ಚೈತ್ರಾ ಕುಂದಾಪುರ ಕಣ್ಣೀರು ಫೇಕಾ? ಹೌದೆನ್ನಲು ಸಾಕ್ಷಿ ತಂದ ನೆಟ್ಟಿಗರು

ಚೈತ್ರಾ ಕುಂದಾಪುರ ಕಣ್ಣೀರು ಫೇಕಾ? ಹೌದೆನ್ನಲು ಸಾಕ್ಷಿ ತಂದ ನೆಟ್ಟಿಗರು


ಚೈತ್ರಾ ಕುಂದಾಪುರ ಅವರು ಎರಡನೇ ಬಾರಿಗೆ ಬಿಗ್ ಬಾಸ್ ಮನೆ ಸೇರಿದ್ದಾರೆ. ಈ ಸೀಸನ್ ಅಲ್ಲಿ ಅತಿಥಿಯಾಗಿ ದೊಡ್ಮನೆಗೆ ತೆರಳಿದ್ದ ಅವರು ನಂತರ ಸ್ಪರ್ಧಿ ಆದರು. ಈಗ ಅವರು ದೊಡ್ಮನೆಯಲ್ಲಿ ಆಡುತ್ತಿದ್ದಾರೆ. ಆದರೆ, ಈ ವಾರ ಅವರು ನಡೆದುಕೊಂಡ ರೀತಿ ಚರ್ಚೆಗೆ ಸರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿವೆ. ಕಳೆದ ಸೀಸನ್ ಆಟವನ್ನೇ ಚೈತ್ರಾ ರಿಪೀಟ್ ಮಾಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಅವರು ಕಳೆದ ಸೀಸನ್ ಅಲ್ಲಿ ಅನೇಕ ಬಾರಿ ಅತ್ತಿದ್ದು ಇದೆ. ಈ ಸಂದರ್ಭದಲ್ಲಿ ಅವರು ದೇವರಿಗೆ ದೀಪ ಹಚ್ಚಿ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳುತ್ತಾರೆ. ಅವರು ಬಂದು ಕೆಲ ವಾರ ಕಳೆದಿದ್ದರು ಈ ರೀತಿ ಎಂದಿಗೂ ಮಾಡಲಿಲ್ಲ. ಆದರೆ, ಈ ವಾರ ಅವರು ಆ ರೀತಿ ನಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ರಜತ್ ಅವರ ಮಾತು.

ರಜತ್ ಅವರು ಈ ವಾರ ಚೈತ್ರಾ ಕುಂದಾಪುರ ಜೊತೆ ಜಗಳ ಆಡಿದರು. ಆಟದ ಮಧ್ಯೆ ಅವರನ್ನು ಸುಳ್ಳಿ ಎಂದು ಕರೆದರು. ಕಳೆದ ಸೀಸನ್ ಅಲ್ಲಿ ಅನೇಕರು ಚೈತ್ರಾ ಅವರನ್ನು ಸುಳ್ಳಿ ಎಂದು ಕರೆದಿದ್ದು ಇದೆ. ಈ ಬಾರಿಯೂ ಅದೇ ಟ್ಯಾಗ್‌ನಿಂದ ಚೈತ್ರಾನ ಕರೆದಿದ್ದಕ್ಕೆ ಅವರಿಗೆ ಬೇಸರವಾಗಿದೆ. ಅವರು ಗಳನೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್

ಗಿಲ್ಲಿ ಹಾಗೂ ರಜತ್ ಅವರು ಸೋಫಾ ಏರಿಯಾದಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ದೇವರ ಎದುರು ಬಂದು ಕಣ್ಣೀರು ಹಾಕಿದ್ದಾರೆ. ಕುಂಕುಮ ಹಚ್ಚಿಕೊಳ್ಳುವಾಗ ಅವರು ಗಿಲ್ಲಿ ಹಾಗೂ ರಜತ್ ಕಡೆ ನೋಡಿದ್ದಾರೆ. ಅವರು ತಮ್ಮನ್ನೇ ನೋಡುತ್ತಿದ್ದಾರೆ ಎಂದು ಚೈತ್ರಾ ಖಚಿತವಾಗಿ ಮಾಡಿಕೊಂಡಿದ್ದರು. ಈ ವಿಷಯವನ್ನು ರಾಶಿಕಾ ಕೂಡ ದೊಡ್ಮನೆಯಲ್ಲಿ ಚರ್ಚೆ ಮಾಡಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *