ನವದೆಹಲಿ, ನವೆಂಬರ್ 11: ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡಿದ್ದ ಕಾರು 3 ಗಂಟೆಗಳ ಕಾಲ ಆ ಸ್ಥಳದಲ್ಲಿದ್ದರೂ ಒಮ್ಮೆಯೂ ಚಾಲಕ ಕಾರಿನಿಂದ ಕೆಳಗಿಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 20ಕ್ಕೂ ಹೆಚ್ಚು ಮಂದಿ ಇದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿದೆ, ಸಂಜೆ 6.30 ರವರೆಗೆ ಅಲ್ಲಿಯೇ ನಿಂತಿತ್ತು.
ಒಂದು ನಿಮಿಷದ ಸಿಸಿಟಿವಿ ವಿಡಿಯೋವನ್ನು ತೋರಿಸಿದ್ದಾರೆ, ಅದು ಕಾರು ಬದರ್ಪುರ್ ಗಡಿಯ ಮೂಲಕ ಹಾದುಹೋಗುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೊಂದು ವೀಡಿಯೊದಲ್ಲಿ ಚಾಲಕನ ಕೈ ಕಿಟಕಿಯಿಂದ ಹೊರಗೆ ಚಾಚಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ