
ಬೆಂಗಳೂರು, (ಫೆಬ್ರವರಿ 17): ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025-26ನೇ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ವಾರ್ಷಿಕವಾಗಿ ಎರಡು ಬಾರಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಈ ನಿರ್ಧಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಶಿಫಾರಸುಗಳಿಗೆ ಅನುಗುಣವಾಗಿ, ಹೊಸ ನಿಯಮಗಳು 2026 ರಿಂದ ಜಾರಿಗೆ ಬರಲಿವೆ. ಎಲ್ಲಾ ವಿದ್ಯಾರ್ಥಿಗಳು ಸಹ ಮೊದಲ ಪರೀಕ್ಷೆ ಕಡ್ಡಾಯ ಅಂತಿದೆ ಸಿಬಿಎಸ್ಐ. ಹಾಗದ್ರೆ, ಏನು ಹೇಳುತ್ತಿದೆ ಸಿಬಿಎಸ್‌ಐ? ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ ನೋಡಿ.