AI) ಬಗ್ಗೆ ಮಾತನಾಡುತ್ತೇವೆ, ಆದರೆ ಮೂಲಭೂತ ತಂತ್ರಜ್ಞಾನ ಮತ್ತು ವ್ಯವಸ್ಥೆಗಳು ಇನ್ನೂ ಅನಾದಿಕಾಲದಲ್ಲಿವೆ. ಈ ನಂಬಿಕೆಗೆ ಅರ್ಹವಲ್ಲ ಎಂದು ಟೀಕಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರ ಗಮನ ಸೆಳೆದಿದೆ.
1 ಗಂಟೆ ಮಳೆಯಾಗಿದ್ದು, ವಿದ್ಯುತ್ 20 ಬಾರಿ ಹೋಗಿದೆ. ನಾವು AI ಬಗ್ಗೆ ಮಾತನಾಡುತ್ತೇವೆ ಮತ್ತು ಏನು ಅಲ್ಲ. ಆದರೆ ಮೂಲ ತಂತ್ರಜ್ಞಾನ/ವ್ಯವಸ್ಥೆಗಳು ಪ್ರಾಚೀನ ಮತ್ತು ವಿಶ್ವಾಸಾರ್ಹವಲ್ಲ. #ಬೆಂಗಳೂರು
– ಡಾ ದೀಪಕ್ ಕೃಷ್ಣಮೂರ್ತಿ (@DrDeepakKrishn1) ಮಾರ್ಚ್ 29, 2026
ನೆಟ್ಟಿಗರ ರಿಯಾಕ್ಷನ್ ಏನು?
ಡಾ. ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡ ಪೋಸ್ಟ್‌ಗಳಿಗೆ ಪ್ರತಿಕ್ರಿಯೆಗಳು ನೆಟ್ಟಿಗರಿಂದ ವ್ಯಕ್ತವಾಗಿವೆ. ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವು ಅನುಭವಗಳನ್ನು ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ಒಬ್ಬ ಬಳಕೆದಾರ, ಬೆಂಗಳೂರಿನಲ್ಲಿ BESCOM ಅತ್ಯುತ್ತಮ ಸೇವೆಗಳು. ನಮ್ಮ ಪ್ರದೇಶದ ಸಮಸ್ಯೆ ತಿಳಿಸಿದ ಕೂಡಲೇ, ಮಧ್ಯರಾತ್ರಿಯಲ್ಲಿ ಪರಿಹಾರ ಕೊಡುತ್ತಾರೆ ಎಂದು ಬರೆದು ವಿದ್ಯುತ್ ಇಲಾಖೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತರರು, ಭಾರತದ ಅತ್ಯಂತಹೈಪ್ ಆಗಿರುವ ನಗರ ಬೆಂಗಳೂರು. ಹೊರಗಿನವರು ಇದನ್ನು ತಂತ್ರಜ್ಞಾನದ ನಗರ ಎಂದು ಮಾತ್ರ ನೋಡುತ್ತಾರೆ. ಆದರೆ ಇದರ ಇನ್ನೊಂದು ಮುಖವನ್ನೂ ನೋಡಬೇಕು ಎಂದು ಟೀಕಿಸಿದ್ದಾರೆ.
ಒಬ್ಬ ಬಳಕೆದಾರ ಅತ್ಯಂತ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ನಾವು ಎಐ ಮಳೆಯ ಹನಿಗಳನ್ನು ಗಾಳಿಯಲ್ಲೇ ಪತ್ತೆಹಚ್ಚಿ, ನೆಲಕ್ಕೆ ಬೀಳುವ ಮುನ್ನವೇ ವಿದ್ಯುತ್ ಕಡಿತವನ್ನು ಮಾಡುವುದಾಗಿ ಇಲಾಖೆಯು ಕಾಲೆಳೆದಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.