ಚಾಮರಾಜನಗರದಲ್ಲಿ ಹುಲಿ ಸಾವು ಕೇಸ್​: ಉರುಳು ಹಾಕಿದ್ದ ಆರೋಪಿ ಅರೆಸ್ಟ್

ಚಾಮರಾಜನಗರದಲ್ಲಿ ಹುಲಿ ಸಾವು ಕೇಸ್​: ಉರುಳು ಹಾಕಿದ್ದ ಆರೋಪಿ ಅರೆಸ್ಟ್


ಆರೋಪಿಯನ್ನ ಬಂಧಿಸಿದ ಅರಣ್ಯಾಧಿಕಾರಿಗಳುಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ಚಾಮರಾಜನಗರ, ಫೆಬ್ರವರಿ 20: ಬಿಳಿಗಿರಿ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ್ಲಿ ಇತ್ತೀಚೆಗೆ ನಡೆದಿದ್ದ ಉರುಳಿಗೆ ಸಿಲುಕಿ ಹುಲಿ ಸಾವು (ಹುಲಿ ಸಾವಿನ ಪ್ರಕರಣ) ಇದೀಗ ಉರುಳು ಹಾಕಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ (ಬಂಧನ). ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಕುಮಾರ್(35) ಬಂಧಿತ ಬೇಟೆಗಾರ. ಆರೋಪಿ ವನ್ಯಜೀವಿ ಬೇಟೆಯಾಡಲು ಉರುಳು ಹಾಕಿದ್ದ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹ

ಫೆಬ್ರವರಿ 15ರಂದು ಬೃಹದಾಕಾರದ ಗಂಡು ಹುಲಿಯ ಮೃತದೇಹವೊಂದು ಗುಂಡಾಲ್ ಜಲಾಶಯದಲ್ಲಿ ತೇಲುತ್ತಿತ್ತು. ಸ್ಥಳಕ್ಕೆ ಭೇಟಿ ಕೊಟ್ಟ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಾಥಮಿಕ ತನಿಖೆಯಲ್ಲಿ ಕತ್ತಿಗೆ ಉರುಳಿ ಸಿಲುಕಿ ಪರದಾಡಿ ಬಳಿಕ ನೀರು ಕುಡಿಯಲು ಬಂದಾಗ ನೀರಿನಲ್ಲಿ ಹುಲಿ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುವುದು ತಿಳಿದುಬಂದಿತ್ತು.

ಇದನ್ನೂ ಓದಿ: ಗಂಡು ಹುಲಿ ಮೃತದೇಹ ಪತ್ತೆ: ಡ್ಯಾಂನಲ್ಲಿ ಶವ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ

ಇನ್ನು ಗುಂಡಾಲ್ ಜಲಾಶಯದ ಸುತ್ತಮುತ್ತ ಜಮೀನುಗಳಿವೆ. ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಾಡು ಹಂದಿಗಳು ಬಂದು ನಾಶ ಮಾಡುತ್ತಿರುತ್ತವೆ. ಆದ್ದರಿಂದ ಕಾಡು ಹಂದಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಕೆಲವರು ಬೈಕ್ ಕ್ಲಚ್ ಕೇಬಲ್ ಮೂಲಕ ಉರಳನ್ನ ಸಿದ್ಧಪಡಿಸಿ ಬೇಲಿ ಬಳಿ ಹಾಕುತ್ತಾರೆ.

ಆರೋಪಿ ಜೊತೆ ಕೃತ್ಯವೆಸಗಿರುವ ಶಂಕೆ

ಮೃತ ಹುಲಿ 6 ವರ್ಷದ ಗಂಡು ಹುಲಿ ಆಗಿದ್ದು, ಬರೋಬ್ಬರಿ 150 ಕೆಜಿ ತೂಕವಿತ್ತು. ಇನ್ನು ಆರೋಪಿಗಳನ್ನು ಪತ್ತೆ ಹಚ್ಚಿದವರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸಿದ್ದರು. ಅದರಂತೆ ಇದೀಗ ಬೇಟೆಗಾರನ ಬಂಧನವಾಗಿದೆ. ಬೈಕ್ ಕ್ಲಚ್ ವೈರ್ ಬಳಸಿ ವನ್ಯಜೀವಿ ಬೇಟೆಗೆ ಆರೋಪಿ ಕುಮಾರ್ ಉರುಳು ಹಾಕಿದ್ದ.

ಇದನ್ನೂ ಓದಿ: ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್ T2 ಆಲ್ಫಾ 5ನೇ ಕಾರ್ಯಾಚರಣೆಯು ಯಶಸ್ವಿ

ಆಹಾರ ಅರಸಿ ಬಂದಿದ್ದ ಹುಲಿ, ಉರುಳಿಗೆ ಸಿಲುಕಿ ನರಳಾಡಿ ಕೊನೆಗೆ ಗುಂಡಾಲ್ ಜಲಾಶಯದಲ್ಲಿ ಪ್ರಾಣ ಬಿಟ್ಟಿತ್ತು. ಕುಮಾರ್ ಜೊತೆ ಸೇರಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಅರಣ್ಯಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *