ಚಾಮರಾಜನಗರ, ಡಿ.11: ಸರ್ಕಾರದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಾಡಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ರಾಮಯ್ಯನಪುರ ಗ್ರಾಮದ ಜನರು, ಮೂಲಭೂತ ಸಮಸ್ಯೆ ಬಗೆಹರಿಯದಿದ್ದರೆ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದರು. ರಾಮಯ್ಯನಪುರ ಗ್ರಾಮದಲ್ಲಿ ರಸ್ತೆಯಿಲ್ಲ, ಕುಡಿಯುವ ನೀರಿಲ್ಲ, ಜೊತೆಗೆ ಕಾಡು ಪ್ರಾಣಿಗಳ ಕಾಟದಿಂದ ಜನ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಇನ್ನು ಶಾಲೆಗೆ ಹೋಗುವ ಮಕ್ಕಳು ಕಲ್ಲು ಮುಳ್ಳಿನ ಹಾದಿಯಲ್ಲಿ ದಿನ ನಿತ್ಯ ನಡೆದುಕೊಂಡೇ ಹೋಗಬೇಕು. ಇಲ್ಲಿ ನಮ್ಮ ಕೇಳುವವರು ಇಲ್ಲ. ದಿನನಿತ್ಯ ಈ ಹಿಂಸೆಯಲ್ಲೇ ಬದುಕಾಗಿದೆ. ಜನಪ್ರತಿನಿಧಿಗಳ ಚುನಾವಣೆ ವೇಳೆ ಮತ ಕೇಳಲು ಬರುತ್ತಾರೆ ಮತ್ತೆ ಸುದ್ದಿ ಇರುವುದಿಲ್ಲ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ