Chanakya Niti for wealth: ಆಚಾರ್ಯ ಚಾಣಕ್ಯರ ನೀತಿಗಳು ಕೇವಲ ರಾಜಕೀಯಕ್ಕೆ ಮಾತ್ರವಲ್ಲ, ನಮ್ಮ ಆರ್ಥಿಕ ಸುಭದ್ರತೆಗೂ ದಾರಿದೀಪ. ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲಿರಬೇಕೆಂದರೆ ಮತ್ತು ಗಳಿಸಿದ ಸಂಪತ್ತು ಮನೆಯಲ್ಲಿ ಉಳಿಯಬೇಕೆಂದರೆ ಚಾಣಕ್ಯರು ಹೇಳಿದ ಈ ನಾಲ್ಕು ಸೂತ್ರಗಳನ್ನು ತಪ್ಪದೇ ಪಾಲಿಸಿ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಆರ್ಥಿಕ ಸುಭದ್ರತೆ ಮತ್ತು ಲಕ್ಷ್ಮಿ ದೇವಿಯ ಕೃಪೆ ಇರಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ನಾವು ಕಠಿಣ ಪರಿಶ್ರಮ ಪಡುತ್ತೇವೆ, ಪೂಜೆ-ಪುನಸ್ಕಾರಗಳನ್ನು ಮಾಡುತ್ತೇವೆ. ಆದರೆ, ಅದೆಷ್ಟೋ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಹಣ ಉಳಿಯುವುದೇ ಇಲ್ಲ. ಇದಕ್ಕೆ ಕಾರಣ ನಮ್ಮ ಜೀವನಶೈಲಿ ಮತ್ತು ನಡವಳಿಕೆ ಎನ್ನುತ್ತಾರೆ ಮಹಾನ್ ಜ್ಞಾನಿ ಆಚಾರ್ಯ ಚಾಣಕ್ಯ. ಚಾಣಕ್ಯರ ಪ್ರಕಾರ, ಯಾರ ಜೀವನದಲ್ಲಿ ಈ ನಾಲ್ಕು ಗುಣಗಳಿರುತ್ತವೋ, ಅಲ್ಲಿ ಲಕ್ಷ್ಮಿ ಒಲಿದು ಬರುತ್ತಾಳೆ ಮತ್ತು ಶಾಶ್ವತವಾಗಿ ನೆಲೆಸುತ್ತಾಳೆ.

ಆಚಾರ್ಯ ಚಾಣಕ್ಯರ ಪ್ರಕಾರ, ಮೋಸ ಅಥವಾ ಅಧರ್ಮದಿಂದ ಗಳಿಸಿದ ಸಂಪತ್ತು ಬಿಸಿಲು ಕುದುರೆಯಂತೆ. ಅದು ಅಲ್ಪಕಾಲ ಮಾತ್ರ ಇರುತ್ತದೆ. ಯಾರು ಪ್ರಾಮಾಣಿಕವಾಗಿ, ಕಷ್ಟಪಟ್ಟು ಮತ್ತು ಧರ್ಮದ ಹಾದಿಯಲ್ಲಿ ಹಣ ಗಳಿಸುತ್ತಾರೋ, ಅಂತಹವರ ಮನೆಯಲ್ಲಿ ಲಕ್ಷ್ಮಿ ದೇವಿ ಸ್ಥಿರವಾಗಿ ನೆಲೆಸುತ್ತಾಳೆ. ಅನ್ಯಾಯದ ಗಳಿಕೆ ಬೇಗನೆ ನಾಶವಾಗುತ್ತದೆ, ಆದರೆ ಸನ್ಮಾರ್ಗದ ಸಂಪತ್ತು ಗೌರವ ಮತ್ತು ನೆಮ್ಮದಿಯನ್ನು ತರುತ್ತದೆ.

ಯಾವ ಮನೆಯಲ್ಲಿ ಪತಿ-ಪತ್ನಿಯರು ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಬಾಳುತ್ತಾರೋ, ಅಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ. ಪ್ರತಿನಿತ್ಯ ಜಗಳ, ಅಶಾಂತಿ ಮತ್ತು ಹಿರಿಯರಿಗೆ ಅವಮಾನ ಮಾಡುವ ಮನೆಯಿಂದ ಲಕ್ಷ್ಮಿ ದೇವಿಯು ದೂರ ಸರಿಯುತ್ತಾಳೆ. ಮನೆಯಲ್ಲಿ ಶಾಂತಿ ಇದ್ದರೆ ಮಾತ್ರ ಐಶ್ವರ್ಯ ವೃದ್ಧಿಯಾಗುತ್ತದೆ.

ಅನ್ನವೇ ಪರಬ್ರಹ್ಮ. ಆಹಾರವನ್ನು ವ್ಯರ್ಥ ಮಾಡುವ ಮನೆಯಲ್ಲಿ ದಾರಿದ್ರ್ಯ ಬೇಗ ಆವರಿಸುತ್ತದೆ. ತಟ್ಟೆಯಲ್ಲಿ ಬೇಕಾದಷ್ಟು ಮಾತ್ರ ಬಡಿಸಿಕೊಳ್ಳುವುದು ಮತ್ತು ಒಂದು ಅಗುಳು ಅನ್ನವನ್ನೂ ಚೆಲ್ಲದೆ ಇರುವುದು ಲಕ್ಷ್ಮಿಗೆ ನೀಡುವ ನಿಜವಾದ ಗೌರವ. ಅನ್ನಪೂರ್ಣೆಯನ್ನು ಅವಮಾನಿಸಿದರೆ ಲಕ್ಷ್ಮಿಯ ಕೃಪೆ ಸಿಗುವುದು ಅಸಾಧ್ಯ.

ವಿದ್ವಾಂಸರು, ಗುರುಗಳು ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕಾರ ಎಲ್ಲಿದೆಯೋ ಅಲ್ಲಿ ಪ್ರಗತಿ ಇರುತ್ತದೆ. ಅಹಂಕಾರವನ್ನು ಬಿಟ್ಟು ವಿನಯದಿಂದ ವರ್ತಿಸುವವರು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಸಕಾರಾತ್ಮಕ ಶಕ್ತಿ ಇರುವ ಸ್ಥಳದಲ್ಲಿ ಸಂಪತ್ತು ತಾನಾಗಿಯೇ ಹುಡುಕಿಕೊಂಡು ಬರುತ್ತದೆ.

Source link
Chanakya Niti: ಈ 4 ಗುಣ ಇರುವ ವ್ಯಕ್ತಿಗೆ ಖಂಡಿತ ಒಲಿಯುತ್ತಾಳೆ ಲಕ್ಷ್ಮಿ ದೇವಿ!