ಚಾಮರಾಜನಗರ, ಡಿಸೆಂಬರ್ 10: ಚಾಮರಾಜನಗರದ ಸುವರ್ಣಾವತಿ ಜಲಾಶಯದ ಹಿನ್ನೀರಿನಲ್ಲಿ ಒಂದು ಕಿಲೋಮೀಟರ್ ದೂರ ಒಂಟಿ ಸಲಗ ಈಜಿ ಬಂದಿದೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಆನೆಯ ಈಜಾಟ ಸ್ಥಳೀಯರನ್ನು ಅಚ್ಚರಿಗೊಳಿಸಿದೆ. ರೈತರು ಆತಂಕಗೊಂಡಿದ್ದು, ಆನೆಯನ್ನು ತಕ್ಷಣ ಕಾಡಿಗಟ್ಟಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಸ್ಥಳೀಯರ ಮೊಬೈಲ್ ಕ್ಯಾಮರದಲ್ಲಿ ಒಂಟಿ ಸಲಗದ ಓಡಾಟದ ದೃಶ್ಯ ಸೆರೆ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.