ಒಟಿಟಿ ವೀಕ್ಷಕರಿಗೆ ಗುಡ್​​ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

ಒಟಿಟಿ ವೀಕ್ಷಕರಿಗೆ ಗುಡ್​​ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ


ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಸಿನಿಮಾಗಳು ಯಾವ ರೀತಿಯಲ್ಲಿ ಸೆನ್ಸಾರ್ ಆಗುತ್ತವೆಯೋ ಅದೇ ರೀತಿ ಒಟಿಟಿಯಲ್ಲಿ ಪ್ರಸಾರವಾಗುವ ಸಿನಿಮಾ ಹಾಗೂ ವೆಬ್ ಸರಣಿಗಳಿಗೆ ಸೆನ್ಸಾರ್ ಆಗಬೇಕು ಎಂದು ಒಂದು ವರ್ಗದ ಜನರು ಧ್ವನಿ ಎತ್ತಿದ್ದಾರೆ. ಆದರೆ, ಇದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್ ಸೇರಿದಂತೆ ಇತರೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿರುವ ಕಂಟೆಂಟ್‌ಗಳಿಗೆ ಸೆನ್ಸಾರ್ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಮಕ್ಕಳು ತಮ್ಮ ಬಳಿ ಮೊಬೈಲ್ ಇಲ್ಲದಿದ್ದರೂ ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಸುಲಭವಾಗಿ ವೀಕ್ಷಿಸಬಹುದು. ತಂದೆ-ತಾಯಿ ಮೊಬೈಲ್ ಪಡೆದೋ ಅಥವಾ ಟಿವಿಯಲ್ಲಿ ಒಟಿಟಿ ಸಿನಿಮಾ ನೋಡಬಹುದು. ಇಂತಹ ಸಂದರ್ಭದಲ್ಲಿ ಸೆನ್ಸಾರ್ ರಹಿತ ಸಿನಿಮಾಗಳು, ವೆಬ್ ಸೀರಿಸ್‌ಗಳನ್ನು ಅವರು ವೀಕ್ಷಿಸಿದರೆ ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸೆನ್ಸಾರ್ ಆಗಬೇಕು ಎಂದು ಅನೇಕರು ಇದ್ದರು. ಇದಕ್ಕೆ ಕೇಂದ್ರ ಸರ್ಕಾರ ಲೋಕದಲ್ಲಿ ಉತ್ತರಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ಸಚಿವ ಎಲ್ ಮುರುಗನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸಲಾಗುತ್ತಿದೆ. ವಯಸ್ಸನ್ನು ಆಧರಿಸಿ ಒಟಿಟಿ ಪ್ಲಾಟ್ ಫಾರ್ಮ್ ವಿಷಯಗಳನ್ನು ವರ್ಗೀಕರಿಸಲಾಗುತ್ತಿದೆ’ ಎಂದು ಮಾಹಿತಿ. ಕೇಂದ್ರ ಸರ್ಕಾರವು ಅಶ್ಲೀಲ ವಿಷಯಗಳು ಹರಡುತ್ತಿದ್ದವು 43 ಒಟಿಟಿ ಪ್ಲಾಟ್ಫಾರ್ಮ್ ಅನ್ನು ನಿಷೇಧಿಸಿದ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಒಟಿಟಿ ಸಿನಿಮಾ-ಸೀರಿಸ್‌ಗಳಿಗೆ ಸೆನ್ಸಾರ್ ಪ್ರಕ್ರಿಯೆ ಶುರುವಾದರೆ ಎಲ್ಲಾ ಸಿನಿಮಾ ಹಾಗೂ ಸೀರಿಸ್‌ಗಳನ್ನು ನೋಡುವ ಅವಕಾಶ ವೀಕ್ಷಕರಿಗೆ ಸಿಗಲಿದೆ. ಕೆಲವು ಶಬ್ದಗಳಿಗೆ, ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕುವಂತೆ ಸೂಚಿಸೋ ಸಾಧ್ಯತೆ ಇತ್ತು. ಆದರೆ, ಕೇಂದ್ರದ ನಿರ್ಧಾರ ಒಟಿಟಿ ಪ್ರಿಯರಿಗೆ ಖುಷಿ ನೀಡಿದೆ.

ಇದನ್ನೂ ಓದಿ: ಈ ವಾರ ಒಟಿಟಿಗೆ ಬರುತ್ತಿವೆ ಭರ್ಜರಿ ಸಿನಿಮಾಗಳು: ಪಟ್ಟಿ ಇಲ್ಲಿದೆ

ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲತೆ ನಿಯಂತ್ರಿಸಲು ಪ್ರಮುಖ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕಾಗಿ ಕೇಂದ್ರವು ಪಟ್ಟಿ ಮಾಡಿದೆ. 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸಂಸ್ಥೆಗಳು ಸ್ಥಳೀಯ ಅಧಿಕಾರಿಗಳನ್ನು ನೇಮಿಸಬೇಕಾಗಿದೆ. ಅವರು ದೂರು ಬಂದ 72 ಗಂಟೆಗಳ ಒಳಗೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವ ಮೂಲಕ ಪರಿಹಾರ ನೀಡುವ ಅಗತ್ಯವಿದೆ ಎಂದು ಕೇಂದ್ರ ಸಮಸ್ಯೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *