ಸೇನಾ ಯಂತ್ರೋಪಕರಣಗಳನ್ನು ತಯಾರಿಸುವ ಕಂಪನಿಗಳಿಗೆ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ(CDS) ಜನರಲ್ ಅನಿಲ್ ಚೌಹಾಣ್ (ಸಿಡಿಎಸ್ ಅನಿಲ್ ಚೌಹಾಣ್) ಖಡಕ್ ಎಚ್ಚರಿಕೆ ಮಾಹಿತಿ. ಸೇನೆಗೆ ನೀಡುವ ಉಪರಕಣಗಳಲ್ಲಿ ನಿಮ್ಮ ಲಾಭದ ಯುದ್ಧದೊಂದಿಗೆ ರಾಷ್ಟ್ರೀಯತೆ ಹಾಗೂ ದೇಶ ಪ್ರೇಮ ಕೂಡ ಇರಲಿ. ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಶೇ 70ರಷ್ಟು ದೇಶೀ ನಿರ್ಮಿತ ಎಂದು ಹೇಳಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ಅದು ನಿಜವಾಗುವುದಿಲ್ಲ. ರಕ್ಷಣೆ ಇಲಾಖೆಗೆ ನೀಡುವ ಯುದ್ಧ ಸಲಕರಣೆಗಳು ದೇಶಿಯವಾಗಿರಲಿ ಎಂಬುದು ನಮ್ಮ ನಿರೀಕ್ಷೆ ಎಂದು ಹೇಳಿದ್ದಾರೆ.
ಇನ್ನು ಇಪಿಯ (ತುರ್ತು ಸೇನಾ ಯಂತ್ರೋಪಕರಣ ಖರೀದಿ) ಬಗ್ಗೆಯೂ ಅವರು ಅಸಮಾಧನ ಹೊರ ಹಾಕಿದ್ದರು. ಐದನೇ ಮತ್ತು ಆರನೇ ಐಪಿ ಸಮಯದಲ್ಲಿ ಹಲವು ಲೋಪಗಳನ್ನು ಸೇನೆ ಪತ್ತೆ ಮಾಡಿದೆ. ಇದರಿಂದ ಸೇನೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟು ಮಾಡಿದೆ. ಉಪಕರಣಗಳನ್ನು ನೀಡುವಾಗ ಕಂಪನಿಗಳು ಅತಿಯಾಗಿ ಭರವಸೆ ನೀಡಿದೆ. ಆದರೆ ಆ ಯಾವ ಭರವಸೆಯನ್ನು ಸರಿಯಾಗಿ ಪೊರೈಸಿಲ್ಲ. ಇನ್ನು ನಾವು ಕೇಳಿದ ಸಮಯಕ್ಕೆ ಯುದ್ಧ ಸಾಮಾಗ್ರಿಗಳನ್ನು ನೀಡಲು ಕಂಪನಿಗಳು ವಿಫಲವಾಗಿರುವುದನ್ನು ಕೂಡ ನೋಡಿದ್ದೇವೆ. ಸಮಯದ ಚೌಕಟ್ಟಿನೊಳಗೆ ಕೆಲಸ ಮಾಡಲು ಕಲಿಯಿರಿ ಎಂದು ಖಾರವಾಗಿ ಹೇಳಿದರು.
ಐಪಿ ಎಂದರೇನು?
ಐಪಿ ಎಂದರೆ ತುರ್ತು ಸೇನಾಪಡೆಗೆ ಯಂತ್ರೋಪಕರಣ ಖರೀದಿಗೆ ಸೇನೆ ಇರುವ ಪರಮಾಧಿಕಾರ. ಈ ಮೂಲಕ ಸೇನೆಗೆ ತುರ್ತು ಅಗತ್ಯ ಇರುವ ಯುದ್ಧ ಉಪಕರಣಗಳನ್ನು ಸಚಿವಾಲಯದ ಅನುಮೋದನೆ ಇಲ್ಲದೆ ಮತ್ತು ಇತರ ಯಾವುದೇ ದೀರ್ಘಾವಧಿಯ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸಿ ಖರೀದಿಸಬಹುದು. ಸೇನಾ ಯಂತ್ರೋಪಕರಣ ಖರೀದಿ ಅಡಿ ಸುಮಾರು 300 ಕೋಟಿ ರೂ.ಗಳ ಅಗತ್ಯ ಒಪ್ಪಂದಗಳನ್ನು ಮಾಡಿಕೊಳ್ಳಲು ಸೇನೆಗೆ ಅವಕಾಶವಿದೆ ಎಂದು ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
#ವೀಕ್ಷಿಸಿ | ದೆಹಲಿ: ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳುತ್ತಾರೆ, “ಉದ್ಯಮದಿಂದ ನಮ್ಮ ನಿರೀಕ್ಷೆ. ನಿಮ್ಮ ಲಾಭ-ಚಾಲಿತ ಪ್ರಯತ್ನಗಳಲ್ಲಿ ನಾವು ಸ್ವಲ್ಪ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ನಿರೀಕ್ಷಿಸುತ್ತೇವೆ… ಉದ್ಯಮವು ನಮಗೆ ಅದರ ಸಾಮರ್ಥ್ಯಗಳ ಬಗ್ಗೆ ಸತ್ಯವಾಗಿರಬೇಕು. ನೀವು ಒಪ್ಪಂದಕ್ಕೆ ಸಹಿ ಹಾಕಿದರೆ, ನೀವು ನಮ್ಮನ್ನು ಸುಸ್ತಾಗಿ ಬಿಡಲು ಸಾಧ್ಯವಿಲ್ಲ. pic.twitter.com/s4UNlMC7Ur
– ANI (@ANI) ನವೆಂಬರ್ 14, 2025
ನಿಮ್ಮ ತಂತ್ರಜ್ಞಾನದಲ್ಲಿ ಲೋಪ ಕಂಡು ಬಂದರೆ ದೇಶಕ್ಕೆ ಅಪಾಯ: ಚೌಹಾಣ್ ಕಿವಿ ಮಾತು
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಕಂಪನಿಗಳು ಸ್ಥಳೀಯ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ, ದೇಶೀಯ ವಸ್ತುಗಳಿಗೆ ಮೊದಲು ಗಮನ ನೀಡಿ. ಅವರಿಗೆ ಮರೆಮಾಚುವ ಕೆಲಸ ಮಾಡಬೇಡಿ. ಹಾಗೂ ಒಂದು ಮಾತು ಮಾತ್ರ ನೆನೆಪಿನಲ್ಲಿಟ್ಟುಕೊಳ್ಳಿ, ಸೇನೆಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದೀರಾ, ಆ ಒಪ್ಪಂದದಂತೆ ನಡೆದುಕೊಳ್ಳಿ, ಸೇನಾ ತಂತ್ರಜ್ಞಾನದಲ್ಲಿ ಲೋಪ ಕಂಡು ಬಂದರೆ, ದೇಶಕ್ಕೆ ಅಪಾಯ, ನಾವು ಕೇಳಿದ ಸಮಯದಲ್ಲಿ ಉಪಕರಣಗಳನ್ನು ಒದಗಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.
ಹಲವು ಕಂಪನಿಗಳು ಹೇಳುತ್ತವೆ, ನಾನು ಶೇಕಡ 70ರಷ್ಟು ದೇಶೀಯ ತಂತ್ರಜ್ಞಾನಗಳನ್ನು ಬಳಸುತ್ತೇವೆ, ಆದರೆ ಸತ್ಯ ನಮಗೆ ತಿಳಿದಿದೆ. ಸುಳ್ಳು ಹೇಳುವ ಅಥವಾ ಮೋಸ ಮಾಡುವ ಮುನ್ನ ಯೋಚನೆ ಮಾಡಿ ನೀವು ವ್ಯವಹಾರ ಮಾಡುತ್ತಿರುವುದು ಬಲಿಷ್ಠ ಸೇನೆಯೊಂದಿಗೆ ಎಂದು. ನಮಗೆ ನೀಡುವ ಸೇನಾ ಉಪಕರಣಗಳು ಕೇವಲ ನಿಮ್ಮ ಲಾಭಕ್ಕಾಗಿ, ಅದು ದೇಶದ ರಕ್ಷಣೆ ಎಂಬುದು ನೆನೆಪಿರಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀನಗರ ನೌಗಾಂ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: ಪೊಲೀಸರು ಸೇರಿ 9 ಮಂದಿ ಸಾವು, ದೆಹಲಿ ಸ್ಫೋಟ ಬೆನ್ನಲ್ಲೇ ಮತ್ತೊಂದು ಕೃತ್ಯ
ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರಬೇಕೇ ಹೊರತು ಬೆಲೆ ಕಟ್ಟುವವರಾಗಬಾರದು:
ಯುದ್ಧ ಉಪಕರಣಗಳನ್ನು ಉತ್ಪಾದಿಸುವ ಕಂಪನಿಗಳು ಮೇಕ್-ಇಂಡಿಯಾದ ಮೂಲಕ ಜಾಗತಿಕವಾಗಿ ಪೈಪೋಟಿ ನೀಡಬೇಕೇ ಹೊರತು, ದೇಶದ ಸೇನೆಗೆ ಬೆಲೆ ಕಟ್ಟುವವರಲ್ಲ. ಖಾಸಗಿ ವಲಯವು ಜಾಗತಿಕ ಮಾರುಕಟ್ಟೆಗಳಿಗೆ ಹೊಂದಿಕೆಯಾದರೆ ಮಾತ್ರ ಮೇಕ್-ಇನ್-ಭಾರತದ ರಕ್ಷಣಾ ಉತ್ಪಾದನೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಭಾರತೀಯ ಕಂಪನಿಗಳು ವೆಚ್ಚ ಮತ್ತು ಸ್ಪರ್ಧಾತ್ಮಕವಾಗಿ ಕೆಲಸ ಮಾಡಬೇಕು. ವೆಚ್ಚ ಮಾಡುವುದು ಅಥವಾ ಸ್ಪರ್ಧಾತ್ಮಕವಾಗುವುದು ಎಂದರೆ ಭಾರತೀಯ ಸಶಸ್ತ್ರ ಪಡೆಗಳಿಗೆ ಮಾರಾಟ ಮಾಡುವುದು ಅಲ್ಲ, ಅಂತರರಾಷ್ಟ್ರೀಯ ಗುಣಮಟ್ಟದ ಮಾರಾಟ ಮಾಡಲು ವೆಚ್ಚ ಹಾಗೂ ಸ್ಪರ್ಧಾತ್ಮಕವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ