
ಪಲ್ನಾಡು, ಏಪ್ರಿಲ್ 08: ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬೈಕ್ ಡಿಕ್ಕಿಯಿಂದ 5 ಲಕ್ಷ ರೂ. ಕದ್ದಿರುವ ಘಟನೆ ಪಲ್ನಾಡುವಿನಲ್ಲಿ ನಡೆದಿದೆ. ಸಾಲದ ಮೇಲೆ ಸಾಲ ಪಡೆದು, ಈರುಳ್ಳಿ ಖರೀದಿಸಿ ಸ್ಕೂಟಿ ಡಿಕ್ಕಿಯಲ್ಲಿ ರೈತ ಇಟ್ಟಿದ್ದ 5 ಲಕ್ಷ ರೂ. ಹಣವನ್ನು ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಈರುಳ್ಳಿ ಗೋದಾಮಿನ ಎದುರು ಬಂದು ವ್ಯಕ್ತಿಯೊಬ್ಬ ಫೋನ್ ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಾನೆ. ಬಳಿಕ ರೈತ ಏನೋ ಕೆಲಸ ಮಾಡುತ್ತಿರುವ ಸಮಯ ನೋಡಿ ಬೈಕ್ ನ ಡಿಕ್ಕಿಯಲ್ಲಿದ್ದ ದುಡ್ಡಿನ ಚೀಲ ಎತ್ತಿಕೊಂಡು ಪರಾರಿಯಾಗುತ್ತಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ