ದುಲ್ಕರ್ ನಿರ್ಮಾಣ ಸಂಸ್ಥೆ ಮೇಲೆ ಕಾಸ್ಟಿಂಗ್ ಕೌಚ್ ಆರೋಪ

ದುಲ್ಕರ್ ನಿರ್ಮಾಣ ಸಂಸ್ಥೆ ಮೇಲೆ ಕಾಸ್ಟಿಂಗ್ ಕೌಚ್ ಆರೋಪ


ದುಲ್ಕರ್ ಸಲ್ಮಾನ್ (ದುಲ್ಕರ್ ಸಲ್ಮಾನ್) ನಿರ್ಮಾಣ ಸಂಸ್ಥೆ ಕಳೆದ ಕೆಲವು ವಾರಗಳಿಂದಲೂ ಸುದ್ದಿಯಲ್ಲಿದೆ. ‘ಲೋಕ’ ಸಿನಿಮಾ ನಿರ್ಮಾಣವನ್ನು ದುಲ್ಕರ್ ಅವರ ವೆಲ್ ಫೈರ್ ಫಿಲಮ್ಸ್ ನಿರ್ಮಾಣ ಮಾಡಿದ್ದು, ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಗುಣಮಟ್ಟದ ಸಿನಿಮಾ ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಈಗ ನಿರ್ಮಾಣ ಸಂಸ್ಥೆ ವಿರುದ್ಧ ಯುವತಿ ಆರೋಪ ಮಾಡಿದ್ದಾರೆ. ‘ಲೋಕ’ ಸಿನಿಮಾದ ಬಳಿಕ ದುಲ್ಕರ್ ಸಲ್ಮಾನ್ ಅವರಿಗೆ ಒಂದರ ಹಿಂದೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ.

ದುಲ್ಕರ್ ನಿರ್ಮಾಣ ಸಂಸ್ಥೆ ಹಾಗೂ ಮನೆಯ ಮೇಲೆ ಕೆಲವು ದಿನಗಳ ಹಿಂದಷ್ಟೆ ಒಮ್ಮೆ ಕಸ್ಟಮ್ಸ್ ಅಧಿಕಾರಿಗಳು ಮತ್ತೊಮ್ಮೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿದರು. ಕಸ್ಟಮ್ಸ್ ಅಧಿಕಾರಿಗಳು ದುಲ್ಕರ್ ಅವರಿಗೆ ಸೇರಿದ ಕೆಲವು ಕಾರುಗಳನ್ನು ಜಪ್ತಿ ಮಾಡಿ ಹೋಗಿದ್ದರು. ಈಗ ಅವರ ನಿರ್ಮಾಣ ಸಂಸ್ಥೆಯ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಹೊರಿಸಲಾಗಿದೆ. ಆರೋಪಕ್ಕೆ ಪ್ರತಿಯಾಗಿ ಕ್ರಮವನ್ನೂ ಸಹ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಕೈಗೊಂಡಿದೆ.

ಯುವತಿಯೊಬ್ಬಾಕೆ ನೀಡಿರುವ ದೂರಿನಂತೆ ಅಸಿಂಟ್ ಡೈರೆಕ್ಟರ್ ಆಗಿರುವ ಧಿನಿಲ್ ಬಾಬುವಾತ ಎಂಬುವರಿಗೆ ಕರೆ ಮಾಡಿ, ತಾನು ದುಲ್ಕರ್ ಅವರ ವೇಫೇರರ್ ನಿರ್ಮಾಣ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿ ವೆಲ್ ಫೈರ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ, ಯುವತಿಯೊಬ್ಬಳಿಗೆ ನೀಡಿದ ದೂರಿನಂತೆ ಅಸಿಂಟ್ ಡೈರೆಕ್ಟರ್ ಬಳಿ ಯುವತಿಗೆ ಬರಲು ಹೇಳಿದ್ದಾನೆ. ಬಳಿಕ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಹಲ್ಲೆ ಮಾಡಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಮಲೆಯಾಳಂ ಚಿತ್ರರಂಗದಲ್ಲಿ ಅವಕಾಶ ಸಿಗದಂತೆ ಮಾಡುವೆ ಎಂದು ಬೆದರಿಸಿದ್ದಾನೆ.

ಇದನ್ನೂ ಓದಿ:ಸ್ಮಗ್ಲಿಂಗ್ ಪ್ರಕರಣ: ಖ್ಯಾತ ನಟ ದುಲ್ಕರ್ ಸಲ್ಮಾನ್ ಗೆ ಸಮನ್ಸ್ ಜಾರಿ

ಇದೀಗ ಯುವತಿ ಪೊಲೀಸರಿಗೆ ದೂರು ನೀಡಿದ್ದು, ದೂರಿಗೆ ಸಾಕ್ಷ್ಯಗಳಾಗಿ ಮೊಬೈಲ್ ಕರೆ ದಾಖಲೆ, ವಿಡಿಯೋ, ಕಾಲ್ ರೆಕಾರ್ಡ್ ಸಹ ನೀಡಿದ್ದಾಳೆ. ವೆಫೇರ್ ಪ್ರೊಡಕ್ಷನ್ ಹೌಸ್ ಹೆಸರು ಬರುತ್ತಿದೆ ನಿರ್ಮಾಣ ಸಂಸ್ಥೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತಮ್ಮ ಸಂಸ್ಥೆಯ ಆರೋಪಿ ಧಿನಿಲ್ ಬಾಬುಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಿರ್ಮಾಣ ಸಂಸ್ಥೆಯ ವತಿಯಿಂದ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜೊತೆಗೆ ಕೇರಳ ಫಿಲಂ ಫೆಡರೇಶನ್ ಗೂ ಸಹ ದೂರು.

ದುಲ್ಕರ್ ಸಲ್ಮಾನ್ ಅವರ ವೇಫೆರ್ ಪ್ರೊಡಕ್ಷನ್ ಹೌಸ್ ಇತ್ತೀಚೆಗಷ್ಟೇ ‘ಲೋಕಃ’ ಸಿನಿಮಾ ನಿರ್ಮಾಣ ಮಾಡಿದೆ. ‘ಲೋಕಃ’ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಮಾಡಿದ್ದು ಕೇರಳದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ‘ಲೋಕಃ: ಚಾಪ್ಟರ್ 2’ ಸಿನಿಮಾ ನಿರ್ಮಾಣಕ್ಕೆ ಸಹ ಮುಂದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *