ವಾರದ ಹಿಂದಷ್ಟೇ ಮದ್ವೆಯಾಗಿದ್ದ ಜೋಡಿಯನ್ನು ಅಗಲಿಸಿದ ಜಾತಿ: ಹೆಂಡ್ತಿಬೇಕೆಂದು ಎಸ್ಪಿ ಮೊರೆ ಹೋದ ಯುವಕ

ವಾರದ ಹಿಂದಷ್ಟೇ ಮದ್ವೆಯಾಗಿದ್ದ ಜೋಡಿಯನ್ನು ಅಗಲಿಸಿದ ಜಾತಿ: ಹೆಂಡ್ತಿಬೇಕೆಂದು ಎಸ್ಪಿ ಮೊರೆ ಹೋದ ಯುವಕ


ಕೊಪ್ಪಳ, (ಡಿಸೆಂಬರ್ 09): ಕೊಪ್ಪಳ (ಕೊಪ್ಪಳ) ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಜಿಲ್ಲೆ.ಕೊಪ್ಪಳ ಜಿಲ್ಲೆಯಲ್ಲಿ ಈ ಜಾತಿ (ಜಾತಿ)ವ್ಯವಸ್ಥೆ ಜೀವಂತವಾಗಿದೆ.ಜಿಲ್ಲೆಯ ಕೆಲ ಕಡೆ ಅಸ್ಪ್ರಶ್ಯತೆ ಅನ್ನೋ ಪೆಡಂಭೂತ ಜೀವಂತವಾಗಿದೆ. ಕಳೆದ ಕೆಲ ದಿನಗಳ ಹಿಂದೆ ದಲಿತರ ಮನೆಗೆ ಬೆಂಕಿ ಹಚ್ಚಿರೋ ಪ್ರಕರಣ ಇನ್ನು ಮಾಸಿಲ್ಲ.ಹೀಗೆ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಜಾತಿ ಪದ್ದತಿ ಇನ್ನು ಜೀವಂತವಾಗಿದೆ. ಇದೀಗ ಇದೇ ಜಾತಿ ಪದ್ದತಿ ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಯನ್ನ ಬೇರ್ಪಡಿಸಿದೆ.

ಹೌದು…ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮದ ನಿವಾಸಿ ಗಣೇಶ್ ಹಾಗೂ ಉಷಾರಾಣಿ ಪ್ರೀತಿಸಿದ್ದು, ಕಳೆದ ವಾರ ಹುಲಗೆಮ್ಮ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಯುವಕ ಗಣೇಶ್ ಉಷಾರಾಣಿಗೆ ತಾಳಿ ಕಟ್ಟಿ ಕಾಲುಂಗರ ಹಾಕಿದ್ದ. ಆದರೆ, ಮದುವೆಯಾದ ಒಂದು ವಾರದ ಬಳಿಕ ಗಣೇಶ ಹಾಗೂ ಉಷಾರಾಣಿಯನ್ನು ಬೇರೆ ಮಾಡಲಾಗಿದೆ. ರಾಜೀ ಸಂಧಾನಕ್ಕೆ ಅಂತ ಬಂದು ಉಷಾರಾಣಿ ಪೋಷಕರನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್

ಗಣೇಶ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದರೆ, ಉಷಾರಾಣಿ ರಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಜೀವಭಯದಿಂದ ನವ ಜೋಡಿ ಪೊಲೀಸ್ ಠಾಣೆಗೆ ಬಂದಾಗ ಇಬ್ಬರನ್ನು ದೂರಿದ್ದಾರೆ. ಇದರಿಂದ ಕಂಗಾಲಾದ ಗಣೇಶ್, ಇದಕ್ಕೆಲ್ಲ ಜಾತಿ ವ್ಯವಸ್ಥೆ ಕಾರಣ ಎಂದು ಆರೋಪಿಸಿದ್ದು, ಹೆಂಡತಿಗಾಗಿ ಎಸ್ ಕೊಪ್ಪಳ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾನೆ.

ಈ ಸಂಬಂಧ ಗಣೇಶ್ ಹೇಳಿಕೆ ನೀಡಿದ್ದು, ಗಣೇಶ್ ಕಳೆದ ಒಂದು ವಾರದ ಹಿಂದೆ ಮದುವೆಯಾದ ಜೋಡಿಯನ್ನ ಇದೀಗ ಹೆಚ್ಚುವರಿಯಾಗಿ ಬೇರ್ಪಡಿಸಿದ್ದಾರೆ. ಒಂದು ವಾರದಿಂದ ಪತ್ನಿಗಾಗಿ ಗಣೇಶ್ ಅಲೆದಾಡುತ್ತಿದ್ದಾನೆ. ಒಂದು ವಾರದಿಂದ ಹೆಂಡತಿ ಮುಖ ನೋಡದ ಹಿನ್ನಲೆಯಲ್ಲಿ ಇಂದು ತನ್ನ ತಂದೆ ಸುರೇಶ್ ಜೊತೆ ಎಸ್ ಪಿ ಕಚೇರಿಗೆ ಬಂದಿದ್ದಾನೆ.ನಿನ್ನೆ ಕೊಪ್ಪಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಹೋದ ಜೋಡಿ ಅಪಘಾತದಲ್ಲಿ ಸಾವು ಕಂಡಿದೆ. ಈ ಘಟನೆ ಮಾಸೋ ಮುನ್ನವೇ ಕೊಪ್ಪಳದಲ್ಲಿ ಇದೀಗ ಜಾತಿ ವ್ಯವಸ್ಥೆಯಿಂದ ನವ ಜೋಡಿ ದೂರಾಗಿವೆ. ಮಗನಿಗೆ ಏನಾದರೂ ಆದರೆ ಯಾರು ಹೊಣೆ? ಮದುವೆಯಾದ ಯವತಿ ಬಂದು ಇಷ್ಟ ಇಲ್ಲ ಅಂದ್ರೆ ಎಲ್ಲವೂ ಸರಿ ಆಗತ್ತೆ. ನನ್ನ ಮಗ ಕೈ ಬಿಡುತ್ತಾನೆ ಎಂದು ಅಳಲು ತೋಡಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *