Former Jharkhand CM Champai Soren’s Grandson Found Dead in Manali ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ 19 ವರ್ಷದ ಮೊಮ್ಮಗ ವೀರ್ ಸೊರೇನ್, ಸ್ನೇಹಿತರೊಂದಿಗೆ ಮನಾಲಿಗೆ ಪ್ರವಾಸಕ್ಕೆ ತೆರಳಿದ್ದಾಗ ಹೋಂಸ್ಟೇಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ 19 ವರ್ಷದ ಮೊಮ್ಮಗ ವೀರ್ ಸೊರೇನ್ ಹಿಮಾಚಲ ಪ್ರದೇಶದ ಮನಾಲಿಯ ಹೋಂಸ್ಟೇಯೊಂದರಲ್ಲಿ ಮಂಗಳವಾರ (ಫೆಬ್ರವರಿ 24) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ವೀರ್ ಸೊರೇನ್ ತನ್ನ ಸ್ನೇಹಿತರೊಂದಿಗೆ ಫೆಬ್ರವರಿ 22 ರಂದು ಮನಾಲಿಗೆ ಬಂದಿದ್ದರು. ಸಿಂಸಾದಲ್ಲಿನ ಹೋಂಸ್ಟೇಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಈ ತಂಡವು, ಫೆಬ್ರವರಿ 23 ರಂದು ಸೋಲಾಂಗ್ ವ್ಯಾಲಿ ಮತ್ತು ಹಮ್ಟಾ ಪಾಸ್ ಮಾರ್ಗದ ಸೇತನ್ ಗ್ರಾಮಕ್ಕೆ ಭೇಟಿ ನೀಡಿತ್ತು.

ಪ್ರವಾಸ ಮುಗಿಸಿ ಬಂದ ನಂತರ ಫೆಬ್ರವರಿ 24ರಂದು ಸ್ನೇಹಿತರು ಹೊರಗೆ ಹೋದಾಗ ವೀರ್ ರೂಮಿನಲ್ಲೇ ಉಳಿದುಕೊಂಡಿದ್ದರು. ಸ್ನೇಹಿತರು ವಾಪಸ್ ಬಂದಾಗ ತಮಗೆ ತೀವ್ರ ತಲೆನೋವು ಇದೆ ಎಂದು ವೀರ್ ತಿಳಿಸಿದ್ದರು. ನಂತರ ಔಷಧ ಸೇವಿಸಿ ನಿದ್ದೆಗೆ ಜಾರಿದ್ದರು.

ಮಧ್ಯಾಹ್ನ ಸುಮಾರು 2:30ಕ್ಕೆ ವೀರ್ ಹಾಸಿಗೆಯಿಂದ ಕೆಳಗೆ ಬಿದ್ದ ಶಬ್ದ ಕೇಳಿ ಸ್ನೇಹಿತರು ಓಡಿ ಬಂದಿದ್ದಾರೆ. ಆಗ ವೀರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ಅವರ ಬಾಯಿಯಲ್ಲಿ ನೊರೆ ಬಂದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ಎತ್ತರದ ಪ್ರದೇಶಕ್ಕೆ ಭೇಟಿ ನೀಡಿದಾಗ ಉಂಟಾಗುವ ‘ಹೈ ಆಲ್ಟಿಟ್ಯೂಡ್ ಸಿಕ್ನೆಸ್’ (High altitude sickness) ಅಥವಾ ಆಮ್ಲಜನಕದ ಕೊರತೆಯಿಂದ ಈ ಸಾವು ಸಂಭವಿಸಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.

ಮೊಮ್ಮಗನ ಅಕಾಲಿಕ ಮರಣದಿಂದ ಕುಟುಂಬವೇ ಛಿದ್ರವಾಗಿದೆ ಎಂದು ಚಂಪೈ ಸೊರೇನ್ ಎಕ್ಸ್ (X) ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕೂಡ ಈ ಘಟನೆಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.

Source link
ಹೋಮ್‌ಸ್ಟೇಯಲ್ಲಿ ಹೆಣವಾಗಿ ಪತ್ತೆಯಾದ ಮಾಜಿ ಸಿಎಂ ಮೊಮ್ಮಗ!