ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ನೀಡಿದ ನಿರ್ಮಾಪಕರ ಸಂಘ

ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ನೀಡಿದ ನಿರ್ಮಾಪಕರ ಸಂಘ


ವೆಂಕಟ್ ಕೆ.ನಾರಾಯಣ ದಳಪತಿ ವಿಜಯ್, ಚಂದ್ರಚೂಡ್ಚಿತ್ರ ಕ್ರೆಡಿಟ್ ಮೂಲ: KVN ಪ್ರೊಡಕ್ಷನ್ಸ್, ಚಕ್ರವರ್ತಿ ಚಂದ್ರಚೂಡ್

ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ (ಚಕ್ರವರ್ತಿ ಚಂದ್ರಚೂಡ್) ಅವರು ನಿರ್ಮಾಪಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ದೂರು ನೀಡಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ (ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ) ದೂರು ನೀಡಲಾಗಿದೆ. ಅವರು ಯೂಟ್ಯೂಬ್ ಚಾನೆಲ್ ಹೊಂದಿರುವ ಚಂದ್ರಚೂಡ್ ಇತ್ತೀಚೆಗೆ ‘ಕೆವಿಎನ್ ಪ್ರೊಡಕ್ಷನ್ಸ್’ (ಕೆವಿಎನ್ ಪ್ರೊಡಕ್ಷನ್ಸ್) ನಿರ್ಮಾಣದ ‘ಜನ ನಾಯಕನ್’ ಸಿನಿಮಾ ಬಗ್ಗೆ ಮಾತನಾಡಿದ್ದರು. ಆ ವಿಡಿಯೋದಲ್ಲಿ ಅವರು ನಿರ್ಮಾಪಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

‘ಕೆಲವು ನಿರ್ಮಾಪಕರು ಹೀರೋಗಳ ವಿಚಾರ ಬಂದರೆ ಅವರ ಮನೆಯ ಕಮೋದ್ ಕೂಡ ಚಿನ್ನದಲ್ಲಿ ನೋಡಿಕೊಳ್ಳುತ್ತಾರೆ. ಅವರ ಮನೆಗೆ ಕಾಂಡೋಮ್ ಕೂಡ ತೆಗೆದುಕೊಂಡು ಹೋಗುತ್ತಾರೆ. ಆದರೆ ತಂತ್ರಜ್ಞರು, ಲೈಟ್ ಬಾಯ್ಸ್, ಪ್ರೊಕ್ಷಡನ್ ಹುಡುಗರು, ರೈಟರ್ ವಿಚಾರ ಬಂದರೆ ಸರಿಯಾಗಿ ಹಣ ಕೊಡಲ್ಲ. ಹೇಳಿಕೊಳ್ಳೋಕೆ ಆಗಲ್ಲ. ದೊಡ್ಡ ದೊಡ್ಡ ನಿರ್ಮಾಪಕರು ಈ ರೀತಿ ಮಾಡುತ್ತಾರೆ’ ಎಂದು ಯೂಟ್ಯೂಬ್ ವಿಡಿಯೋದಲ್ಲಿ ಚಂದ್ರಚೂಡ್ ಮಾತನಾಡಿದ್ದರು.

ಆದ್ದರಿಂದ ಚಂದ್ರಚೂಡ್ ವಿರುದ್ಧ ದೂರು ನೀಡಲಾಗಿದೆ. ‘ಅಶ್ಲೀಲಾ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಯೂಟ್ಯೂಬ್ ಮೂಲಕ ಪ್ರಕಟಿಸಿದೆ. ಈ ಹೇಳಿಕೆಗಳು ಸಂಪೂರ್ಣ ಕನ್ನಡ ಚಲನಚಿತ್ರ ನಿರ್ಮಾಪಕರ ಗೌರವ, ಘನತೆ ಹಾಗೂ ಮಾನಕ್ಕೆ ಗಂಭೀರ ಹಾನಿ ಉಂಟುಮಾಡಿದೆ. ಸಮಾಜದಲ್ಲಿ ನಿರ್ಮಾಪಕರ ತಪ್ಪು ಕಲ್ಪನೆ, ದ್ವೇಷ ಮತ್ತು ಅವಿಶ್ವಾಸ ಮೂಡಿಸುವ ಉದ್ದೇಶದಿಂದ ಮಾತನಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಯೂಟ್ಯೂಬ್ ಎಂಬ ಡಿಟಿಟಲ್ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲಾ ಮತ್ತು ಕಾನೂನು ವಿರೋಧಿ ವಿಷಯವನ್ನು ಪ್ರಚಾರ ಮಾಡಲಾಗಿದೆ. ಅನೇಕ ಅವಾಚ್ಯ ಶಬ್ದಗಳಲ್ಲಿ ಮಾತನಾಡಿದ್ದಾರೆ. ಇದರ ಬಗ್ಗೆ ಸಂಘಕ್ಕೆ ಅನೇಕ ನಿರ್ಮಾಪಕರು ಮತ್ತು ಕೆವಿಎನ್ ಸಂಸ್ಥೆಯವರು ದೂರು ನೀಡುತ್ತಾರೆ. ಚಂದ್ರಚೂಡ್ ವಿರುದ್ಧ ಪ್ರತಿಭಟನೆಗೆ ನಿರ್ಮಾಪಕರು ತಯಾರಾಗುತ್ತಾರೆ’ ಎಂದು ದೂರಿನಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುವ ನಾಟಕಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್

‘ಸಮಾಜದಲ್ಲಿ ಶಾಂತಿ ಉಂಟುಮಾಡಲು ತಕ್ಷಣವೇ ಚಂದ್ರಚೂಡ್ ವಿರುದ್ಧ ಮಾನಹಾನಿ, ಉದ್ದೇಶಪೂರ್ವಕ ಅವಮಾನ, ಸಮಾಜದಲ್ಲಿ ಶಾಂತಿಭಂಗ ಹೇಳಿಕೆ, ಮಹಿಳೆಯರ ಗೌರವಕ್ಕೆ ಧಕ್ಕೆ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ದೂರು ಸಲ್ಲಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *