ಬಿಗ್​​ಬಾಸ್ ಕನ್ನಡ 12: ವೋಟಿಂಗ್ ಇಲ್ಲದೆ ಇಬ್ಬರು ಹೊರಕ್ಕೆ: ಯಾರದು?

ಬಿಗ್​​ಬಾಸ್ ಕನ್ನಡ 12: ವೋಟಿಂಗ್ ಇಲ್ಲದೆ ಇಬ್ಬರು ಹೊರಕ್ಕೆ: ಯಾರದು?


ಬಿಗ್ಬಾಸ್ ಕನ್ನಡ ಸೀಸನ್ 12ರ (ಬಿಗ್ ಬಾಸ್) ಮನೆಯಲ್ಲಿ ಕಳೆದ ವಾರ ಎಲಿಮಿನೇಷನ್ ನಡೆದಿಲ್ಲ. ಎಲಿಮಿನೇಷನ್ ಹೆಸರಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಹೊರಗೆ ಕಳಿಸಿದ್ದ ಬಿಗ್ಬಾಸ್ ಅವರಿಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಿ, ಅವರನ್ನೂ ಸಹ ಟಾಸ್ಕ್ ನಲ್ಲಿ ಒಂದು ಭಾಗವಾಗಿಸಿದ್ದರು. ನಿನ್ನೆ (ಶನಿವಾರ) ಎಪಿಸೋಡ್ ನಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮರಳಿ ಮನೆಗೆ ಕರೆಸಿಕೊಂಡ ಬಿಗ್ಬಾಸ್ ಇದೀಗ ಈ ವಾರವೂ ಯಾವುದೇ ಎಲಿಮಿನೇಷನ್ ಮಾಡಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ.

ಕೆಲವು ವಾರಗಳ ಹಿಂದೆ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಅವರು ಅತಿಥಿಗಳಾಗಿ ಬಂದಿದ್ದರು. ಒಂದು ವಾರದ ನಂತರ ಉಗ್ರಂ ಮಂಜು, ತ್ರಿವಿಕ್ರಂ, ಮೋಕ್ಷಿತಾ ಮನೆಯಿಂದ ಹೊರಗೆ ಹೋದರು. ಆದರೆ ರಜತ್ ಮತ್ತು ಚೈತ್ರಾ ಅವರಿಗೆ ವೈಲ್ಡ್ ಕಾರ್ಡ್ ಎಂಟ್ರಿಗಳು ಎಂದು ಹೇಳಿ, ಇನ್ನು ಮುಂದೆ ಅವರು ಸಹ ನಿಮ್ಮೊಂದಿಗೆ ಸ್ಪರ್ಧೆಯಲ್ಲಿದ್ದಾರೆ ಎಂದು ಇತರ ಸ್ಪರ್ಧಿಗಳಿಗೆ ಹೇಳಿ ಮನೆಯಲ್ಲಿ ಉಳಿಸಲಾಗಿದೆ.

ರಜತ್ ಮತ್ತು ಚೈತ್ರಾ ಅವರು ಸುಮಾರು ನಾಲ್ಕು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದರು. ಚೆನ್ನಾಗಿ ಆಟ ಆಡಿದ್ದಾರೆ. ಕೆಲವರ ವಿರೋಧ ಕಟ್ಟಿಕೊಂಡರು. ರಜತ್ ಅಂತೂ ಕಳೆದ ವಾರ, ‘ನಾನು, ಗಿಲ್ಲಿ ಹಾಗೂ ಇತರರನ್ನು ಮನೆಯಿಂದ ಹೊರಗೆ ಹಾಕಿಯೇ ಈ ಮನೆ ಬಿಟ್ಟು ಹೋಗೋದು’ ಎಂದು ಅಬ್ಬರಿಸಿದ್ದರು. ಆದರೆ ಈ ವಾರ ಅವರೇ ಮನೆಯಿಂದ ಹೊರಗೆ ಹೋಗಿದ್ದಾರೆ.

ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಸುದೀಪ್ ಅವರು ಈ ವಾರ ರಜತ್ ಮತ್ತು ಚೈತ್ರ ಅವರ ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾರೆ. ರಜತ್ ಮತ್ತು ಚೈತ್ರಾ ಅವರು ಸ್ಪರ್ಧಿಗಳಾಗಿರಲಿಲ್ಲ, ಅವರು ಅತಿಥಿಗಳೇ ಆಗಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿರಲಿಲ್ಲ ಎಂಟ್ರಿ ಸುದೀಪ್. ಆ ಇಬ್ಬರೂ ಯಾರ ಪದವಿಯನ್ನೂ ಕಿತ್ತುಕೊಳ್ಳಲು ಬಂದಿಲ್ಲ. ಇಬ್ಬರೂ ಸಹ ನಾವು ಕೇಳಿದ ಕೂಡಲೇ ಸಮಯ ಮಾಡಿಕೊಂಡರು, ಕೆಲಸಗಳನ್ನು ಬದಿಗೊತ್ತಿ ಮನೆಗೆ ಬಂದರು. ಇದೆ, ಅವರು ಸ್ಪರ್ಧಿಗಳಲ್ಲ ಎಂಬುದು ಗೊತ್ತಿದ್ದರೂ ಸಹ ಅದನ್ನು ಎಲ್ಲಿಯೂ ಬಿಟ್ಟುಕೊಡದೆ ಎಲ್ಲರೊಟ್ಟಿಗೆ ಸೇರಿ ಆಟವಾಡಿದರು. ನನ್ನಿಂದಲೂ ಸಹ ಪಾಪ ಕೆಲವೊಮ್ಮೆ ಬೈಸಿಕೊಂಡರು’ ಎಂದರು ಸುದೀಪ್.

ಅತಿಥಿಗಳು ಬಂದು ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ, ಮನೆಯ ಸದಸ್ಯರೊಟ್ಟಿಗೆ ಆಟ ಆಡಿದ್ದಕ್ಕೆ ರಜತ್ ಮತ್ತು ಚೈತ್ರಾ ಅವರಿಗೆ ಧನ್ಯವಾದ ಹೇಳಿದರು ಸುದೀಪ್. ಹೋಗುವ ಸಮಯದಲ್ಲಿ ತುಸು ಭಾವುಕರಾದ ಚೈತ್ರಾ, ಸುದೀಪ್ ಎದುರು ಮಾತನಾಡುತ್ತಾ, ‘ಈ ಬಿಗ್‌ಬಾಸ್ ನನಗೆ ನನ್ನ ಜೀವನ ಮರಳಿ ಕೊಟ್ಟಿದೆ. ನಾನು ಸೋತಿದ್ದಾಗ ನನಗೆ ಮತ್ತೆ ವೇದಿಕೆ ಕೊಟ್ಟಿದೆ. ನಾನು ಮದುವೆ ಆಗಿ ಸುಮಂಗಲಿಯಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ಬಿಗ್ಬಾಸ್ ಕಾರಣ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:55 pm, ಭಾನುವಾರ, 21 ಡಿಸೆಂಬರ್ 25



Source link

Leave a Reply

Your email address will not be published. Required fields are marked *